2019 ಸಿನಿಮಂದಿ ಕಣ್ತುಂಬ ಕಲರ್‌ಫ‌ುಲ್‌ ಕನಸು


Team Udayavani, Jan 1, 2019, 5:43 AM IST

2019-cini.jpg

ಹೊಸ ವರ್ಷ ಆರಂಭವಾಗಿದೆ. ಪ್ರತಿಯೊಬ್ಬರು ಹೊಸ ವರ್ಷದಲ್ಲಿ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಕಳೆದ ವರ್ಷದಲ್ಲಿ ಆಗದ್ದನ್ನು ಹೊಸ ವರ್ಷದಲ್ಲಿ ಸಾಧಿಸಬೇಕೆಂದು ಕೊಳ್ಳುತ್ತಾರೆ. ಜೊತೆಗೆ ಹೊಸ ವರ್ಷದಲ್ಲಿ ಹೊಸ ನಿರ್ಧಾರವನ್ನು ಕೈಗೊಳ್ಳುವ ಮಂದಿ ಅನೇಕರಿದ್ದಾರೆ. ಅದರಲ್ಲೂ ಚಿತ್ರರಂಗದ ಮಂದಿಗೆ ಹೊಸ ವರ್ಷವೆಂದರೆ ಹೊಸ ಭರವಸೆ. ಇಷ್ಟು ವರ್ಷಗಳಲ್ಲಿ ಸಿಗದಂತಹ ಅದ್ಭುತ ಪಾತ್ರ, ದೊಡ್ಡ ಯಶಸ್ಸು, ಹೊಸ ಆಯಾಮಕ್ಕೆ ತೆರೆದುಕೊಳ್ಳುವ ಮನಸ್ಸು …. ಹೀಗೆ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಹಾಗೆ ಹೊಸ ವರ್ಷದ ನಿರೀಕ್ಷೆಗಳ ನಟ-ನಟಿಯರು ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ …

ಪ್ರತಿಯೊಬ್ಬರು ವರ್ಷವೂ ಒಳ್ಳೆಯ ಸಿನಿಮಾ ಕೊಡಬೇಕೆಂಬ ಉದ್ದೇಶವನ್ನೇ ಹೊಂದಿರುತ್ತೇನೆ ಮತ್ತು ಆ ನಿಟ್ಟಿನಲ್ಲೇ ಕೆಲಸ ಮಾಡುತ್ತೇನೆ. ಈ ವರ್ಷವೂ ಅದೇ ಮುಂದುವರೆದಿದೆ. ಹಾಗೆ ನೋಡಿದರೆ ನಾನು 2018ರಲ್ಲಿ ಅಂದುಕೊಂಡಿದ್ದು ನಡೆಯಲಿಲ್ಲ. ಮೂರು ಸಿನಿಮಾವಾದರೂ ಬಿಡುಗಡೆಯಾಬೇಕೆಂದುಕೊಂಡಿದ್ದೆ. ಆದರೆ, ಬಿಡುಗಡೆಯಾಗಿದ್ದು ಕೇವಲ ಒಂದು ಮಾತ್ರ. ಈ ವರ್ಷ ಮೂರು ಸಿನಿಮಾ ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದಿಷ್ಟು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದೇನೆ. ಹೊಸ ತರಹದ ಪಾತ್ರಗಳಿಗೆ ಮೊದಲ ಆದ್ಯತೆ
-ಗಣೇಶ್‌, ನಟ

ಹಾಗೆ ಮಾಡಬೇಕು, ಹೀಗೆ ಮಾಡಬೇಕೆಂದು ನಾನು ಪ್ಲ್ರಾನ್‌ ಮಾಡಿಕೊಳ್ಳುವುದಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತೇನೆ. ಎಲ್ಲಾ ವರ್ಷದಿಂದ ಈ ವರ್ಷವೂ ಸಿನಿಮಾ ಕೆಲಸದಲ್ಲಿ ತೊಡಗುವುದಷ್ಟೇ ನನ್ನ ಉದ್ದೇಶ. ಹೊಸ ಕಥೆಗಳೊಂದಿಗೆ ಅಭಿಮಾನಿಗಳನ್ನು ಖುಷಿಪಡಿಸುವುದಷ್ಟೇ ನನ್ನ ಉದ್ದೇಶ. 
-ದರ್ಶನ್‌

ಹೊಸ ವರ್ಷದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಬೇಕು, ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕೆಂಬುದಷ್ಟೇ ನನ್ನ ಉದ್ದೇಶ. ಈ ವರ್ಷಾರಂಭದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದಿಷ್ಟು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸ ವರ್ಷದಲ್ಲಿ ಅದು ಡಬಲ್‌ ಆಗಬೇಕೆಂಬ ಆಸೆ ಇದೆ. ಆರು ಸಿನಿಮಾ ರಿಲೀಸ್‌ ಆಗಬೇಕು. ಆರು ಸಿನಿಮಾ ಶೂಟಿಂಗ್‌ ಮಾಡುತ್ತಿರಬೇಕು. 2018ರಲ್ಲಿ ನಾನು ಏನೂ ಅಂದುಕೊಂಡಿಲ್ಲ. ಆದರೆ ಎಲ್ಲಾ ಆಗಿದೆ. ನಿರೀಕ್ಷೆ ಮಾಡದಿರುವುದೆಲ್ಲವೂ ನಡೆದುಹೋಗಿದೆ. ಅದು ಖುಷಿಕೊಟ್ಟಿದೆ. ಸಿನಿಮಾ ಬಿಟ್ಟು ಬೇರೆ ಯಾವುದೇ ವಿಚಾರ ನನ್ನ ತಲೆಯಲ್ಲಿ ಇಲ್ಲ. 
-ರಚಿತಾ ರಾಮ್‌, ನಟಿ

