CONNECT WITH US  

ನಾವು ದೇವರಲ್ಲ! ಹೆತ್ತವರಿಗಾಗಿ ಬದುಕಿ- ಜಗ್ಗೇಶ್ 

ಫ್ಯಾನ್ಸ್ ಗೆ ಬುದ್ದಿ ಹೇಳಿದ ನವರಸ ನಾಯಕ

ಬೆಂಗಳೂರು: 'ನಾವು ಕಲಾವಿದರು. ನಿಮ್ಮನ್ನು ರಂಜಿಸಲು ಮಾತ್ರ ಸಮರ್ಥರು. ದೇವರಲ್ಲಾ! ನಿಮ್ಮ ತಂದೆ ತಾಯಿ ಬಂಧುಗಳ ಪ್ರೀತಿ ಸ್ಥಾನ ತುಂಬುವ ಶಕ್ತಿ ಕಲೆಗಿಲ್ಲ. ದಯಮಾಡಿ ಹೆತ್ತವರಿಗಾಗಿ ಬದುಕಿ ಬಾಳಿ.  ಕಲಾವಿದರ ಮೇಲೆ ಅಭಿಮಾನ ಇರಲಿ.  ಆತ್ಮಹತ್ಯೆಯಂತಹ ಬಾಲಿಶನಡೆ ಯಾಕೆ ?' ಹೀಗಂತ ಹೇಳಿದವರು ನವರಸ ನಾಯಕ ಜಗ್ಗೇಶ್. 

ರಾಕಿಂಗ್ ಸ್ಟಾರ್ ಯಶ್ ತನ್ನ ಹುಟ್ಟುಹಬ್ಬದ  ದಿನ ಯಶ್‌ ಮನೆ ಎದುರು ಅಭಿಮಾನಿಯೊಬ್ಬ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. 


ಪ್ರತಿ ಮನುಜರ ಹೆತ್ತೊಡಲು ನಮ್ಮ ಮಕ್ಕಳು ಬೆಳೆದು ದೊಡ್ಡವರಾಗಿ ವಯಸ್ಸಾದಾಗ ಊರುಗೋಲಾಗುತ್ತಾರೆ ಎಂದು ಕನಸು ಕಂಡಿರುತ್ತಾರೆ. ಅವರ ಆಸೆ ನೆರವೇರಿಸುವ ಮಕ್ಕಳಾದರೆ ಜನ್ಮ ಸಾರ್ಥಕ. ಅದಬಿಟ್ಟು ಮಾಯಾಲೋಕದ ದೊರದ ಬೆಟ್ಟದ ಆಸೆಗೆ ಜೀವನ ಹಾಳಾಗುವುದು ಬೇಡ. ನಮಗೆ ಚಪ್ಪಾಳೆ ಇರಲಿ. ತಂದೆ ತಾಯಿ ವಂಶಕ್ಕೆ ನಿಮ್ಮ ಕಾಳಜಿ ಕರ್ತವ್ಯ ಇರಲಿ. ತಂದೆ ತಾತನಾಗಿ ಸಣ್ಣಹಿತವಚನ ಎಂದು ಜಗ್ಗೇಶ್  ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. 

ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಮುಂದುವರಿದು, 'ಮನುಷ್ಯ ಜನ್ಮ ಶ್ರೇಷ್ಠ ಜನ್ಮ. ವಿಶ್ವಕ್ಕೆ ಬುದ್ಧಿ ಹೇಳುವ ಶಕ್ತಿ ಸಂಪಾದಿಸೋ ಜ್ಞಾನ  ದೇವರು ನಮಗೆ ನೀಡಿದ್ದಾನೆ.  ನಾವು ಚೆನ್ನಾಗಿದ್ದರೆ ದುನಿಯಾ. ನಮ್ಮ ಬಳಿ ಹಣವಿದ್ದರೆ ನೆಂಟರು ನಾವು ಸಾಧಿಸಿದರೆ ಹೂ ಮಾಲೆ ನಾವು ಸತ್ತರೆ ಮೂರು ದಿನಕ್ಕೆ ಮರೆಯುತ್ತೆ ಸಮಾಜ. ನಿಮಗಾಗಿ ಬಾಳಿ. ನಿಮ್ಮ ಸಂತೋಷಕ್ಕಾಗಿ ಜೀವಿಸಿ. ಸಮಾಜ ನಿಮ್ಮ ನೆನೆಯುವಂತೆ ಮುದ್ರೆ ಒತ್ತಿ' ಎಂದಿದ್ಧಾರೆ. 

Trending videos

Back to Top