ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಬದ್ಧ


Team Udayavani, Feb 17, 2017, 12:27 PM IST

siddharama.jpg

ಬೆಂಗಳೂರು: ರಾಜ್ಯದಲ್ಲಿ ಮೌಡ್ಯಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ನಾನು ಈಗಲೂ ಸಂಪೂರ್ಣ ಬದ್ಧನಾಗಿದ್ದೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ವರ್ಷಾಚರಣೆಯ ಅಂತಾರಾಷ್ಟ್ರೀಯ ಸಮ್ಮೇಳ ನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ “ಡಾ.ಬಿ.ಆರ್‌.ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ’ ಉದ್ಘಾ ಟಿಸಿ ಮಾತನಾಡಿದರು.

ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಈ ಹಿಂದೆ ಸಿದ್ಧಪಡಿಸಲಾಗಿದ್ದ ವಿಧೇಯಕದ ಸಾಧಕ ಬಾದಕಗಳ ಪರಾಮರ್ಶೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಈ ಕಾಯ್ದೆ ಜಾರಿಗೆ ತರುವ ಪೂರ್ಣ ಬದ್ಧತೆ ನನಗೆ ಈಗಲೂ ಇದೆ. ಈ ಮೌಡ್ಯಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರದ ಅವಧಿಯಲ್ಲೇ ಮೌಡ್ಯಪ್ರತಿಬಂಧಕ ಕಾಯ್ದೆ ಜಾರಿಗೆ ತರಲಾಗುವುದು,” ಎಂದು ಹೇಳಿದರು.

125 ಹೊಸ ವಸತಿ ಶಾಲೆ: ಈ ವರ್ಷ ಇನ್ನೂ 125 ವಸತಿ ಶಾಲೆಗಳನ್ನು ಆರಂಭಿಸಿ ಅವುಗಳಿಗೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸರಿಡಲಾಗುವುದು.  ಮುಂದಿನ ದಿನಗಳಲ್ಲಿ ಇತರೆ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆಗಳನ್ನು ತೆರೆಯಲಾಗುವುದು ಎಂದರು. 

ನಮ್ಮ ಸರ್ಕಾರ ವಸತಿ ರಹಿತ ಪರಿಶಿಷ್ಟ ಸಮುದಾಯದವರಿಗಾಗಿಯೇ 4 ಲಕ್ಷ ಪ್ರತ್ಯೇಕ ಮನೆಗಳನ್ನು ನಿರ್ಮಿಸುತ್ತಿದೆ. ಈ ಸಮುದಾಯ ಗಳ ಬಡ ಮಕ್ಕಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಪೂರ್ಣ ಖರ್ಚು ಬರಿಸುತ್ತಿದೆ. ಈ ವರೆಗೆ 100ಕ್ಕೂ ಹೆಚ್ಚು ಮಕ್ಕಳನ್ನು ವಿದೇಶಕ್ಕೆ ಕಳುಹಿಸಲಾಗಿದೆ ಎಂದು ಸಿಎಂ ತಿಳಿಸಿದರು. 

ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಕೆಎಎಸ್‌ ಆಕಾಂಕ್ಷಿ
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಗರದಲ್ಲಿ ನಡೆಯಿತು.

ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ “ಡಾ.ಬಿ.ಆರ್‌.ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸೀಮೆಎಣ್ಣೆ ತುಂಬಿದ್ದ ಡಬ್ಬ ಹಿಡಿದು ಅಂಬೇಡ್ಕರ್‌ಗೆ ಜೈಕಾರ ಹಾಕುತ್ತಾ ವೇದಿಕೆ ಮುಂಭಾಗಕ್ಕೆ ಆಗಮಿಸಿದ ಪರಶುರಾಮ ಎಂಬುವರು,

“ನನಗೆ ಕೆಎಎಸ್‌ ಪರೀಕ್ಷೆಯಲ್ಲಿ ಅನ್ಯಾಯವಾಗಿದೆ. ಅನ್ಯಾಯ ಸರಿಪಡಿಸಿ ಇಲ್ಲದಿದ್ದರೆ ಇಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಅವರ ಬಳಿ ಇದ್ದ ಸೀಮೆಎಣ್ಣೆ ಡಬ್ಬ ವಶಪಡಿಸಿಕೊಂಡು, ಅವರನ್ನು ಸಭಾಂಗಣದಿಂದ ಹೊರಗಡೆಗೆ ಕರೆದೊಯ್ದರು. 

