ಮೆಟ್ರೋಗೆ ಬೆಮೆಲ್ನಿಂದ 150 ಬೋಗಿ
Team Udayavani, Feb 17, 2017, 11:58 AM IST
ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಗೆ ಇನ್ನೂ 150 ಬೋಗಿಗಳನ್ನು ಮುಂದಿನ ಒಂದು ವರ್ಷದಲ್ಲಿ ಬೆಮೆಲ್ (ಭಾರತ್ ಅರ್ತ್ ಮೂವರ್ ಲಿ.,) ತಯಾರಿಸಿ ಕೊಡಲಿದೆ ಎಂದು ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ಕುಮಾರ್ ಹೋಟಾ ತಿಳಿಸಿದರು.
ವೈಮಾನಿಕ ಪ್ರದರ್ಶನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಮೆಟ್ರೋ’ಗೆ 150 ಬೋಗಿಗಳು ಸೇರಿದಂತೆ ದೆಹಲಿಗೆ 300 ಹಾಗೂ ಕೊಲ್ಕತ್ತಾಗೆ 80 ಬೋಗಿಗಳನ್ನು ತಯಾರಿಸಿಕೊಡುವ ಗುರಿ ಹೊಂದಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ 1,500 ಕೋಟಿ ವೆಚ್ಚದಲ್ಲಿ ಈ ಬೋಗಿಗಳನ್ನು ತಯಾರಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಬೆಮೆಲ್ 800 ಕೋಟಿ ರೂ.ಗಳಷ್ಟು ಉತ್ಪನ್ನಗಳನ್ನು ರಫ್ತು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ರಫ್ತು ಪ್ರಮಾಣ ದುಪ್ಪಟ್ಟಾಗಿದೆ. 2015-16ರಲ್ಲಿ ಬೆಮೆಲ್ 300 ಕೋಟಿ ರೂ. ರಫ್ತು ವಹಿವಾಟು ನಡೆಸಿತ್ತು. ಮುಂಬರುವ ವರ್ಷಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Nandini Ragi Ambali: ಮಾರುಕಟ್ಟೆಗೆ ಬಂತು ನಂದಿನಿ ರಾಗಿ ಅಂಬಲಿ: ಬೆಲೆ 10 ರೂ.!
ಕಾರು ಡಿಕ್ಕಿ: ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ, 7 ಜನರಿಗೆ ಗಾಯ
Arrested: ನಶೆಯಲ್ಲಿ ನಿಂದನೆ; ಸ್ನೇಹಿತನ ಹತ್ಯೆಗೈದಿದ್ದ ಐವರ ಬಂಧನ