ಈ ವರ್ಷ ನಾನು ನಟಿಸಿದ ಹಲವು ಚಿತ್ರಗಳು ಬಿಡುಗಡೆಯಾಗುತ್ತಿದೆ. ಅವೆಲ್ಲವೂ ಬೇರೆ ಬೇರೆ ಜಾನರ್‌ನ ಸಿನಿಮಾ ಎಂಬುದು ಖುಷಿಯ ವಿಚಾರ.  ನಾನು ಮಾಡಿರುವ  ಪಾತ್ರಗಳು ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಆ ನಿರೀಕ್ಷೆಯಲ್ಲಿ ಹೊಸ ವರ್ಷದ ನೋಡುತ್ತಿದ್ದೇನೆ. ಅದು ಬಿಟ್ಟರೆ ಬರವಣಿಗೆ ಆರಂಭಿಸಿದ್ದೇನೆ. ಅದನ್ನು ಇನ್ನಷ್ಟು ಕರಗತ ಮಾಡಿಕೊಳ್ಳಬೇಕು. ಅದು ನನ್ನನ್ನು ಯಾವ ಕಡೆ ಕರೆದುಕೊಂಡು ಹೋಗುತ್ತೋ ಗೊತ್ತಿಲ್ಲ. 2018ರಲ್ಲಿ ಯಾವುದನ್ನೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಅದರ ಪಾಡಿಗೆ ಬಂತು. ಅನೇಕ ಒಳ್ಳೆಯ ಪಾತ್ರಗಳು ಸಿಕ್ಕವು. ಈ ವರ್ಷವೂ ಖುಷಿ ಖುಷಿಯಾಗಿ ಸಾಗುತ್ತದೆ ಎಂಬ ನಿರೀಕ್ಷೆ ಇದೆ. 
-ಹರಿಪ್ರಿಯಾ,ನಟಿ
 
ಸಿನಿಮಾ, ಒಳ್ಳೆ ಊಟ, ಹಾಡುಗಳಿಗೆ ನನ್ನ ಮೊದಲ ಆದ್ಯತೆ. ಹೊಸ ವರ್ಷದಲ್ಲಿ ನನ್ನ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ಸಿನಿಮಾಗಳ ಪಾತ್ರಗಳು ಭಿನ್ನವಾಗಿವೆ. ನಾನಾಗಿ ಯಾವುದನ್ನೂ ಪ್ಲ್ರಾನ್‌ ಮಾಡಿಲ್ಲ. ಆ ದೇವರೇ ನನಗಾಗಿ ಒಂದು ಒಳ್ಳೆಯ ಪ್ಲ್ರಾನ್‌ ಮಾಡಿರುತ್ತಾರೆ. ಅದರೊಂದಿಗೆ ಸಾಗುತ್ತೇನೆ. ಹೊಸ ವರ್ಷದಲ್ಲಿ ಬರವಣಿಗೆ ಆರಂಭಿಸಬೇಕೆಂದುಕೊಂಡಿದ್ದೇನೆ. ಬರವಣಿಗೆ ಮಾಡುತ್ತಿದ್ದೆ. ಈಗಾಗಲೇ ಎರಡು ಸ್ಕ್ರಿಪ್ಟ್ ಮಾಡಿಟ್ಟಿದ್ದೇನೆ. ಈಗ ಮತ್ತೆ ಬರವಣಿಗೆ ಆರಂಭಿಸಬೇಕೆಂದಿದ್ದೇನೆ.
-ಮಾನ್ವಿತಾ

ಎಲ್ಲಾ ರಾಜ್ಯಗಳಲ್ಲೂ 2000ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ನಮ್ಮ ರಾಜ್ಯದಲ್ಲೂ  ಹೊಸ ವರ್ಷದಲ್ಲಾದರೂ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಲಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದೇ ನನ್ನ ಹೊಸ ವರ್ಷದ ಆಸೆ, ಕನಸು.
-ಯೋಗರಾಜ್‌ ಭಟ್‌

ನನಗೆ ಪ್ರತಿದಿನವೂ ಹೊಸ ವರ್ಷ. ಬೆಳಗ್ಗೆ ಎದ್ದ ಕೂಡಲೇ ಅದು ನನಗೆ ಹೊಸ ವರ್ಷ. ಹಾಗಾಗಿ, ಕನಸುಗಳು ನಿರಂತರ.
-ಸೂರಿ

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.