CONNECT WITH US  

ಕ್ಯಾಬ್‌ ಚಾಲಕಗೆ ಥಳಿಸಿ ದರೋಡೆ

ನೆಲಮಂಗಲ: ಮಗಳನ್ನು ಶಾಲೆಗೆ ಸೇರಿಸುವ ಉದ್ದೇಶದಿಂದ ಮೂರು ದಿನಗಳಿಂದ ನಿರಂತರವಾಗಿ ಕಾರು ಓಡಿಸಿದ ಓಲಾ ಕ್ಯಾಬ್‌ ಚಾಲಕ ಸಂಪಾದಿಸಿದ್ದ 16 ಸಾವಿರ ರೂ. ಹಣದ ಜತೆಗೆ ವಾಹನವನ್ನೂ ದುಷ್ಕರ್ಮಿಗಳು ಕದ್ದೊಯ್ದ ಘಟನೆ ಮಾಚೋಹಳ್ಳಿಯಲ್ಲಿ ನಡೆದಿದೆ. 

ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಓಲಾ ಕ್ಯಾಬ್‌ ಬುಕ್‌ ಮಾಡಿದ ಆರೋಪಿಗಳು, ಮಂಗಳವಾರ ರಾತ್ರಿ 12 ಗಂಟೆಗೆ ಕ್ಯಾಬ್‌ ಹತ್ತಿದ್ದಾರೆ. ನಂತರ ರಾತ್ರಿ 1 ಗಂಟೆಗೆ ನಿಗದಿಯಂತೆ ಮಾಚೋಹಳ್ಳಿಗೆ ಬಂದಿದ್ದು, ಇಳಿಯುವಾಗ ಕ್ಯಾಬ್‌ ಚಾಲಕ ಮಲ್ಲಿಕಾರ್ಜುನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಮಾರಕಾಸ್ತ್ರ ತೋರಿಸಿ, ಜೀವ ಬೆದರಿಕೆ ಹಾಕಿ, 16,000 ರೂ.ನಗದು ಕಸಿದುಕೊಂಡು, ಚಾಲಕನನ್ನು ಕ್ಯಾಬ್‌ನಿಂದ ಕೆಳಗೆ ತಳ್ಳಿ ಕ್ಯಾಬ್‌ ತೆಗೆದುಕೊಂಡು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Trending videos

Back to Top