CONNECT WITH US  

ಗಿಣಿ ಹೇಳಿದ ಕಥೆಯಲ್ಲಿರೋದು ಜನಸಾಮಾನ್ಯರ ಹೀರೋ!

ಗಿಣಿ ಹೇಳಿದ ಕಥೆ ಕೇಳೋ ಸಮಯ ಹತ್ತಿರ ಬಂದಿದೆ. ಇನ್ನೇನು ಈ ಚಿತ್ರ ಬಿಡುಗಡೆಯಾಗಲು ಕ್ಷಣಗಣನೆ ಆರಂಭವಾಗುತ್ತಲೇ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳೂ ಜಾಹೀರಾಗುತ್ತಿವೆ. ಅದರ ಪ್ರಕಾರವಾಗಿ ನೋಡ ಹೋದರೆ, ಈ ಸಿನಿಮಾ ಹೀರೋ ಪಾತ್ರವೂ ಕೂಡಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಹೀರೋ ಅಂದ ಮೇಲೆ ಬಿಲ್ಡಪ್ಪು ಇರಲೇಬೇಕೆಂಬ ರೂಢಿಯಿದೆ. ನಾಯಕ ನೆಟಿಗೆ ಮುರಿದರೂ ಸೆನ್ಸೇಷನಲ್ ಸೀನು ಕ್ರಿಯೇಟ್ ಮಾಡುವಂಥಾ ಪರಿಪಾಠವೂ ಇದೆ. ಒಟ್ಟಾರೆಯಾಗಿ ಹೀರೋಗಿರಿ ಅನ್ನೋದು ಜನಸಾಮಾನ್ಯರ ಪಾಲಿಗೆ ದೂರದಲ್ಲೆಲ್ಲೋ ಮಿನುಗಿ ಮರೆಯಾಗೋ ಮಾಯಾ ದಂಡದಂಥಾದ್ದು. ಆದರೆ ಈ ಚಿತ್ರದ ಹೀರೋ ಮಾತ್ರ ಅದಕ್ಕೆ ತದ್ವಿರುದ್ಧ.

ಇಲ್ಲಿ ಹೀರೋಗೆ ಇಂಥಾ ಯಾವ ಬಿಲ್ಡಪ್ಪುಗಳೂ ಇಲ್ಲ. ಅದನ್ನು ಕಥೆಯೇ ಆಯಾ ಕಾಲಕ್ಕೆ ಬೇಕಾಗುವಷ್ಟನ್ನು ಕೊಡುತ್ತದೆ. ಇಲ್ಲಿನ ನಾಯಕ ಜನಸಾಮಾನ್ಯರಿಗೆ ಹತ್ತಿರಾಗುವವನು. ಸೀದಾಸಾದಾ ಗುಣಲಕ್ಷಣದ ಈ ಪಾತ್ರಕ್ಕೆ ನಾನಾ ಬಣ್ಣಗಳಿವೆಯಂತೆ. ದೇವ್ ರಂಗಭೂಮಿ ತಮ್ಮ ನಾಟಕ ಸಾಂಗತ್ಯದಿಂದ ಕಲಿತ ನಟನಾ ಕಲೆಯನ್ನೆಲ್ಲ ಧಾರೆ ಎರೆದು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂದಹಾಗೆ ಕೇವಲ ನಾಯಕನ ಪಾತ್ರ ಮಾತ್ರವಲ್ಲ, ಇಡೀ ಚಿತ್ರದ ಒಂದೊಂದು ಪಾತ್ರಗಳೂ ಕೂಡಾ ಭಿನ್ನವಾಗಿವೆ.

Trending videos

Back to Top