ಸಬ್‌ ಅರ್ಬನ್‌ ಶುರುವಾತಿಗೆ ಸಕಾಲ!


Team Udayavani, Dec 12, 2017, 12:24 PM IST

sub-urban.jpg

ಬೆಂಗಳೂರು: ಚುನಾವಣೆ ಹತ್ತಿರಾಗುತ್ತಿರುವ ಕಾರಣ ಈಗ ಕಾಮಗಾರಿಗಳ ಪರ್ವ. ನಮ್ಮ ಮೆಟ್ರೋ, ವೈಟ್‌ಟಾಪಿಂಗ್‌, ಸಿಗ್ನಲ್‌ ಫ್ರೀ ಕಾರಿಡಾರ್‌, ಮೇಲ್ಸೇತುವೆ ಸೇರಿ ಹತ್ತಾರು ಅಭಿವೃದ್ಧಿ ಕೆಲಸಗಳು ನಗರದ ಮೂಲೆ ಮೂಲೆಯನ್ನೂ ಆವರಿಸಿವೆ. ಹೀಗೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಹೀಗಾಗಿ ಟ್ರಾಫಿಕ್‌ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ತಕ್ಷಣವೇ ಪರ್ಯಾಯ ಕಲ್ಪಿಸಲು ಒಂದು ಅವಕಾಶವಿದೆ. ಅದುವೇ ಉಪನಗರ ರೈಲು ಸೇವೆ.

ಹೌದು, ಸಬ್‌ ಅರ್ಬನ್‌ ರೈಲು ಸೇವೆ ವಿಸ್ತರಣೆಗೆ ಇದು ಸಕಾಲ. ರೈಲ್ವೆ ಅಧಿಕಾರಿಗಳು ಮನಸು ಮಾಡಿದರೆ, ತಕ್ಷಣದಿಂದಲೇ 8ರಿಂದ 10 ಉಪನಗರ ರೈಲುಗಳ ಸೇವೆ ಆರಂಭಿಸಬಹುದು. ಇದಕ್ಕೆ ಅಗತ್ಯ ಸೌಕರ್ಯಗಳೂ ಇವೆ. ವೈಟ್‌ಫೀಲ್ಡ್‌ ಸೇರಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಿಗೆ ಇದು ಪರಿಹಾರವಾಗಬಲ್ಲದು ಎಂಬುದು ರೈಲ್ವೆ ಹೋರಾಟಗಾರರ ವೇದಿಕೆ ಅಭಿಪ್ರಾಯ.

ಈಗಾಗಲೇ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ರೈಲು ಮಾರ್ಗಗಳ ವಿದ್ಯುದೀಕರಣ ಮುಗಿದಿದೆ. ಹೆಚ್ಚುವರಿ ಬೋಗಿಗಳು ಬಂದಿರುವ ಕಾರಣ ಬೋಗಿಗಳ ಕೊರತೆಯಿಲ್ಲ. ಪ್ರತ್ಯೇಕ ಸಬ್‌ ಅರ್ಬನ್‌ ಟರ್ಮಿನಲ್‌ ಪ್ಲಾಟ್‌ಫಾರಂ ಕೂಡ ಸಿದ್ಧವಿದೆ. ಈ ಅವಕಾಶಗಳ ಬಳಸಿಕೊಂಡು ರೈಲುಗಳ ಸೇವೆ ಹೆಚ್ಚಿಸಿದರೆ ಲಕ್ಷಾಂತರ ಜನರಿಗೆ ಅನುಕೂಲವಿದೆ.

