ಸರ್‌ ಸಿ.ವಿ.ರಾಮನ್‌ನಗರ ಕ್ಷೇತ‹ ನನ್ನ ಕರ್ಮಭೂಮಿ

Team Udayavani, May 10, 2018, 10:43 AM IST

blore-1.jpg

ಬೆಂಗಳೂರು: “ನಾನು ಚಾಮುಂಡೇಶ್ವರಿ, ಬಾದಾಮಿ, ಟಿ.ನರಸೀಪುರದಲ್ಲಿ ಹೋಗಿ ಚುನಾವಣೆಗ ಸ್ಪರ್ಧಿಸಲು ಆಗುತ್ತಾ? ನಾನು ಸರ್‌ ಸಿ.ವಿ.ರಾಮನ್‌ನಗರದಲ್ಲೇ ಸ್ಪರ್ಧೆ ಮಾಡಬೇಕು. ಏಕೆಂದರೆ ಇದೇ ನನ್ನ ಜನ್ಮಭೂಮಿ ಹಾಗೂ ಕರ್ಮಭೂಮಿ’. ಘಟಾನುಘಟಿ ನಾಯಕರು ಕಣಕ್ಕಿಳಿಯಲು ಪ್ರಯತ್ನಿಸಿದ್ದ ಸರ್‌ ಸಿ.ವಿ.ರಾಮನ್‌ನಗರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌.ರಘು ಮಾತುಗಳಿವು. ಹತ್ತು ವರ್ಷ ಶಾಸಕರಾಗಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿರುವ ರಘು, “ನಾನು ನಿಮ್ಮವನು, ನಿಮ್ಮ ಮನೆ ಮಗನು’ ಎಂದು ಮತಯಾಚನೆಯಲ್ಲಿ ತೊಡಗಿದ್ದಾರೆ.

ಚುನಾವಣೆ ಪ್ರಚಾರದ ನಡುವೆ “ಉದಯವಾಣಿ’ ಜತೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನತೆ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಏಕೆಂದರೆ ನಾನು ಎಲ್ಲಿಂದಲೋ ಬಂದವನಲ್ಲ. 20 ದಿನಗಳಲ್ಲಿ ಯಾರೂ ಶಾಸಕನಾಗಲು ಸಾಧ್ಯವಿಲ್ಲ. ಜನರ ಪ್ರೀತಿ ಗಳಿಸಲೂ ಆಗುವುದಿಲ್ಲ. ಚುನಾವಣೆಗಾಗಿ ಬಂದು ನಂತರ ಕ್ಷೇತ್ರ ಖಾಲಿ
ಮಾಡಿದವರ ಬಗ್ಗೆ ಜನರಿಗೆ ಗೊತ್ತಿದೆ ಎಂದು ಹೇಳುತ್ತಾರೆ.

„ ನೀವು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳೇನು?
ಸರ್‌ ಸಿ.ವಿ.ರಾಮನ್‌ನಗರ ಆಸ್ಪತ್ರೆ ನಿರ್ಮಾಣ, ಕ್ಷೇತ್ರದ ಪ್ರಮುಖ ಸಂಪರ್ಕ ರಸ್ತೆಯಾದ ಹಾಗೂ ಸಂಚಾರ ದಟ್ಟಣೆ ನಿವಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ನಾಲ್ಕು ಪಥದ ಸುರಂಜನ್‌ದಾಸ್‌ ರಸ್ತೆಯನ್ನು 100 ವರ್ಷ ಬಾಳಿಕೆ ಬರುವಂತಹ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಗ್ಗದಾಸಪುರ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ವಿಧವಾ ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ದೊರಕಿಸಿಕೊಡಲಾಗಿದೆ. 900 ಜನಕ್ಕೆ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಒಂಟಿ ಮನೆ ಯೋಜನೆಯಡಿ 432 ಮನೆ ನಿರ್ಮಿಸಿಕೊಡಲಾಗಿದೆ. ಉದ್ಯಾನ, ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗಿದೆ.

