ಕಣ್ಣಿಗೆ “ಮಜ್ಜಿಗೆ ಹುಳಿ’ ರುಚಿ

Team Udayavani, Feb 12, 2019, 5:46 AM IST

majjige-huli228.jpg

ಇಲ್ಲಿಯವರೆಗೆ ಊಟದ ಮೆನು ಲೀಸ್ಟ್‌ನಲ್ಲಿ ಕಾಣುತ್ತಿದ್ದ “ಮಜ್ಜಿಗೆ ಹುಳಿ’ ಹೆಸರು ಈಗ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಹೌದು, “ಮಜ್ಜಿಗೆ ಹುಳಿ’ ಚಿತ್ರದ ಶೀರ್ಷಿಕೆಗೆ “ಒಳ್ಳೆಯ ಬಾಡೂಟ ಗುರು’ ಎಂಬ ಅಡಿಬರಹವಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್‌ ಕಾಮಿಡಿ ಶೈಲಿಯ ಚಿತ್ರ ಎಂಬುದು ಚಿತ್ರತಂಡದ ಮಾತು. ಇತ್ತೀಚೆಗೆ ಚಿತ್ರತಂಡ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಮಾಡಿದೆ.

ಲಹರಿ ವೇಲು ಚಿತ್ರದ ಆಡಿಯೋ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್‌ ಅವರು ಲಿರಿಕಲ್‌ ವೀಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. “ಮಜ್ಜಿಗೆ ಹುಳಿ’ ಚಿತ್ರಕ್ಕೆ ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಹೇಳಿಕೊಳ್ಳುವ ರವೀಂದ್ರ ಕೊಟಕಿ, “ನವ ಜೋಡಿಗಳು ಮೊದಲ ರಾತ್ರಿ ಸುಖ ಅನುಭಸಲು ಹೋಟೆಲ್‌ಗೆ ಬಂದಾಗ ಅವರ ಬದುಕಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನೇ ಚಿತ್ರದಲ್ಲಿ ಹಾಸ್ಯಮಯವಾಗಿ ತೋರಿಸಲಾಗಿದೆ.

ಒಂದು ರಾತ್ರಿ ಕೋಣೆಯೊಳಗೆ ನಡೆಯುವ ಚಿತ್ರದ ಕಥೆಯಲ್ಲಿ 28 ಪಾತ್ರಗಳು ಬರುತ್ತವೆ.ಬಾಡೂಟ ಅಂತ ಬಂದವರಿಗೆ “ಮಜ್ಜಿಗೆ ಹುಳಿ’ ಸಿಗುವುದು ಗ್ಯಾರೆಂಟಿ ಎನ್ನುತ್ತಾರೆ ಅವರು. “ಕೊಳ್ಳೆಗಾಲ’ ಚಿತ್ರದಲ್ಲಿ ಒರಟಾಗಿ ಅಭಿನಯಿಸಿದ್ದ ವೆಂಕಟೇಶ್‌ ದೀಕ್ಷಿತ್‌ ಈ ಚಿತ್ರದ ನಾಯಕನಾಗಿದ್ದು, ತಮ್ಮ ಎರಡನೇ ಚಿತ್ರದಲ್ಲಿ ಮುಗ್ಧ ಮನಸ್ಸಿನ, ಸೂಕ್ಷ್ಮ ಸ್ವಭಾವದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.

ರೂಪಿಕಾ ಇಲ್ಲಿ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಟಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಯತಿರಾಜ್‌, ಮಾನಸ ಗೌಡ, ಕುರಿ ಸುನಿಲ್‌ ಇತರರು ನಟಿಸಿದ್ದಾರೆ. ಇನ್ನು ಚಿತ್ರದ ಒಂದು ಸಾಲು ಕಥೆಯನ್ನು ಕೇಳಿದ ನಿರ್ದೇಶಕ ಯೋಗರಾಜ ಭಟ್‌, ಚಿತ್ರದ ಆರಂಭ ಮತ್ತು ಅಂತ್ಯಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ಸಂಜೀವ ರಾವ್‌ ಸಂಗೀತ ಸಂಯೋಜಿಸಿದ್ದಾರೆ. ಟೈಟಲ್‌ ಹಾಡಿಗೆ ಗುರುಕಿರಣ್‌ ಮತ್ತೂಂದು ಟಪ್ಪಾಂಗುಚ್ಚಿ ಹಾಡನ್ನು “ಟಗರು’ ಖ್ಯಾತಿಯ ಅಂಥೋನಿ ದಾಸ್‌ ಹಾಡಿದ್ದಾರೆ.

ಇನ್ನುಳಿದ ಹಾಡುಗಳಿಗೆ ಸುನಿತಾ, ಸಂಜೀವ್‌, ದೀಪ್ತಿ ಪ್ರಶಾಂತ್‌ ಧ್ವನಿಯಾಗಿದ್ದಾರೆ. ತೆಲುಗು ಮೂಲದ ಎಸ್‌. ರಾಮಚಂದ್ರ, ಎ.ಆರ್‌ ಗಂಗಾಧರ್‌ ದಸ್ಕತ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಸೆನ್ಸಾರ್‌ ಮುಂದೆ ಹೋಗಲು ಸಿದ್ಧವಾಗಿರುವ ಚಿತ್ರ, ಎಲ್ಲಾ ಅಂದುಕೊಂಡಂತೆ ನಡೆದರೆ ಮಾರ್ಚ್‌ ವೇಳೆಗೆ ತೆರೆಗೆ ಬರಲಿದೆ.

ಟಾಪ್ ನ್ಯೂಸ್

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.