ವಿಚಿತ್ರ ಶೀರ್ಷಿಕೆಯ ಕಾಸುರ
Team Udayavani, Dec 18, 2018, 11:27 AM IST
ಕೆಲವೊಂದು ಚಿತ್ರಗಳು ತಮ್ಮ ಕಥೆ, ಕಲಾವಿದರ ತಾರಾಗಣದ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಚಿತ್ರಗಳು ತಮ್ಮ ಶೀರ್ಷಿಕೆಯ ಮೂಲಕವೇ ಒಂದಷ್ಟು ಸುದ್ದಿ ಮಾಡುತ್ತವೆ. ಅದರಲ್ಲೂ ಇತ್ತೀಚೆಗೆ ತಮ್ಮ ಚಿತ್ರಗಳಿಗೆ ವಿಚಿತ್ರ ಶೀರ್ಷಿಕೆಯನ್ನು ಸುದ್ದಿ ಮಾಡುವವರ ಸಂಖ್ಯೆ ಕೂಡ ದೊಡ್ಡದಾಗುತ್ತಿದೆ. ಆ ಸಾಲಿಗೆ ಈಗ “ಕಾಸುರ’ ಎನ್ನುವ ಮತ್ತೂಂದು ಚಿತ್ರ ಸೇರ್ಪಡೆಯಾಗುತ್ತಿದೆ.
ಫ್ರೆಂಡ್ಸ್ ಪೊ›ಡಕ್ಷನ್ಸ್ ಬ್ಯಾನರ್ನಲ್ಲಿ ಶ್ರೀ ಮತ್ತು ಎಸ್.ಆರ್.ಜೆ ನಿರ್ಮಿಸುತ್ತಿರುವ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಕ್ಕೆ “ಕಾಸುರ’ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಇತ್ತೀಚೆಗೆ ಈ ಚಿತ್ರ ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಬೆಂಗಳೂರು ಮತ್ತು ಚೆನ್ನೈ ಸುತ್ತಮುತ್ತ ಸುಮಾರು 40 ದಿವಸಗಳ ಕಾಲ “ಕಾಸುರ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ಶ್ರೀ ಕಥೆ ಬರೆದು ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಅಂಗನಾ ಆರ್ಯ, ಕವಿತಾ ರಾಧಾಶ್ಯಾಮ್, ಅವಿನಾಶ್, ಶ್ರೀನಿವಾಸನ್, ಕೃಪಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿನೋದ್ ಸಂಭಾಷಣೆ, ಪರಂಧಾಗನ್ ಛಾಯಾಗ್ರಹಣ, ಭುವನೇಶ್ ಮಣಿವಣ್ಣನ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರಣವ್ ಗಿರಿಧರನ್ ಸಂಗೀತ ಸಂಯೋಜನೆಯಿದ್ದು, ಚಿತ್ರವನ್ನು ಜಿತ್ತ ಮೋಹನ್ ನಿರ್ದೇಶಿಸುತ್ತಿದ್ದಾರೆ.