CONNECT WITH US  

ಇಂದಿನಿಂದ ಮೂರು ದಿನ ಅನಾದ್ಯಂತ ಸಂಭ್ರಮ

ಯಲಹಂಕ: ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಹಬ್ಬ "ಅನಾದ್ಯಂತ 2018' ಗುರುವಾರದಿಂದ (ಮಾ.8) ಮೂರು ದಿನಗಳ ಕಾಲ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್‌ ಡಾ.ಎಚ್‌.ಸಿ.ನಾಗರಾಜು ಹೇಳಿದರು.

ನಿಟ್ಟೆ ಮೀನಾಕ್ಷಿ ಮಹಾವಿದ್ಯಾಲಯದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಷ್ಟ್ರಮಟ್ಟದ ಪ್ರಾತಿನಿಧಿಕ ವಿಜ್ಞಾನ-ತಂತ್ರಜ್ಞಾನ ಹಾಗೂ ಸಂಸ್ಕೃತಿಗಳ ಅಪೂರ್ವ ಮಿಲನವಾಗಿರುವ ಉತ್ಸವದಲ್ಲಿ ದೇಶದ 200ಕ್ಕೂ ಹೆಚ್ಚು ಇಂಜಿನಿಯರಿಂಗ್‌ ಕಾಲೇಜುಗಳು, 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಜವಳಿ ಸಚಿವ ರುದ್ರಪ್ಪ ಲಮಾಣಿ, ಮೇಯರ್‌ ಸಂಪತ್‌ ರಾಜ್‌, ಬಿಗ್‌ ಬಾಸ್‌ ವಿಚೇತ ಚಂದನ್‌ ಶೆಟ್ಟಿ ಹಾಗೂ ಚಿತ್ರನಟ ಪವನ್‌ಕುಮಾರ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿ ಕುಲಾಧಿಪತಿ ಪ್ರೊ.ಎನ್‌.ಆರ್‌.ಶೆಟ್ಟಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ನಿಟ್ಟೆ ಕಾಲೇಜಿನ ವಿದ್ಯಾರ್ಥಿ ಸಂಚಾಲಕ ಶ್ರೀಹರ್ಷ ಮಾತನಾಡಿ,ಅನಾದ್ಯಂತ ಅಂಗವಾಗಿ, ಫ್ಯಾಶನ್‌ ಶೋ, ಖೊರಿಯೊ ನೈಟ್‌, ಬ್ಯಾಟಲ್‌ ಆಫ್ ಬ್ಯಾಂಡ್ಸ್‌, ಸ್ಟ್ರೀಟ್‌ ಡ್ಯಾನ್ಸ್‌, ರೋಬೊವಾರ್ ಹಾಗೂ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರದ ಅತ್ಯುನ್ನತ ಕಲಾ ಪ್ರಕಾರಗಳನ್ನು "ದಿ ಬಾನ್‌ ಫೈರ್‌' ನೈಟ್‌ನಲ್ಲಿ ಪ್ರದರ್ಶಿಸಲಾಗುವುದು.

ದೇಶದ ವಿವಿಧ ರಾಜ್ಯಗಳ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಮ್ಮ ಕಲೆ ಹಾಗೂ ತಾಂತ್ರಿಕ ಪ್ರತಿಭೆ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು. ಕಾಲೇಜಿನ  ತಿಪ್ಪೇಸ್ವಾಮಿ ಹಾಜರಿದ್ದರು.

Trending videos

Back to Top