CONNECT WITH US  

ಡಬ್ಬಿಂಗ್‌ನಲ್ಲಿ "ಆಪರೇಷನ್‌ ನಕ್ಷತ್ರ'

ಹೊಸಬರೇ ಸೇರಿ ಮಾಡುತ್ತಿರುವ "ಆಪರೇಷನ್‌ ನಕ್ಷತ್ರ' ಚಿತ್ರ ಇದೀಗ ಡಬ್ಬಿಂಗ್‌ ಕಾರ್ಯದಲ್ಲಿ ನಿರತವಾಗಿದೆ. ಫೈವ್‌ಸ್ಟಾರ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮಧುಸೂದನ್‌ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಹಣ ಮತ್ತು ಆಸ್ತಿಯ ಹಿಂದೆ ಹೋದವರು ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ. ಇಲ್ಲಿ ಯಾರಿಗೆ ಯಾವುದು ದಕ್ಕುತ್ತದೆ ಎಂಬುದನ್ನು ಸಸ್ಪೆನ್ಸ್‌ ಅಂಶದೊಂದಿಗೆ ನಿರೂಪಿಸಲಾಗಿದೆ.

ಚಿತ್ರದಲ್ಲಿ ನಿರಂಜನ್‌ ಒಡೆಯರ್‌, ಯಜ್ಞಾಶೆಟ್ಟಿ, ಅದಿತಿ ಪ್ರಭುದೇವ್‌, ಲಿಖಿತ್‌ಸೂರ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರೆ, ಉಳಿದಂತೆ ದೀಪಕ್‌ರಾಜ್‌ ಶೆಟ್ಟಿ, ಶ್ರೀನಿವಾಸ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮೀ, ಅರವಿಂದೇಗೌಡ, ಶ್ರೀಜಾ, ಅರವಿಂದ್‌ಮೂರ್ತಿ, ಟಿ.ಎಸ್‌.ಭರತ್‌ ಇತರರು ನಟಿಸಿದ್ದಾರೆ.

ನಂದಕುಮಾರ್‌, ಅರವಿಂದ ಮೂರ್ತಿ, ರಾಧಕೃಷ್ಣ  ಮತ್ತು ಕಿಶೋರ್‌ ಮೇಗಳಮನೆ ಚಿತ್ರದ ನಿರ್ಮಾಣದಲ್ಲಿ ತೊಡಗಿದ್ದಾರೆ.  ಚಿತ್ರದ ಎರಡು ಹಾಡುಗಳಿಗೆ ವೀರ್‌ಸಮರ್ಥ್ ಸಂಗೀತ ನೀಡಿದ್ದಾರೆ. ಶಿವಸೀನ ಛಾಯಾಗ್ರಹಣವಿದೆ. ಅರ್ಜುನ್‌ಕಿಟ್ಟು ಅವರ ಸಂಕಲನವಿದೆ. ಕಿಶೋರ್‌ವೆುàಗಳಮನೆ ಮತ್ತು ಮಧುಸೂದನ್‌ ಸಂಭಾಷಣೆ ಬರೆದಿದ್ದಾರೆ. ಕಂಬಿರಾಜು ನೃತ್ಯ ನಿರ್ದೇಶನವಿದೆ.


Trending videos

Back to Top