CONNECT WITH US  

ಸಾಮಾಜಿಕ ಜಾಲತಾಣದಲ್ಲಿ ಪವರ್​ ಸ್ಟಾರ್ ಕಿಕ್​!

ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ​ "ನಟಸಾರ್ವಭೌಮ' ಚಿತ್ರ ದೇಶ, ವಿದೇಶಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದ್ದು, "ನಟಸಾರ್ವಭೌಮ'ನಿಗೆ ನಾಡಿನ ಜನ ಅದ್ಧೂರಿ ಸ್ವಾಗತ ಕೂಡ ನೀಡಿದ್ದಾರೆ. ಅಲ್ಲದೇ ಚಿತ್ರವೂ ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು, ಇದೇ ಖುಷಿಯಲ್ಲಿರೋ ಪುನೀತ್​ ರಾಜ್​ಕುಮಾರ್​​ ಸದ್ಯ ಜಿಮ್‍ನಲ್ಲಿ ದೇಹ ದಂಡಿಸುತ್ತಾ ರಿಲ್ಯಾಕ್ಸ್​ ಮೂಡ್‍ನಲ್ಲಿದ್ದಾರೆ.

ಮುಖ್ಯವಾಗಿ ಜಿಮ್ ಹಾಗೂ ಫೈಟಿಂಗ್​ನಲ್ಲಿ ತರಬೇತಿ ಹೊಂದಿರುವ ಅಪ್ಪು, ಇಂದಿಗೂ ಅಷ್ಟೇ ಪವರ್​ ಫುಲ್ಲಾಗಿ ಕಿಕ್​ ಬಾಕ್ಸಿಂಗ್​ನಲ್ಲೂ ಕೂಡ ಪರಿಣಿತರು. ಸದ್ಯ ಪುನೀತ್ ​ಕಿಕ್​ ಬಾಕ್ಸಿಂಗ್​ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ಸದ್ದು ಮಾಡುತ್ತಿದೆ.


ವಿಡಿಯೋ ನೋಡಲು ಕ್ಲಿಕ್ ಮಾಡಿ...


Trending videos

Back to Top