CONNECT WITH US  

ಯೂಟ್ಯೂಬ್ ನಂ.1 ಟ್ರೆಂಡಿಂಗ್‍ನಲ್ಲಿ "ಆದಿ ಲಕ್ಷ್ಮಿ ಪುರಾಣ': Watch

ಸ್ಯಾಂಡಲ್‍ವುಡ್‍ನ ಸಿಂಡ್ರೆಲಾ ರಾಧಿಕಾ ಪಂಡಿತ್ ಯಶ್ ಜೊತೆ ವಿವಾಹವಾದ ಬಳಿಕ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸುಮಾರು ಎರಡು ವರ್ಷದ ನಂತರ "ಆದಿ ಲಕ್ಷ್ಮಿ ಪುರಾಣ" ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.

ಹೌದು, "ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ - ರಾಧಿಕಾ ಅಭಿನಯದ "ಆದಿ ಲಕ್ಷ್ಮಿ ಪುರಾಣ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಬೊಂಬಾಟ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

ಚಿತ್ರದಲ್ಲಿ ನಿರೂಪ್ ಭಂಡಾರಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದು, ನಿರೂಪ್ ಹೃದಯ ಕದ್ದ ಚೋರಿಯಾಗಿ ರಾಧಿಕಾ ಪಂಡಿತ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಟೀಸರ್​ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಉಳಿದಂತೆ ನಿರೂಪ್ ತಾಯಿ ಪಾತ್ರದಲ್ಲಿ ಹಿರಿಯ ನಟಿ ತಾರಾ ಇದ್ದಾರೆ. ಹಾಗೇ ಸುಚೇಂತ್ರ ಪ್ರಸಾದ್, ವಿಶಾಲ್ ನಾಯರ್ ಹೀಗೆ ಹಲವರು ತಾರಾಗಣದಲ್ಲಿದ್ದಾರೆ.

ಇನ್ನು ರಾಕ್​ಲೈನ್ ವೆಂಕಟೇಶ್​ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಿಯಾ.ವಿ ಆ್ಯಕ್ಷನ್ ಕಟ್ ಹೇಳಿದ್ದು, ಪ್ರಶಾಂತ್ ರಾಜಪ್ಪ ಸಂಭಾಷಣೆ, ಅನೂಪ್ ಭಂಡಾರಿ ಸಂಗೀತ, ಪ್ರೀತಾ ಜಯರಾಮನ್ ಛಾಯಾಗ್ರಹಣ ಈ ಚಿತ್ರಕ್ಕಿದೆ.


Trending videos

Back to Top