ಹಿಂದೆ ಮುಂದೆ ಗೊತ್ತಿಲ್ಲದ ಈಶ್ವರಪ್ಪನ “ಹಿಂದ’
“ಈಶ್ವರಪ್ಪನಿಗೆ ಹಿಂದೆನೂ ಗೊತ್ತಿಲ್ಲ ಮುಂದೆನೂ ಗೊತ್ತಿಲ್ಲ. ಆದರೆ, ನಾನು “ಅಹಿಂದ’ ಎಂದರೆ, ಅವರು “ಹಿಂದ’ ಅಂತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಕೆಲ ವಿಚಾರಗಳಲ್ಲಿ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಉದಾಹರಣೆಗೆ ನಾನು ಅಂಬೇಡ್ಕರ್‌ ಅವರ ವಿಚಾರಗಳನ್ನು ಪ್ರತಿಪಾದಿಸುತ್ತೇನೆ. ಇಲ್ಲಿಗೆ ಬರುವ ಜನರು ಅಂಬೇಡ್ಕರ್‌ ಅವರ ವಿಚಾರಗಳನ್ನು ವಿರೋಧಿಸುವ ಕಾರ್ಯಕ್ರಮಗಳಿಗೂ ಹೋಗ್ತಾರೆ. ನಾನು “ಅಹಿಂದ’ ಎಂದಾಗ ಚಪ್ಪಾಳೆ ತಟ್ಟುವವರೇ ಹೋಗಿ ಈಶ್ವರಪ್ಪ “ಹಿಂದ’ ಎಂದಾಗಲೂ ಚಪ್ಪಾಳೆ ತಟ್ಟುತ್ತಾರೆ. ಅವರಿಗೆ ಹಿಂದೆನೂ ಗೊತ್ತಿಲ್ಲ ಮುಂದೆನೂ ಗೊತ್ತಿಲ್ಲ.

ಸಿಎಂಗೆ ಆದ ಮೌಡ್ಯದ ಅನುಭವ
ಕಾಗೆ ಕಥೆ: “ಮೌಡ್ಯಗಳ ಬಗ್ಗೆ ಸ್ವತಃ ನನಗೇ ಅನುಭವಗಳಾಗಿವೆ. ಕೆಲ ದಿನಗಳ ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದು ಎಲ್ಲರಿಗೂ ಗೊತ್ತು. ವಿಚಿತ್ರವೆಂದರೆ ಅಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು. ಆದರೆ, ಕಾಗೆ ಕೂತಿದ್ದರಿಂದಲೇ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗಿ ಬಿಂಬಿಸಲಾಯಿತು. ಇನ್ನು ಕಾರು ಹಳೆಯದಾಗಿದ್ದರಿಂದ ಬದಲಿಸಿದೆ. ಅದಕ್ಕೂ ಕಾಗೆ ಕೂತಿದ್ದರಿಂದ ಕಾರು ಬದಲಿಸಿದರು ಎಂದರು. 

ಕೆಳಗಿಳಿಯೋ ಕಥೆ: “ಕಳೆದ ವರ್ಷ ಟಿವಿಯಲ್ಲಿ ಒಬ್ಬ ಜ್ಯೋತಿಷಿ “ಸಿದ್ದರಾಮಯ್ಯ ಈ ಬಾರಿ ಬಜೆಟ್‌ ಮಂಡಿಸುವುದೇ ಇಲ್ಲ’ ಎಂದ. ಇನ್ನೊಬ್ಬ “ಬಜೆಟ್‌ ಮಂಡಿಸಿದ ಮರುಗಳಿಗೆಯೇ ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಾರೆ’ ಎಂದ.  ಇದನ್ನು ನೋಡಿದ ನನ್ನ ಹೆಂಡತಿ “ಏನ್ರೀ ಇವೆಲ್ಲಾ… ಹಿಂಗೆ ಹೇಳ್ತಿದ್ದಾರೆ,’ ಅಂದ್ರು. “ಅವರನ್ನೆಲ್ಲಾ ನಂಬಬೇಡ,’ ಅಂದೆ. ಜ್ಯೋತಿಷಿಗಳು ಹಾಗೆ ಹೇಳಿದ ನಂತರ ಮತ್ತೂಂದು ಬಜೆಟ್‌ ಮಂಡಿಸಿದ್ದೇನೆ. ಈ ಬಾರಿ ಮತ್ತು ಮುಂದಿನ ವರ್ಷವೂ ಬಜೆಟ್‌ ಮಂಡಿಸುತ್ತೇನೆ. ಪೂರ್ಣಾವಧಿ ಮುಖ್ಯಮಂತ್ರಿಯಾಗಿಯೂ ಅಧಿಕಾರ ಪೂರೈಸುತ್ತೇನೆ,” ಎಂದು ಹೇಳಿದರು. 

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.