CONNECT WITH US  

ಇನ್ಸ್‌ಪೆಕ್ಟರ್‌ಗೆ ಇರಿದ ರೌಡಿಶೀಟರ್‌ ಕಾಲಿಗೆ ಗುಂಡು 

ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಕಾರ್ಯಾಚರಣೆಗಿಳಿದ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸುವ ಘಟನೆಗಳು ದಿನ ನಿತ್ಯವೂ ವರದಿಯಾಗುತ್ತಿದ್ದು, ಶನಿವಾರ ರಾತ್ರಿ ಹಲಸೂರು ಕೆರೆಯ ಗುರುದ್ವಾರದ ಬಳಿ ರೌಡಿಶೀಟರ್‌ವೊಬ್ಬನ ಕಾಲಿಗೆ ಗುಂಡಿಕ್ಕಲಾಗಿದೆ. 

ಬೈಕ್‌ನಲ್ಲಿ ಬರುತ್ತಿದ್ದ ರೌಡಿ ಕಾರ್ತಿಕ್‌ನನ್ನು ಇನ್ಸ್‌ಪೆಕ್ಟರ್‌ ಬಸವರಾಜ್‌ ಬನ್ಕರ್‌ ಅವರು ತಡೆದಾಗ ಡ್ರಾಗರ್‌ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಜೊತೆಯಲ್ಲಿದ್ದ ಇನ್ಸ್‌ಪೆಕ್ಟರ್‌ ಸುಬ್ರಹ್ಮಣ್ಯ ಕಾರ್ತಿಕ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಕಲಾಸಿಪಾಳ್ಯದಲ್ಲಿ ಹಲವು ಪ್ರಕರಣಗಳು ಸಹಿತ ರೇಪ್‌ ಆರೋಪಿಯಾಗಿರುವ ಕಾರ್ತಿಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಾಯಾಳು ಇನ್ಸ್‌ಪೆಕ್ಟರ್‌ ಬಸವರಾಜ್‌ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Trending videos

Back to Top