CONNECT WITH US  

ಮಗಳ ತಂಟೆಗೆ ಬಂದ ಪ್ರಿಯಕರನನ್ನು ಬರ್ಬರವಾಗಿ ಕೊಂದ ಮಹಿಳೆ!

ಬೆಂಗಳೂರು:ಪತಿ ಇಲ್ಲದ ವೇಳೆ ಮನೆಗೆ ಬಂದ ಪ್ರಿಯಕರನನ್ನು ವಿವಾಹಿತೆಯೊಬ್ಬಳು ಬರ್ಬರವಾಗಿ ಇರಿದು ಕೊಲೆಗೈದಿರುವ ಬೆಚ್ಚಿಬೀಳಿಸುವ ಘಟನೆ ಪೀಣ್ಯದ ಚಿಕ್ಕ ಬಿದರಕಲ್ಲು ಎಂಬಲ್ಲಿ  ಬುಧವಾರ ರಾತ್ರಿ ನಡೆದಿದೆ.

32 ವರ್ಷದ ಗಾರ್ವೆುಂಟ್ಸ್‌ ಉದ್ಯೋಗಿ ರಘು ಎಂಬಾತ ಹತ್ಯೆಗೀಡಾಗಿದ್ದು, ಈತ ಕಳೆದ 6 ವರ್ಷಗಳಿಂದ ತನ್ನ ಸಹುದ್ಯೋಗಿಯ ಪತ್ನಿಯಾದ ರೇಖಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. 

ರೂಪಾ ಪತಿ 2 ದಿನಗಳ ಹಿಂದೆ ತಿಪಟೂರಿಗೆ ಜಾತ್ರೆಗೆಂದು ತೆರಳಿದ್ದು, ಈ ವೇಳೆ ಮನೆಗೆ ಆಗಮಿಸಿದ್ದ ರಘು  ರೇಖಾ ಪುತ್ರಿಯ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. 

ಮಗಳ ಕುರಿತಾಗಿನ ಕೀಳು ಮಟ್ಟದ ಮಾತುಗಳಿಂದ ರೊಚ್ಚಿಗೆದ್ದು ರಘುವಿನ ಕಿವಿ, ಕತ್ತು ಮತ್ತು ಹೊಟ್ಟೆಗೆ ಇರಿದು ಹತ್ಯೆಗೈದಿದ್ದಾಳೆ.

ಸ್ಥಳಕ್ಕೆ ಪೀಣ್ಯ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದು,ಆರೋಪಿ ರೇಖಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Trending videos

Back to Top