ಪರ್ಯಾಯಗಳಿವು: ಚೆನ್ನೈ-ಮೈಸೂರು ಶತಾಬ್ದಿ, ಚೆನ್ನೈ-ಮೈಸೂರು ಕಾವೇರಿ ಎಕ್ಸ್‌ಪ್ರೆಸ್‌, ತಿರುಪತಿ-ಮೈಸೂರು ಪ್ಯಾಸೆಂಜರ್‌ ಸೇರಿ ನಿತ್ಯ ವೈಟ್‌ಫೀಲ್ಡ್‌ ಮಾರ್ಗವಾಗಿ ನಾಲ್ಕೈದು ರೈಲುಗಳು ನಗರಕ್ಕೆ ಬರುತ್ತವೆ. ಎಲೆಕ್ಟ್ರಿಕ್‌ ಎಂಜಿನ್‌ ಹೊಂದಿರುವ ಈ ರೈಲುಗಳು ಮೈಸೂರಿಗೆ ತೆರಳುವಾಗ ಬೆಂಗಳೂರಿನಲ್ಲಿ ಡೀಸೆಲ್‌ ಎಂಜಿನ್‌ಗೆ ಪರಿವರ್ತನೆ ಆಗಲು ಒಂದೊಂದು ರೈಲು ಕನಿಷ್ಠ ಅರ್ಧಗಂಟೆ ಕಾಯಬೇಕಿತ್ತು.

ಪ್ರಸ್ತುತ ಮೈಸೂರು ಮಾರ್ಗ ವಿದ್ಯುದೀಕರಣಗೊಂಡಿರುವ ಕಾರಣ ಆ ಕಿರಿಕಿರಿ ಇಲ್ಲ. ಇದಕ್ಕೆ ಪೂರಕವಾಗಿ ಹಾಲಿ ಇರುವ ಮೆಮು ಬೋಗಿಗಳನ್ನು ಬಳಸಿಕೊಂಡು, ವೈಟ್‌ಫೀಲ್ಡ್‌ಗೆ ಮೆಮು ರೈಲು ಸೇವೆ ಹೆಚ್ಚಿಸಲು ಅವಕಾಶವಿದೆ. “ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ, ಭಾರಿ ಸಂಚಾರ ದಟ್ಟಣೆಯಾಗುತ್ತಿದ್ದು, ರೈಲು ಸೇವೆ ವಿಸ್ತರಿಸುವ ಅಗತ್ಯವಿದೆ. ಪ್ರಸ್ತುತ ಈ ಮಾರ್ಗದಲ್ಲಿ ಎಂಟು ರೈಲುಗಳ ಸೇವೆಯಿದೆ,’  ಎಂದು ಪ್ರಜಾ ರಾಗ್‌ ಸದಸ್ಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.

ಸೇವೆ ವಿಸ್ತರಣೆಗೆ ಒತ್ತಾಯ: “ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ಲಾಟ್‌ಫಾರಂನಲ್ಲಿ ನಿಲ್ಲುವ ಬೆಂಗಳೂರು-ಹಿಂದೂಪುರ ರೈಲಿನ ಬೋಗಿಗಳನ್ನು ಬೆಂಗಳೂರು-ರಾಮನಗರ-ಚನ್ನಪಟ್ಟಣಕ್ಕೆ ವಿಸ್ತರಿಸಬಹುದು. ಈ ಮಾರ್ಗದಲ್ಲೂ ಮೆಟ್ರೋ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿ ರೈಲು ಸೇವೆಯಿಂದ ಟ್ರಾಫಿಕ್‌ ಕಿರಿಕಿರಿ ತಪ್ಪುತ್ತದೆ,’ ಎನ್ನುತ್ತಾರೆ ದ್ಯಾಮಣ್ಣವರ.

ಮೈಸೂರಿಗೆ ವಿಸ್ತರಣೆ?: “ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ಯಾಸೆಂಜರ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳನ್ನು ಎಲೆಕ್ಟ್ರಿಕ್‌ ರೈಲುಗಳಾಗಿ ಪರಿವರ್ತಿಸುವುದು ನಮ್ಮ ಮೊದಲ ಆದ್ಯತೆ. ಬೆಂಗಳೂರು-ರಾಮನಗರ ನಡುವೆ ಇರುವ ಉಪನಗರ ರೈಲು ಸೇವೆಯನ್ನು ಮೈಸೂರಿನವರೆಗೆ ವಿಸ್ತರಿಸುವ ಚಿಂತನೆ ಇದೆ. ಈಚೆಗೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವೆ ಈಚೆಗೆ ಒಂದು ರೈಲು ಸೇವೆ ಆರಂಭಿಸಿದ್ದು, ಇದರ ಪ್ರಗತಿ ಗಮನಿಸಿ ಹಂತ ಹಂತವಾಗಿ ಸೇವೆ ವಿಸ್ತರಿಸುವುದಾಗಿ ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಇ. ವಿಜಯಾ ಹೇಳುತ್ತಾರೆ.

