2ಡಿ, 3ಡಿಯಲ್ಲಿ ಕೆಮಿಸ್ಟ್ರಿ ಕಥೆ
Team Udayavani, Jan 20, 2019, 6:02 AM IST
ಇತ್ತೀಚೆಗಷ್ಟೇ, “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ “ಊರ್ವಶಿ’ ಹಾಡು ಬಿಡುಗಡೆಯಾಗುವ ಮೂಲಕ ಮೆಚ್ಚುಗೆ ಪಡೆದಿತ್ತು. ಇದೀಗ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಡಾ.ಮಂಜುನಾಥ್ ನಿರ್ಮಾಣದ ಈ ಚಿತ್ರದ ಟೀಸರ್ 2 ಡಿ ಮತ್ತು 3ಡಿಯಲ್ಲಿ ಸಿದ್ಧಗೊಂಡಿದೆ. ಟೀಸರ್ಗಾಗಿಯೇ ಕೆಲ ದೃಶ್ಯಗಳನ್ನು ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ.
ಅಂದಹಾಗೆ, ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಂದನ್ ಆಚಾರ್, ಸಂಜನಾ ಆನಂದ್, ತಬಲನಾಣಿ ಹಾಗೂ ಅಪೂರ್ವ ಮುಂತಾದವರು 2ಡಿ ಮತ್ತು 3ಡಿ ಟೀಸರ್ನ ಹೈಲೈಟ್. ಇಲ್ಲಿ ಸಾಕಷ್ಟು ಹಾಸ್ಯ ದೃಶ್ಯಗಳಿದ್ದು, ಆ ಪೈಕಿ ಕೆಲವು ಮುಖ್ಯವಾದವುಗಳನ್ನು ಆಯ್ಕೆ ಮಾಡಿಕೊಂಡು ಟೀಸರ್ ಸಿದ್ಧಗೊಳಿಸಲಾಗಿದೆ.
ಅಂದಹಾಗೆ, ಆನಂದ್ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಚಂದನ್ ಆಚಾರ್ಗೆ ನಾಯಕಿ ಸಂಜನಾ ನಾಯಕಿ. ಉಳಿದಂತೆ ಚಿತ್ರದಲ್ಲಿ ಅಪೂರ್ವ, ಸುಚೇಂದ್ರ ಪ್ರಸಾದ್ ಡಾ.ಮಂಜುನಾಥ್, ಮೈಕೋ ನಾಗರಾಜ್, ರಾಕ್ಲೈನ್ ಸುಧಾಕರ್ ನಟಿಸಿದ್ದಾರೆ.
ಟೀಸರ್ ಬಳಿಕ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗುತ್ತಿದೆ. ಆರವ್ ರಿಶಿಕ್ ಸಂಗೀತವಿದ್ದು, ಸುಜಯ್ ಕುಮಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಿವಸೀನ ಛಾಯಾಗ್ರಹಣವಿದೆ. ವೆಂಕಿ ಸಂಕಲನ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