ಮಹೇಶ್ ಬಾಬು ಚಿತ್ರಕ್ಕೆ ಕೃತಿಕಾ ನಾಯಕಿ
Team Udayavani, Mar 14, 2019, 11:29 AM IST
ನಿರ್ದೇಶಕ ಮಹೇಶ್ ಬಾಬು ಅವರ ಹೊಸ ಚಿತ್ರ ಸದ್ದಿಲ್ಲದೇ ಆರಂಭವಾಗಿರುವುದು ನಿಮಗೆ ಗೊತ್ತಿರಬಹುದು. ಈ ಬಾರಿ ಮಹೇಶ್ ಬಾಬು ಹೊಸ ಹುಡುಗನನ್ನು ನಾಯಕರನ್ನಾಗಿಸಿ ಸಿನಿಮಾ ಮಾಡುತ್ತಿದ್ದಾರೆ.
ನಾಯಕಿಗಾಗಿ ಹುಡುಕಾಟದ ನಡೆಸುತ್ತಿದ್ದ ಮಹೇಶ್ ಬಾಬು ಅವರಿಗೆ ಈಗ ನಾಯಕಿ ಸಿಕ್ಕಿದ್ದಾಳೆ. ಕೃತಿಕಾ ಎಂಬ ಹೊಸ ಹುಡುಗಿಗೆ ಮಹೇಶ್ ಬಾಬು ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ಒಳ್ಳೆಯ ಡ್ಯಾನ್ಸರ್ ಆಗಿರುವ ಕೃತಿಕಾ ಅವರಿಗೆ ಈ ಚಿತ್ರದಲ್ಲಿ ನಟನೆಗೆ ಅವಕಾಶವಿರುವ ಪಾತ್ರವಿದೆಯಂತೆ. ಪಾತ್ರಕ್ಕೆ ಹೊಂದಿಕೆಯಾಗುವ ನಾಯಕಿಗಾಗಿ ಮಹೇಶ್ ಬಾಬು, ಅನೇಕರನ್ನು ಆಡಿಷನ್ ಮಾಡಿದ್ದಾರೆ. ಆದರೆ, ಯಾರೂ ಪಾತ್ರಕ್ಕೆ ಹೊಂದಿಕೆಯಾಗಲೆ ಇಲ್ಲವಂತೆ. ಹೀಗಿರುವಾಗ ಗೆಳೆಯರೊಬ್ಬರ ಮೂಲಕ ಕೃತಿಕಾ ಅವರ ಬಗ್ಗೆ ತಿಳಿದು, ಅವರನ್ನು ಆಡಿಷನ್ ಮಾಡಿದಾಗ, ಅವರು ಓಕೆಯಾದರಂತೆ.
ಈಗಾಗಲೇ 15 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಕೃತಿಕಾ ಸದ್ಯದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ಸುಘೋಷ್ ಈ ಚಿತ್ರದ ಹೀರೋ. ಈಗಾಗಲೇ ಮಹೇಶ್ ಬಾಬು ಅವರ ಚಿತ್ರರಂಗಕ್ಕೆ ಪರಿಚಯಿಸಿರುವ ನಾಯಕಿಯರೆಲ್ಲಾ,
ಚಿತ್ರರಂಗದಲ್ಲಿ ನೆಲೆಕಂಡುಕೊಂಡಿರುವುದರಿಂದ ಕೃತಿಕಾ ಕೂಡಾ ಅದೇ ವಿಶ್ವಾಸದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