ತ್ರಿಷಿಕಾ ಹೆಸರಿನಲ್ಲಿ ನಕಲಿ ಖಾತೆ: ದೂರು
Team Udayavani, Nov 22, 2017, 11:56 AM IST
ಬೆಂಗಳೂರು: ಮೈಸೂರು ಮಹಾರಾಣಿ ತ್ರಿಷಿಕಾ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರೆದು ಅನಗತ್ಯ ಹೇಳಿಕೆ ಪ್ರಕಟಿಸಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ತ್ರಿಷಿಕಾರ ಆಪ್ತ ಸಹಾಯಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರು ರಾಜವಂಶಸ್ಥ ಯದುವೀರ್ ಪತ್ನಿ ತ್ರಿಷಿಕಾ ಹೆಸರಿನಲ್ಲಿ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರಿದ್ದರು. ಅಷ್ಟೇ ಅಲ್ಲದೇ, ಅಪರಿಚಿತ ವ್ಯಕ್ತಿಗೆ ಫ್ರೆಂಡ್ ರಿಕ್ವಿಸ್ಟ್ ಕಳುಹಿಸುತ್ತಿದ್ದರು. ಜತಗೆ ಅನಗತ್ಯ ಹೇಳಿಕೆಗಳನ್ನು ಪ್ರಕಟಿಸಿ, ಅರಮನೆಯ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.
ಈ ಕುರಿತು ಯದುವೀರ್ 15 ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ, ತ್ರಿಷಿಕಾ ಹೆಸರಿನಲ್ಲಿ ನಕಲಿ ಖಾತೆಗಳನ್ನು ಕ್ರಿಯೆಟ್ ಮಾಡಿದ್ದು, ಯಾರು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಬಾರದು, ಒಪ್ಪಿಕೊಳ್ಳಬಾರದು ಎಂದು ಮನವಿ ಮಾಡಿದ್ದರು. ಸದ್ಯ ತ್ರಿಷಿಕಾ ರಾಜಸ್ಥಾನದಲ್ಲಿ ಚೊಚ್ಚಲ ಹೆರಿಗೆಗೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