ಇನ್ನು ಖಾತಾ ಕೂಡ ಆನ್‌ಲೈನ್‌ನಲ್ಲೇ


Team Udayavani, Apr 17, 2018, 12:07 PM IST

innu-khata.jpg

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಒಂಧು ಸೈಟು ಖರೀದಿಸಿ, ಅದರಲ್ಲೊಂದು ಮನೆ ಕಟ್ಟುವುದೇ ಹರಸಾಹಸ. ಅದರಲ್ಲೂ ಕಟ್ಟಡಕ್ಕೆ ಸಂಬಂಧಿಸಿದ ನಕ್ಷೆ, ಖಾತಾ ಮತ್ತಿತರ ಅಗತ್ಯ ಪತ್ರಗಳಿಗಾಗಿ ಪಾಲಿಕೆ ಕಚೇರಿಗೆ ಅಲೆಯುವ ಗೋಳು ಅನುಭವಿಸಿದವರಿಗೇ ಗೊತ್ತು. ಪಾಲಿಕೆ ಕಚೇರಿಗೆ ಹೋದಾಗಲೆಲ್ಲಾ ಒಂದೊಂದು ದಾಖಲೆ ಮಿಸ್ಸಾಗಿದೆ ಎನ್ನುವ ಅಧಿಕಾರಿಗಳ ಮಾತು ಕೇಳಿ ನೀವು ರೋಸಿಹೋಗಿದ್ದರೆ, ನಿಮಗೊಂದು ಖೂಷಿ ಸುದ್ದಿಯಿದೆ.

ಈಗಾಗಲೇ ಕಟ್ಟಡದ ನಕ್ಷೆ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಿರುವ ಬಿಬಿಎಂಪಿ, ಇದೀಗ ಕಟ್ಟಡದ ಖಾತಾ ಪಡೆಯುವಿಕೆಯನ್ನೂ ಆನ್‌ಲೈನ್‌ ವ್ಯವಸ್ತೆ ವ್ಯಾಪ್ತಿಗೆ ತರಲು ಮುಂದಾಗಿದೆ. ಜನರು ಅನಗತ್ಯವಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದು, ಅಧಿಕಾರಿಗಳಿಗೆ ಲಂಚ ನೀಡುವುದನ್ನು ತಪ್ಪಿಸುವ ಸದುದ್ದೇಶದೊಂದಿಗೆ ಖಾತಾ ಸೇವೆಗಳನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಪ್ರಸ್ತುತ ಬಿಬಿಎಂಪಿಯಿಂದ ಖಾತಾ ಸೇವೆಗಳನ್ನು ಪಡೆಯಲು ಹತ್ತಾರು ದಿನ ಕಚೇರಿಗಳಿಗೆ ಅಲೆಯಬೇಕು. ಜತೆಗೆ ಲಂಚ ನೀಡಿದವರಿಗೆ ಮಾತ್ರ ಖಾತಾ ದೊರೆಯುತ್ತಿದ್ದು, ಹಣ ನೀಡದಿದ್ದರೆ ಖಾತಾ ದೊರೆಯುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ಜತೆಗೆ ಖಾತಾ ನೀಡುವಲ್ಲಿ ಪಾಲಿಕೆ ಅಧಿಕಾರಿಗಳು ಎಸಗುತ್ತಿರುವ ಅಕ್ರಮಗಳ ಕುರಿತು ಪಾಲಿಕೆ ಸದಸ್ಯರು ಹಲವಾರು ಬಾರಿ ಕೌನ್ಸಿಲ್‌ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಆಕ್ರೋಶ ಹೊರಹಾಕಿದ್ದೂ ಆಗಿದೆ.

