ಡ್ರಾಮಾ ಜೂನಿಯರ್ಸ್ ಶೋನಲ್ಲಿ “ರಿಯಲ್‌ ಸ್ಟಾರ್‌’ ಗೌರವ


Team Udayavani, Jan 11, 2019, 6:10 AM IST

drama-juniors-42.jpg

ಗೌರವ  ಸದ್ಯ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ “ಡ್ರಾಮಾ ಜ್ಯೂನಿಯರ್’ನ 3ನೇ ಆವೃತ್ತಿ ಸಾಕಷ್ಟು ವಿಶೇಷವಾದ ಪ್ರಯೋಗಗಳಿಗೆ ನಾಂದಿ ಹಾಡಿದೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಬೋಧನೆಯನ್ನು ಮಾಡುವ ವಿಶೇಷ ಪ್ರಯೋಗಕ್ಕೆ ಮುಂದಾಗಿರುವ ಜೀ ಕನ್ನಡ ವಾಹಿನಿ, “ಡ್ರಾಮಾ ಜ್ಯೂನಿಯರ್ ಸೀಜನ್‌-3′ ರಲ್ಲಿ ಒಂದನೆ ತರಗತಿಯಿಂದ ಹತ್ತನೆ ತರಗತಿವರೆಗಿನ ಪಠ್ಯಪುಸ್ತಕದಲ್ಲಿನ ಆಯ್ದ ಪಾಠಗಳನ್ನು ಮಕ್ಕಳ ನಾಟಕ ರೂಪದಲ್ಲಿ ತೆರೆಮೇಲೆ ಪ್ರಸ್ತುತಪಡಿಸುತ್ತಿದೆ.

ಇದು ಮಕ್ಕಳ ಕಲಿಕೆಗೂ ಸಹಕಾರಿಯಾಗಿದ್ದು, ಪೋಷಕರಿಂದ, ವೀಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ತಮ್ಮ ಜೀವನವನ್ನ ಇತರರಿಗಾಗಿ ಮುಡಿಪಾಗಿಟ್ಟು ಸಾಮಾನ್ಯರೊಡನೆ, ಸಾಮಾನ್ಯರಂತೆ ಬದುಕುತ್ತಿರುವ ಅಸಾಮಾನ್ಯ ಸಾಧಕರನ್ನು ವೇದಿಕೆಗೆ ಕರೆಸಿ ಅವರನ್ನು “ರಿಯಲ್‌ ಸ್ಟಾರ್‌’ ಎಂದು ಗೌರಸುವ ಕೆಲಸ ಮಾಡುತ್ತಿದೆ. ಜೊತೆಗೆ ಅವರ ಜೀವನಕಥೆಯನ್ನ ನಾಟಕವನ್ನಾಗಿ ಸಿದ್ಧಪಡಿಸಿ, ಅವರ ಮುಂದೆಯೇ ಮಕ್ಕಳಿಂದ ಆಡಿ ತೋರಿಸಲಾಗುತ್ತಿದೆ.

ಈ ವಾರ ಸೈಯದ್‌ ಸಲ್ಲಾವುದ್ದೀನ್‌ ಪಾಷಾ ಎಂಬ ಮತ್ತೂಬ್ಬ ಸಾಧಕರನ್ನು ಕರೆಸಿ ವಾರದ “ರಿಯಲ್‌ ಸ್ಟಾರ್‌’ ಬಿರುದು ನೀಡಿ ಗೌರಸುತ್ತಿದೆ. ಸೈಯದ್‌ ಸಲ್ಲಾವುದ್ದೀನ್‌ ಪಾಷಾ ಅವರ ಮುತ್ತಾತ ಮೈಸೂರು ಮಹಾರಾಜರ ಆಸ್ಥಾನದಲ್ಲಿ ನಾಟಿ ವೈದ್ಯರಾಗಿದ್ದವರು. ಜೊತೆಗೆ ವಿಶೇಷ ಚೇತನ ಮಕ್ಕಳಿಗೆ ನಾಟಿ ಔಷಧ ನೀಡುತ್ತಿದ್ದರು, ತಾತನೊಡನೆ ಸೇರಿ ವಿಶೇಷ ಚೇತನ ಮಕ್ಕಳಿಗೆ ಔಷಧ ನೀಡುತ್ತಿದ್ದ ಸಲ್ಲಾವುದ್ದೀನ್‌ರಿಗೆ ಅಂಥ ಮಕ್ಕಳ ಮೇಲೆ ವಿಶೇಷ ಒಲವು ಬೆಳೆಯಿತು.

ಬಾಲ್ಯದಲ್ಲೆ ನೃತ್ಯ, ನಾಟಕಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಸಲ್ಲಾವುದ್ದೀನ್‌, ಹಲವಾರು ಸಾಂಸ್ಕೃತಿಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಭಗವದ್ಗೀತೆಯನ್ನು ಅಧ್ಯಯನ ಮಾಡಿರುವ ಸಲ್ಲಾವುದ್ದೀನ್‌ ಅದರ ಶ್ಲೋಕಗಳು, ಬಸವಣ್ಣನವರ ವಚನಗಳು ಪಂಡಿತರೂ ನಾಚುವಂತೆ ಉತ್ಛರಿಸುತ್ತಾರೆ. ತಾವು ಕಲಿತ ಕಲೆಯನ್ನು ವಿಶೇಷ ಚೇತನ ಮಕ್ಕಳಿಗೆ ಧಾರೆ ಎರೆದು ಅವರಿಂದ ವೀಲ್‌ಚೇರ್‌ ಮೇಲೆ ರಾಮಾಯಣ, ಮಹಾಭಾರತದಂತಹ ಮಹಾ ಕಾವ್ಯಗಳನ್ನು, ಭರತನಾಟ್ಯ, ಕಥಕ್‌ನಂತಹ ನೃತ್ಯ ರೂಪಕಗಳ ಮೂಲಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. 

ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ವಾರದ “ಡ್ರಾಮಾ ಜೂನಿಯರ್’ ಕಾರ್ಯಕ್ರಮದಲ್ಲಿ 4 ಕಾಮಿಡಿ ಡ್ರಾಮಾಗಳ ಜೊತೆಗೆ ಸೈಯ್ಯದ್‌ ಸಲ್ಲಾವುದ್ದೀನ್‌ ಪಾಷಾರವರ ಜೀವನದ ಕಥೆಯನ್ನ ಡ್ರಾಮಾ ಜ್ಯೂನಿಯರ್ ಮಕ್ಕಳು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮ ಇದೇ ಜ. 12 ಮತ್ತು 13ರ ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.    

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.