CONNECT WITH US  

"ಕೆಜಿಎಫ್' ಐಟಂ ಸಾಂಗ್: ತಮನ್ನಾ ಜಾಗಕ್ಕೆ ಮೋನಿ ರಾಯ್

ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ "ಕೆಜಿಎಫ್' ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಕನ್ನಡ ಸಿನಿಮಾರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಲು ಮುಂದಾಗಿದೆ. ಈಗಾಗಲೇ ಚಿತ್ರತಂಡದಿಂದ ಪ್ರಮೋಷನ್ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಇದರ ಮಧ್ಯೆಯೇ "ಕೆಜಿಎಫ್'​ ಕುರಿತು ಹೊಸ ಸುದ್ದಿಯೊಂದು ಹೊರ ಬಿದ್ದಿದೆ. 

ಹೌದು, "ಕೆಜಿಎಫ್' ಹಿಂದಿ ವರ್ಷನ್​ ಚಿತ್ರಕ್ಕಾಗಿ ರೆಟ್ರೋ ಸಾಂಗ್‍ವೊಂದನ್ನು ಶೂಟ್ ಮಾಡಲಾಗುತ್ತಿದೆ. ಈಗಾಗಲೇ ಕನ್ನಡ ವರ್ಷನ್ ಚಿತ್ರಕ್ಕಾಗಿ ಸಿದ್ಧವಾಗಿರುವ "ಜೋಕೆ ನಾನು ಬಳ್ಳಿಯ ಮಿಂಚು' ಹಾಡಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ್ದರು. ಈಗ ಹಿಂದಿಯ ಹಾಡಿಗೆ ನಟಿ ಮೋನಿ ರಾಯ್ ರಾಕಿಂಗ್​ ಸ್ಟಾರ್ ಜತೆ ಹೆಜ್ಜೆ ಹಾಕಲಿದ್ದಾರೆ. 

ಇನ್ನು ಜಾಕಿಶ್ರಾಫ್​ ಹಾಗೂ ಸಂಗೀತಾ ಬಿಜ್ಲಾನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ (1989) ತ್ರಿದೇವ ಚಿತ್ರದಲ್ಲಿಯ ಗಲ್ಲಿ ಗಲ್ಲಿ ಮೇ ಫಿರ್ತಾ ಹೈ ಸಾಂಗ್​ನ್ನು "ಕೆಜಿಎಫ್​'ಗಾಗಿ ರಿಕ್ರಿಯೇಟ್ ಮಾಡಲಾಗುತ್ತಿದೆ. ಡಿಸೆಂಬರ್ 7 ಮತ್ತು 8 ಗೋರೆಗಾಂವ್ ಸ್ಟುಡಿಯೋದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ. "ಕೆಜಿಎಫ್' ಸಿನಿಮಾ ಈಗಾಗಲೇ ಎರಡು ಟ್ರೈಲರ್ ಮತ್ತು ಒಂದು ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅಲ್ಲದೇ ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಇದೇ ತಿಂಗಳು 21 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.


Trending videos

Back to Top