„ ನಿಮ್ಮ ವಿರುದ್ಧ ಕಾಂಗ್ರೆಸ್‌ ಮೇಯರನ್ನೇ ಕಣಕ್ಕಿಳಿಸಿದೆ?
ಅವರು ನಮ್ಮ ಕ್ಷೇತ್ರದವರಲ್ಲ. ಅವರ ಮನೆ ಇರುವುದು ದೇವರಜೀವನಹಳ್ಳಿಯಲ್ಲಿ. ನಮ್ಮ ಕ್ಷೇತ್ರದಿಂದ 12 ಕಿ.ಮೀ. ದೂರದಲ್ಲಿದೆ. ಅವರು ಪುಲಿಕೇಶಿನಗರದಲ್ಲಿ ನಿಲ್ಲಬೇಕಿತ್ತು. ಇಲ್ಲಿಗ್ಯಾಕೆ ಬಂದರೋ ಗೊತ್ತಿಲ್ಲ.

„ ಸಚಿವ ಎಚ್‌.ಸಿ.ಮಹದೇವಪ್ಪ ಕೂಡ ನಿಮ್ಮ ಕ್ಷೇತ್ರದಿಂದಲೇ ಸ್ಪರ್ಧೆ ಬಯಸಿದ್ದರಲ್ಲಾ?
ಅಂಥ ಮಾತು ಕೇಳಿಬಂದಿದ್ದು ನಿಜ. ಆದರೆ, ನಾನು ಚಾಮುಂಡೇಶ್ವರಿ, ಬಾದಾಮಿ, ಟಿ.ನರಸೀಪುರ ಕ್ಷೇತ್ರಗಳಿಗೆ
ಹೋಗಿ ನಿಲ್ಲಲು ಸಾಧ್ಯವಿಲ್ಲವಲ್ಲಾ? ಏಕೆಂದರೆ ನನಗೆ ಇರುವುದು ಒಂದೇ ಕ್ಷೇತ್ರ ಅದು ಸರ್‌ ಸಿ.ವಿ.ರಾಮನ್‌ನಗರ. ಇದು ನನ್ನ ಮನೆ. ಹೀಗಾಗಿ, ನಾನು ಇಲ್ಲೇ ಸ್ಪರ್ಧೆ ಮಾಡಿದ್ದೇನೆ. ಕೊನೆವರೆಗೂ ಇಲ್ಲೇ ಇರುತ್ತೇನೆ.

„ ರಾಜ್ಯ ಸರ್ಕಾರದ “ಭಾಗ್ಯ’ಗಳು ಕಾಂಗ್ರೆಸ್‌ಗೆ ನೆರವಾಗಲ್ವಾ?
ಭಾಗ್ಯಗಳು ಎಲ್ಲಿವೆ? ಎಲ್ಲ ದೌರ್ಭಾಗ್ಯಗಳೇ. ಹೆಸರಿಗಷ್ಟೇ ಕಾರ್ಯಕ್ರಮಗಳ ಘೋಷಣೆ ಮಾಡಲಾಗಿದೆ. ಆದರೆ, ಜನರಿಗೆ ಯಾವುದೂ ತಲುಪಿಲ್ಲ. ರಾಜ್ಯ ಸರ್ಕಾರದ ಅಸಹಕಾರದ ನಡುವೆಯೂ ಕೇಂದ್ರ ಸರ್ಕಾರದ ಆನುದಾನ ಹಾಗೂ ನ್ಯಾಯಯುತವಾಗಿ ಶಾಸಕರ ಅನುದಾನ ಬಳಸಿ ಜನರಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದೇನೆ. ನಮ್ಮ ಸರ್ಕಾರವಿದ್ದಾಗ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ನೆರವು ದೊರೆತಿತ್ತು. ಅದೂ ಸಹ ನಮ್ಮ ಕ್ಷೇತ್ರದ ಜನರಿಗೆ ಗೊತ್ತಿದೆ.

