CONNECT WITH US  

‘ಆನೆ ನಡ್ಡಿದ್ದೇ ದಾರಿ…!’ : ಬಂತು D Boss ‘ಯಜಮಾನ’ Trailer

1 ಗಂಟೆಯಲ್ಲಿ 4ಲಕ್ಷ ಪ್ಲಸ್ ವೀಕ್ಷಣೆಯ ದಾಖಲೆ

ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮೇರೆಮೀರುವ ಹೊತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಯಜಮಾನ’ದ ಜಬರ್ದಸ್ತ್ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಈಗಾಗಲೇ Trending ಆಗುತ್ತಿದೆ. ಬಿಡುಗಡೆಗೊಂಡ ಒಂದೂವರೆ ಗಂಟೆಗಳಲ್ಲಿ ಸುಮಾರು ನಾಲ್ಕು ಲಕ್ಷದ ಮುವತ್ತು ಸಾವಿರ ಜನ ‘ಯಜಮಾನ’ ಟ್ರೈಲರ್ ಅನ್ನು ವೀಕ್ಷಿಸಿದ್ದು, ಡಿ ಬಾಸ್ ಅಭಿಮಾನಿಗಳಿಂದ ತಮ್ಮ ನೆಚ್ಚಿನ ನಟನ ಹೊಸ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

‘ಆಕಾಶಕ್ಕೆ ತಲೆ ಕೊಟ್ಟು ಭೂಮಿಗೆ ಬೆವರಿಳ್ಸಿ ನಿಯತ್ತಿಂದ ಕಟ್ಟಿರೋ ಸ್ವಂತ ಬ್ರ್ಯಾಂಡೋ… ಸೌಂಡ್ ಜಾಸ್ತಿನೇ ಇರುತ್ತೆ..’ – ಡೈಲಾಗ್ ಅಂತೂ ಡಿ ಬಾಸ್ ಅಭಿಮಾನಿಗಳ ಹೊಸ ಮಂತ್ರ ಆಗುವುದರಲ್ಲಿ ಸಂಶಯವಿಲ್ಲ!

ಮೀಡಿಯಾ ಹೌಸ್ ಸ್ಟುಡಿಯೋ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಿಸಿದ್ದಾರೆ. ವಿ. ಹರಿಕೃಷ್ಣ ಮತ್ತು ಪಿ. ಕುಮಾರ್ ಅವರ ನಿರ್ದೇಶನದಲ್ಲಿ ‘ಯಜಮಾನ’ ಮೂಡಿಬಂದಿದೆ. ಶಶಿಧರ ಅಡಪ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಶ್ರೀಶ ಕುಡುವಳ್ಳಿ ಅವರ ಛಾಯಾಗ್ರಹಣ, ಹಾಗೂ ವಿ. ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿದೆ.

ಇನ್ನು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಅವರೊಂದಿಗೆ ಹೆಸರಾಂತ ತಾರೆಗಳ ಸಮೂಹವೇ ‘ಯಜಮಾನ’ದಲ್ಲಿದೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ದರ್ಶನ್ ಗೆ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ಥಾಕೂರ್ ಅನೂಪ್ ಸಿಂಗ್, ರವಿಶಂಕರ್, ಡಾಲಿ ಧನಂಜಯ, ಸಾಧುಕೋಕಿಲಾ, ದತ್ತಣ್ಣ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.


Trending videos

Back to Top