ಈ ಎಲ್ಲ ಆರೋಪ, ಆಕ್ರೋಶಗಳ ಹಿನ್ನೆಲೆಯಲ್ಲಿ ಜನರಿಗೆ ಸುಲಭ ಮತ್ತು ಶೀಘ್ರವಾಗಿ ಖಾತಾ ದೊರೆಯುವಂತೆ ಮಾಡಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ಆನ್‌ಲೈನ್‌ ಮೂಲಕವೇ ಖಾತಾ ಸೇವೆಗಳನ್ನು ಕಲ್ಪಿಸಲು ಮುಂದಾಗಿದ್ದಾರೆ. ಈಗಾಗಲೇ ಪಾಲಿಕೆಯಿಂದ ಜಾರಿಗೊಳಿಸಿರುವ ಆನ್‌ಲೈನ್‌ ಖಾತಾ ವರ್ಗಾವಣೆ ಸೇವೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಉಳಿದ ಸೇವೆಗಳನ್ನು ಆನ್‌ಲೈನ್‌ಗೆ ತರಲು ಪಾಲಿಕೆ ತೀರ್ಮಾನಿಸಿದೆ. 

ಈಗಾಗಲೇ ಕಟ್ಟಡ ನಕ್ಷೆ, ಸ್ವಾಧೀನಾನುಭವ ಪ್ರಮಾಣ ಪತ್ರ ಹಾಗೂ ಆರಂಭಿಕ ಪ್ರಮಾಣ ಪತ್ರಗಳ ವಿತರಣೆ ಆನ್‌ಲೈನ್‌ಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಬಿಬಿಎಂಪಿ, ಇದೀಗ ಹೊಸ ಖಾತಾ ನೋಂದಾಣಿ, ಖಾತಾ ವಿಭಜನೆ ಹಾಗೂ ಖಾತಾ ಜೋಡಣೆಯಂತಹ ಸೇವೆಗಳನ್ನು ಆನ್‌ಲೈನ್‌ಗೊಳಿಸುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಮುಂದಾಗಿದೆ. 

ಖಾತಾ ವಿಭಜನೆ: ಬಿಡಿಎ, ಕರ್ನಾಟಕ ಗೃಹ ಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಸಂಸ್ಥೆ, ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ ಮಂಜೂರು ಮಾಡಿದ ಹಾಗೂ ಕಂದಾಯ ಪಾಕೆಟ್ಸ್‌, ಅನುಮೋದಿತ ಬಡಾವಣೆ (ನಿವೇಶನ), ಅನುಮೋದಿತ ಕಟ್ಟಡ (ಅಪಾರ್ಟ್‌ಮೆಂಟ್‌) ಮತ್ತು ಗ್ರಾಮಠಾಣಾದಲ್ಲಿರುವ ಆಸ್ತಿಗಳಿಗೆ ಖಾತಾ ವಿಭಜನೆ ಮಾಡಿಕೊಡಲಾಗುತ್ತದೆ. 

ಹೊಸ ಖಾತಾ ನೋಂದಣಿ: ಬಿಡಿಎ, ಕರ್ನಾಟಕ ಗೃಹ ಮಂಡಳಿ ಮತ್ತು ಇನ್ನಿತರ ಸರ್ಕಾರಿ ಪ್ರಾಧಿಕಾರವು ಹಂಚಿಕೆ ಮಾಡಿದ (ಗ್ರಾಮ ಠಾಣಾ ಹೊರತುಪಡಿಸಿ), ಬಿಡಿಎ ಅನುಮೋದಿತ ಬಡಾವಣೆ ಮತ್ತು ಬಿಡಿಎ ರೀ ಕನ್ವೇಡ್‌ ಬಡಾವಣೆಯಲ್ಲಿನ ಆಸ್ತಿಗಳಿಗೆ ಖಾತಾ ನೋಂದಣಿ ಮಾಡಲಾಗುತ್ತದೆ. 

30 ದಿನಗಳಲ್ಲಿ ಖಾತಾ ಕೈಗೆ: ಖಾತಾ ಸೇವೆಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವವರಿಗೆ ಕಾಲಮಿತಿಯೊಳಗೆ ಸೇವೆ ಒದಗಿಸುವ ಯೋಜನೆಯನ್ನು ಪಾಲಿಕೆ ಹೊಂದಿದ್ದು, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಅರ್ಜಿದಾರರಿಗೆ ಖಾತಾ ದಾಖಲೆ ದೊರೆಯುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಅದರಂತೆ 30 ದಿನದೊಳಗೆ ಪಾಲಿಕೆ ಅಧಿಕಾರಿಗಳು ಅರ್ಜಿಗಳ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅರ್ಜಿ ವಿಲೇವಾರಿ ಮಾಡದಿದ್ದರೆ ಅದಕ್ಕೆ ಸಮರ್ಪಕ ಕಾರಣ ನೀಡಬೇಕಾಗುತ್ತದೆ.

