CONNECT WITH US  

ಆರೋಪ ಸತ್ಯಕ್ಕೆ ದೂರವಾಗಿದೆ: ಸ್ಪಷ್ಟನೆ

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯದಲ್ಲಿ 1, 2 ಮತ್ತು 3ನೇ ಹಂತದ ಯೋಜನೆಗಳ ಅನುಷ್ಠಾನದಲ್ಲಿ 800 ಕೋಟಿ ರೂ. ಭಾರಿ ಅವ್ಯವಹಾರ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸ್ಪಷ್ಟನೆ ನೀಡಿದೆ.

ಯೋಜನೆ ಹಂತ-1ರಲ್ಲಿ 16,293 ಮನೆಗಳು ಹಂತ -2ರಲ್ಲಿ 9,741 ಮನೆಗಳ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಈವರೆಗೆ ಒಟ್ಟು 110 ಕೋಟಿ ರೂ. ವೆಚ್ಚವಾಗಿರುತ್ತದೆ. ಹಂತ 3ರಲ್ಲಿ 49,368 ಮನೆಗಳ ನಿರ್ಮಾಣಕ್ಕೆ 2,661 ಕೋಟಿಗಳ ಯೋಜನಾ ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್‌ ಕರೆಯಲಾಗಿದ್ದು, 38,987 ಮನೆಗಳ ನಿರ್ಮಾಣಕ್ಕೆ ನಿಯಮಾನುಸಾರ ಕಾರ್ಯಾದೇಶ ನೀಡಲಾಗಿದೆ.

ಉಳಿದ 10,381 ಮನೆಗಳ ನಿರ್ಮಾಣ ಕಾಮಗಾರಿಗೆ ಮಾ.22ರಂದು ಟೆಂಡರ್‌ ಆಹ್ವಾನಿಸಿದ್ದು, ಯಾವುದೇ ವೆಚ್ಚ ಮಾಡಿಲ್ಲ ಎಂದು ತಿಳಿಸಲಾಗಿದೆ. ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಂಡಳಿಗೆ 142 ಕೋಟಿ ರೂ. ಬಿಡುಗಡೆಯಾಗಿದ್ದು, 2ನೇ ಮತ್ತು 3ನೇ ಹಂತದ ಯೋಜನೆಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

ಈ ಯೋಜನೆಗಳ ಅನಷ್ಟಾನಕ್ಕೆ ಕಿಕ್‌ಬ್ಯಾಕ್‌ ಪಡೆದಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಎನ್‌.ಆರ್‌.ರಮೇಶ್‌ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ದುರುದ್ದೇಶದಿಂದ ಕೂಡಿವೆ ಎಂದು ಮಂಡಳಿಯ ಆಯುಕ್ತರು ತಿಳಿಸಿದ್ದಾರೆ.

Trending videos

Back to Top