CONNECT WITH US  

ಪುನೀತ್‌ ನಿರ್ಮಾಣದ ಚಿತ್ರ ಶುರು

ಪುನೀತ್‌ ರಾಜಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದ್ದು, ಇನ್ನೂ ಹೆಸರಿಡದ ಈ ಚಿತ್ರವನ್ನು ಪನ್ನಗಾಭರಣ ನಿರ್ದೇಶಿಸುತ್ತಿದ್ದಾರೆ. ಹಂಬಲ್‌ ಪೊಲಿಟೀಷಿಯನ್‌ ನೊಗರಾಜ್‌ ಖ್ಯಾತಿಯ ಡ್ಯಾನೀಶ್‌ ಸೇಠ್ ನಾಯಕ ನಟನಾಗಿರುವ ಈ ಚಿತ್ರದಲ್ಲಿ ದಿಶಾ ಮದನ್‌, ಸಿಂಧೂ, ನಾಗಭೂಷಣ್‌, ಸ್ಯಾಲ್‌ ಯೂಸೆಫ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.  

ಮೊದಲ ಬಾರಿಗೆ ಭಾರತಕ್ಕೆ ಬರುವ ಫ್ರೆಂಚ್‌ ಪ್ರವಾಸಿಗನೊಬ್ಬನಿಗೆ ಆಟೋ ಡ್ರೈವರ್‌ ಒಬ್ಬ ಪರಿಚಯವಾಗುತ್ತಾನೆ. ಫ್ರೆಂಚ್‌ ಪ್ರಜೆ ಮತ್ತು ಆಟೋ ಡ್ರೈವರ್‌ ನಡುವೆ ಮೂರು ದಿನಗಳಲ್ಲಿ ನಡೆಯುವ ಚಿತ್ರದ ಕಥೆ  ಡಾರ್ಕ್‌ ಕಾಮಿಡಿ ಶೈಲಿಯಲ್ಲಿ ತೆರೆಗೆ ಬರುತ್ತಿದೆ. ಸುಮಾರು 45 ದಿನಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ ಈ ಚಿತ್ರದಲ್ಲಿ ಡ್ಯಾನಿಶ್‌ ಸೇಠ್ ಆಟೋ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. 

ಇನ್ನು ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಚಿತ್ರದ ಸೆಟ್‌ಗೆ ಭೇಟಿ ನೀಡಿದ್ದ ಪುನೀತ್‌ ರಾಜಕುಮಾರ್‌ ಚಿತ್ರತಂಡವನ್ನು ಹುರಿದುಂಬಿಸಿದ್ದಾರೆ. ಪುನೀತ್‌ ರಾಜಕುಮಾರ್‌ ಅವರ ಈ ಭೇಟಿ ಪುನೀತ್‌ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲು ಕಾರಣವಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪನ್ನಗಾಭರಣ, ಪುನೀತ್‌ ರಾಜಕುಮಾರ್‌ ಅವರ ಪಾತ್ರ ಎಂದರೆ ಅದಕ್ಕೆ ಅದರದ್ದೇ ಆದ ಮಹತ್ವವಿರಬೇಕು. ಆದರೆ ಸದ್ಯ ಚಿತ್ರದ ಕಥೆಯಲ್ಲಿ ಪುನೀತ್‌ ರಾಜಕುಮಾರ್‌ ನಿರ್ವಹಿಸುವ ಯಾವುದೇ ಪಾತ್ರಗಳಿಲ್ಲ. ಹಾಗಾಗಿ ಅದರ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದಿದ್ದಾರೆ.  

Trending videos

Back to Top