„ ಮೋದಿ-ಅಮಿತ್‌ ಶಾ ಅಲೆ ನಿಮಗೆ ವರವಾಗುತ್ತಾ?
ಖಂಡಿತವಾಗಿಯೂ ಆಗುತ್ತದೆ. ನಾನು ಮಾಡಿರುವ ಕೆಲಸದ ಜತೆಗೆ ದೇಶದಲ್ಲಿ ಇಂದು ನರೇಂದ್ರ ಮೋದಿ ಯಶಸ್ವಿ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಅಮಿತ್‌ ಶಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಸಾಕಷ್ಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗ ಜನಪರ ಕೆಲಸಗಳು ಆಗಿವೆ. ಇವೆಲ್ಲವೂ ನನ್ನ ಗೆಲುವಿಗೆ ಸಹಕಾರಿಯಾಗಲಿದೆ.

„ ನಿಮಗೆ ಗೆಲ್ಲುವ ವಿಶ್ವಾಸ ಇದೆಯೇ?
ಶೇ.100ಕ್ಕೆ 100 ಗೆಲ್ಲುವ ವಿಶ್ವಾಸವಿದೆ. ಏಕೆಂದರೆ ನಾನು ಮಾಡಿರುವ ಕೆಲಸಗಳು ಹಾಗೂ ಜನರ ಜತೆಗಿನ ನಿರಂತರ ಸಂಪರ್ಕ. ಕ್ಷೇತ್ರದ ಜನತೆಗೆ ನನ್ನ ಮನೆ ಬಾಗಿಲು ಸದಾ ತೆರೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾತ್ರಿ 12 ಗಂಟೆಗೆ ಬಂದರೂ ಸಮಸ್ಯೆಗೆ ಸ್ಪಂದಿಸಿದ್ದೇನೆ. ನನ್ನ ಇಡೀ ಸಮಯ ಜನಸೇವೆಗಾಗಿ ಮೀಸಲು. ಜನರ ಸುಖ -ದುಃಖಗಳಿಗೆ ಸದಾ ಸ್ಪಂದಿಸಿದ್ದೇನೆ. ಜನರೂ ನನ್ನನ್ನು ಮನೆ ಮಗನಾಗಿಯೇ ನೋಡುತ್ತಿದ್ದಾರೆ. ಇದು ನನ್ನಲ್ಲಿ ಮತ್ತಷ್ಟುÉ ಉತ್ಸಾಹ ತುಂಬಿದೆ.

ನಾನು ಭಾಗ್ಯವಂತ
ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯಿಲ್ಲ. ನಾನು ಭ್ರಷ್ಟಾಚಾರ ಮಾಡಿಲ್ಲ. ಯಾವ ಅಧಿಕಾರಿಗಳಿಗೂ ಕಿರುಕುಳ ಕೊಟ್ಟಿಲ್ಲ. ಯಾರ ಮೇಲೂ ದೌರ್ಜನ್ಯ ಎಸಗಿಲ್ಲ. ದಿನದ 24 ಗಂಟೆ ನಿರಂತರ ಜನಸೇವೆ
ನನ್ನ ನಾಯಕ. ನಾನು ಜನಸೇವಕ. ನನ್ನ ಅಜೆಂಡಾ ಅಭಿವೃದ್ಧಿ. ನನ್ನ ಮನೆ ಕ್ಷೇತ್ರದಲ್ಲೇ ಇದೆ.ಚುನಾವಣೆಯಲ್ಲಿ ಕ್ಷೇತ್ರದ ಜನರೇ ಹಣ ವೆಚ್ಚ ಮಾಡಿ ನನ್ನ ಪರ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತ ನನಗೇನು ಬೇಕು. ನಾನು ಭಾಗ್ಯವಂತನೂ ಹೌದು ಅದೃಷ್ಟವಂತನೂ ಹೌದು. 

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.