CONNECT WITH US  

ಹಿಂದೂಗಳಿಗೆ ರಕ್ಷಣೆ ಇಲ್ಲ

ಬೆಂಗಳೂರು: ಇತ್ತೀಚೆಗಿನ ದಿನದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದ್ದು, ಹಿಂದೂಗಳು ನಾಶವಾದರೆ ಯಾವುದೇ ರಾಜಕೀಯ ಪಕ್ಷ, ಧಾರ್ಮಿಕ ಕೇಂದ್ರಗಳು ಉಳಿಯುವು ದಿಲ್ಲ ಎಂದು ವಿಶ್ವ ಹಿಂದು ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯ ದರ್ಶಿ ಪ್ರವೀಣ್‌ ತೊಗಾಡಿಯ ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರದಲ್ಲಿನ ಶ್ರೀ ಗಣೇಶ ಹಾಗೂ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ವಿಶ್ವಹಿಂದು ಪರಿ ಷದ್‌ ಶುಕ್ರವಾರ ಆಯೋಜಿಸಿದ ಹಿತ ಚಿಂತಕ್‌ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂಗಳ ರಕ್ಷಣೆಗೆ ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು. ಪ್ರತಿ ನಾಗರಿಕರು ಹಿಂದುತ್ವ ಅನುಸರಿಸಿದರೆ ಮಾತ್ರ ಹಿಂದೂ ಧರ್ಮದ ಉಳಿವು ಇದೆ. ಹಿಂದೂಗಳ ಸಮಸ್ಯೆಗೆ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಾದ ಅಗತ್ಯತೆ ಇದೆ.

ಹಿಂದೂಗಳಿದ್ದರೆ  ಮಾತ್ರ ಪಕ್ಷ, ಜಾತಿ, ಉಪಜಾತಿಗಳು ಇರುತ್ತವೆ. ಇಲ್ಲವಾದರೆ ಏನು ಇರುವುದಿಲ್ಲ ಎಂದರು.ಹಿಂದೂಗಳಿಗೆ ಸಮಸ್ಯೆ ಎದುರಾದರೆ ಸಹಸ್ರ ಸಂಖ್ಯೆಯಲ್ಲಿ ಸಹಾಯ ಹಸ್ತಚಾಚ ಬೇಕು. ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳನ್ನು ಬಳಸಿ ಧರ್ಮದ ರಕ್ಷಣೆಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್‌ ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ವಿಜಯ  ನಗರ ಜಿಲ್ಲಾಧ್ಯಕ್ಷ ದಕ್ಷಿಣಾಮೂರ್ತಿ, ಬಜರಂಗದಳ ಮಹಾನಗರ ಸಹ ಸಂಯೋಜಕ ಶಿವಕುಮಾರ್‌, ಸಮಾಜ ಸೇವಕ ಮಹೇಂದ್ರ ಮನ್ನೋತ್‌ ಉಪಸ್ಥಿತರಿದ್ದರು.


Trending videos

Back to Top