CONNECT WITH US  

ತನ್ನ ಅರಿತರೆ ಜಗದ ಅರಿವು

ಬೆಂಗಳೂರು: ಮನುಷ್ಯ ತನ್ನನ್ನು ತಾನು ಅರಿತುಕೊಂಡಾಗ ಮಾತ್ರ ಪ್ರಪಂಚ ಅರ್ಥವಾಗುತ್ತದೆ ಎಂದು ಓಂಕಾರ ಆಶ್ರಮದ ಪೀಠಾಧಿಪತಿ ಶ್ರೀ ಸ್ವಾಮಿ ಮಧುಸೂದನಾನಂದಪುರಿ ಅಭಿಪ್ರಾಯಪಟ್ಟರು. ಹಿಂದೂಸ್ತಾನ್‌ ಗಗನ್‌ ಗೌರವ್‌ ಜ್ಯೋತಿರ್ಲಿಂಗ ಫೌಂಡೇಶನ್‌ ನಿಘಂಟು ತಜ್ಞ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ 105ನೇ ಜನ್ಮದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರೋಗ್ಯ ಹಬ್ಬದಲ್ಲಿ ಮಾತನಾಡಿದ ಅವರು, ನಮ್ಮ ಬಗ್ಗೆ ನಮಗೆ ಶೇ.50ರಷ್ಟು ಮಾತ್ರ ತಿಳಿದಿರುತ್ತದೆ. ನಾವು ಶೇ.100ರಷ್ಟು ತಿಳಿದುಕೊಳ್ಳಲು ನಮ್ಮನೊಮ್ಮೆ ಒಳಗಣ್ಣನಿಂದ ನೋಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲರೂ ಭಗವಂತನ ಸ್ವರೂಪಿಗಳಾಗಲು ಪ್ರಯತ್ನಿಸಬೇಕು. ಹಲವರು ತಮ್ಮ ಬಗ್ಗೆ ತಾವು ಸಂಪೂರ್ಣವಾಗಿ ಅರಿತುಕೊಂಡಿದ್ದೇವೆಂಬ ಭಾವನೆ ಹೊಂದಿರುತ್ತಾರೆ.

ಇಂತಹ ತಪುಕಲ್ಪನೆಯಿಂದ ಹೊರ ಬಂದು, ನಮ್ಮ ಅಸ್ಥಿತ್ವವನ್ನು ಅರಿತುಕೊಳ್ಳಬೇಕು. ಯಾವಾಗ ನಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುತ್ತೇವೆಯೋ ಆಗ ಭಗವಂತನನ್ನು ಅರ್ಥ ಮಾಡಿಕೊಳ್ಳಲು ಅರ್ಹರಾಗುತ್ತೇವೆ. ವೇದಗಳಲ್ಲಿ ಇದನ್ನೇ ಉಲ್ಲೇಖೀಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶತಾಯುಷಿ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರಿಗೆ ಗೌರವ ಸಲ್ಲಿಸಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ವಿತರಿಸಲಾಯಿತು.

Trending videos

Back to Top