ಅಶ್ಲೀಲ ದೃಶ್ಯ ತೋರಿಸಿ ಪತ್ನಿಗೆ ಕಿರುಕುಳ: ವೈದ್ಯನ ಸೆರೆ
Team Udayavani, Apr 4, 2018, 10:48 AM IST
ಬೆಂಗಳೂರು: ಪತ್ನಿಗೆ ಅಶ್ಲೀಲ ದೃಶ್ಯ, ಚಿತ್ರಗಳನ್ನು ತೋರಿಸಿ ಕಿರುಕುಳ ನೀಡುತ್ತಿದ್ದ ವೈದ್ಯನೊಬ್ಬನನ್ನು ವಿದ್ಯಾರಣಪುರ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಮಂಜುನಾಥ್ (32) ಬಂಧಿತ. ಆರೋಪಿ ವೃತ್ತಿಯಲ್ಲಿ ವೈದ್ಯನಾಗಿದ್ದು, 2015ರಲ್ಲಿ ವಿವಾಹವಾಗಿದ್ದ. ಮೊದಲು ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಆತ ನಂತರ ಪತ್ನಿಯ ಪೋಷಕರಿಗೆ ಮೆಜೆಸ್ಟಿಕ್ನಲ್ಲಿರುವ ಮನೆ ಮಾರಾಟ ಮಾಡಿ ವರದಕ್ಷಿಣಿ ಕೊಡುವಂತೆ ಹೇಳಿದ್ದ. ಅಷ್ಟೇ ಅಲ್ಲದೇ, ಕೆಲ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಹಿಂಸೆ ನೀಡುತ್ತಿದ್ದ.
ಇದರಿಂದ ಮನನೊಂದ ಸಂತ್ರಸ್ತೆ ಆತ್ಮಹತ್ಯೆಗೂ ಯತ್ನಿಸಿದ್ದರು. ಆರೋಪಿಯು ಪತ್ನಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದ
ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಫೇಸ್ ಬುಕ್ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಮತ್ತೂಂದೆಡೆ ಮೂರು ವರ್ಷ ವಾದರೂ ಸಂತ್ರಸ್ತೆ ಗರ್ಭಿಣಿಯಾಗಿರಲಿಲ್ಲ. ಹೀಗಾಗಿ ತನ್ನ ಜತೆ ಮಲಗು ಎಂದು ಮಂಜುನಾಥ್ ತಂದೆ ಮತ್ತೂಂದೆಡೆ ಪೀಡಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