ಸುಧಾರಣಾ ಶುಲ್ಕ ಪಾವತಿ ಕಡ್ಡಾಯ: ಪಾಲಿಕೆಯಿಂದ ಹೊಸದಾಗಿ ಖಾತಾ ನೋಂದಣಿ, ಖಾತಾ ವಿಭಜನೆ ಹಾಗೂ ಖಾತಾ ಜೋಡಣೆ ಬಯಸುವ ಆಸ್ತಿ ಮಾಲೀಕರು ಕಡ್ಡಾಯವಾಗಿ ಸುಧಾರಣಾ ಶುಲ್ಕ ಪಾವತಿಸಬೇಕು. ಇಲ್ಲವೆ, ನಿಗದಿತ ಸಮಯದೊಳಗೆ ಶುಲ್ಕ ಪಾವತಿಸಲು ಅಧಿಕಾರಿಗಳು ಕಾಲಾವಕಾಶ ನೀಡುತ್ತಾರೆ.

ಸುಮೋಟೋ ಮೂಲಕ ವರ್ಗಾವಣೆ: ಅಪಾರ್ಟ್‌ಮೆಂಟ್‌ಗಳ ಸಂದರ್ಭದಲ್ಲಿ ಸ್ವತ್ತಿನ ಖಾತಾ ವಿಭಜನೆಯಾಗಿಲ್ಲವೆಂಬ ಕಾರಣ ನೀಡಿ ಖಾತಾ ವರ್ಗಾವಣೆಯ ಅರ್ಜಿಯನ್ನು ಅಧಿಕಾರಿಗಳು ತಿರಿಸ್ಕರಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳು ಸುಮೋಟೋ ಆಧಾರದ ಮೇಲೆ ಸ್ವತ್ತಿನ ಖಾತಾ ವಿಭಜನೆ ಮಾಡಿ ಅರ್ಜಿದಾರರಿಗೆ ಖಾತಾ ವರ್ಗಾವಣೆ ಮಾಡಿಕೊಡಬೇಕು. 

ಖಾತಾ ವರ್ಗಾವಣೆ ಅರ್ಜಿಗಳ ಸ್ಥಿತಿಗತಿ
-ಸ್ವೀಕರಿಸಿದ ಒಟ್ಟು ಅರ್ಜಿಗಳು    5909
-ಅನುಮತಿ ನೀಡಿರುವುದು        685
-ತಿರಸ್ಕೃತ ಅರ್ಜಿಗಳು    812
-ಪರಿಶೀಲನಾ ಹಂತದ ಅರ್ಜಿಗಳು    1253
-ಶುಲ್ಕ ಪಾವತಿಸಿದವರು    725
-ಬಾಕಿಯಿ ಇರುವ ಅರ್ಜಿಗಳು    2069
-ಸ್ಥಳ ಪರಿಶೀಲನೆ ನಡೆಸಿರುವುದು    50
-ಪ್ರಮಾಣ ಪತ್ರ ವಿತರಣೆ ಹಂತ    201

ಪಾಲಿಕೆಯಿಂದ ಜಾರಿಗೊಳಿಸಿದ ಆನ್‌ಲೈನ್‌ ಖಾತಾ ವರ್ಗಾವಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಎಲ್ಲ ಖಾತಾ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ. ಇದರಿಂದಾಗಿ ಜನರಿಗೆ ಸುಲಭ ಹಾಗೂ ಶೀಘ್ರವಾಗಿ ಖಾತಾ ದೊರೆಯಲಿದ್ದು, ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ. ಆನ್‌ಲೈನ್‌ ಖಾತಾ ಸೇವೆಗಳ ಕುರಿತು ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.