ಪ್ರಸ್ತುತ ಸೇವೆಗಳು: ಪ್ರಸ್ತುತ ಬೆಂಗಳೂರಿನಿಂದ ತುಮಕೂರಿಗೆ 3, ಹೊಸೂರಿಗೆ 3, ವೈಟ್‌ಫೀಲ್ಡ್‌ಗೆ 8, ರಾಮನಗರಕ್ಕೆ 4 ರೈಲುಗಳ ಸೇವೆ ಲಭ್ಯವಿದೆ. ಬೆಳಗಿನಜಾವ ಬೆಂಗಳೂರಿನಿಂದ ಮತ್ತು ತಡರಾತ್ರಿ ರಾಮನಗರದಿಂದ ಕಾರ್ಯಾಚರಣೆ ಮಾಡುವ ರೈಲಿಗೆ ಅಷ್ಟೇನೂ ಬೇಡಿಕೆಯಿಲ್ಲ. ಹಾಗೇ ತುಮಕೂರು-ಬೆಂಗಳೂರು ನಡುವೆ ಸಂಜೆ 6ರ ನಂತರ ರೈಲು ಸೇವೆಯೇ ಇಲ್ಲ. 

ಫ‌ಲನೀಡಿದ ಒಪ್ಪಂದ: ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವೆ 2017ರ ಜನವರಿಯಲ್ಲಿ ಬೋಗಿಗಳ ಖರೀದಿ, ಸಿಗ್ನಲ್‌ಗ‌ಳನ್ನು ಮೇಲ್ದರ್ಜೆಗೇರಿಸುವುದೂ ಸೇರಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಒಪ್ಪಂದವಾಗಿತ್ತು. ಈ ಒಪ್ಪಂದದಡಿ ಈಗಾಗಲೇ ಬೋಗಿಗಳ ಖರೀದಿ ಆಗಿದೆ.

ಇದಕ್ಕೆ ರಾಜ್ಯ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಹಣ ಠೇವಣಿ ಇಡಲಿದ್ದು, ಪ್ರತಿಯಾಗಿ ಬೋಗಿಗಳನ್ನು ತಯಾರಿಸುವುದು, ಸೇವೆ, ಪ್ರಯಾಣ ದರ, ಅದರಿಂದಾಗಬಹುದಾದ ಲಾಭ-ನಷ್ಟ ಸೇರಿದಂತೆ ಎಲ್ಲವನ್ನೂ ರೈಲ್ವೆ ಇಲಾಖೆ ನೋಡಿಕೊಳ್ಳುತ್ತದೆ. ಪ್ರಸ್ತುತ ಎರಡು ತಿಂಗಳಲ್ಲಿ 3 ಬೋಗಿಗಳ ಖರೀದಿಯಾಗಿದೆ.

ಹಾಗೇ ಒಡಂಬಡಿಕೆ ಭಾಗವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ನಡುವಿನ ಸಿಗ್ನಲ್‌ಗ‌ಳ ಅಟೋಮೇಷನ್‌ ಕಾರ್ಯ ಚುರುಕಾಗಬೇಕು ಎಂಬ ಒತ್ತಾಯ ರೈಲ್ವೆ ಹೋರಾಟಗಾರರಿಂದ ಕೇಳಿಬರುತ್ತಿದೆ. ಈ ಮಧ್ಯೆ ಉಪನಗರ ರೈಲು ಯೋಜನೆ ಸಂಬಂಧ ಎಸ್‌ಪಿವಿ (ವಿಶೇಷ ಉದ್ದೇಶ ವಾಹನ) ಸ್ಥಾಪನೆಯು ಪಾಲುದಾರಿಕೆ ಗೊಂದಲದಿಂದ ನೆನೆಗುದಿಗೆ ಬಿದ್ದಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.