ಪ್ರಾಣಿಜನ್ಯ ತ್ಯಾಜ್ಯ ತಿಂದು ಕೊಬ್ಬಿದ ಶ್ವಾನಗಳು


Team Udayavani, Sep 1, 2018, 12:13 PM IST

blore-3.jpg

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚುತ್ತಿದ್ದು, ಬಿಬಿಎಂಪಿಯಲ್ಲಿ ನಿತ್ಯ ಉತ್ಪತ್ತಿಯಾಗುವ ಪ್ರಾಣಿ ಜನ್ಯ (ಮಾಂಸ) ತ್ಯಾಜ್ಯ ವಿಲೇವಾರಿ ಹಾಗೂ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಸಮರ್ಪಕವಾಗಿ ಮಾಡದಿರುವುದು ನಾಯಿ ಹಾವಳಿಗೆ ಕಾರಣವಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ ನಿತ್ಯ 100 ಟನ್‌ಗೂ ಹೆಚ್ಚಿನ ಪ್ರಾಣಿಜನ್ಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಪಾಲಿಕೆಯಿಂದ ವೈಜ್ಞಾನಿಕವಾಗಿ ಸಂಗ್ರಹ ಹಾಗೂ ವಿಲೇವಾರಿ ಮಾಡುವ ವ್ಯವಸ್ಥೆಯಿಲ್ಲ. ಇದರಿಂದ ಪ್ರಾಣಿಜನ್ಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದು ಬೀದಿ ನಾಯಿಗಳ ಸಂಖ್ಯೆ ಹಾಗೂ ಹಾವಳಿ ಹೆಚ್ಚಾಗಲು ಕಾರಣವಾಗಿದೆ.

ನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಮಾಂಸ ಮಾರಾಟ ಮಳಿಗೆಗಳಿದ್ದು, ನಿತ್ಯ 100 ಟನ್‌ನಷ್ಟು ಮಾಂಸ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇಂತಹ ತ್ಯಾಜ್ಯ ಸಂಗ್ರಹಕ್ಕೆ ಪಾಲಿಕೆ ಮುಂದಾಗದ ಹಿನ್ನೆಲೆಯಲ್ಲಿ ಅಂಗಡಿಯವರು ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿ ರಸ್ತೆಬದಿ, ಖಾಲಿ ನಿವೇಶನ ಹಾಗೂ ರಾಜಕಾಲುವೆಗಳಿಗೆ ಎಸೆಯುತ್ತಿದ್ದಾರೆ. ಚೀಲಗಳ ತುದಿ ಕಟ್ಟಿರುವುದರಿಂದ ನಾಯಿಗಳು ಚೀಲಗಳನ್ನು ಎಳೆದಾಡುವಂತಹ ದೃಶ್ಯಗಳು ಎಲ್ಲೆಡೆ ಕಂಡುಬರುತ್ತವೆ.

ಮಾಂಸ ತ್ಯಾಜ್ಯ ಎಸೆದಿರುವ ಸ್ಥಳಗಳಲ್ಲಿ ಹತ್ತಾರು ನಾಯಿಗಳು ಸೇರಿ ಚೀಲ ಎಳೆದಾಡುವುದು ಹಾಗೂ ಮಾಂಸ ತಿನ್ನುವುದರಿಂದ ದಷ್ಟಪುಷ್ಟವಾಗುವ ನಾಯಿಗಳು ಅತ್ಯಂತ ವ್ಯಾಘ್ರವಾಗುತ್ತವೆ. ಇದೇ ಕಾರಣದಿಂದಲೇ ರಸ್ತೆಯಲ್ಲಿ ಸಂಚರಿಸುವ ವಾಹನಗಳು, ದಾರಿಹೋಕರು ಹಾಗೂ ಮಕ್ಕಳ ಮೇಲೆ ದಾಳಿ ನಡೆಸಲು ಮುಂದಾಗುತ್ತವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಸಮರ್ಪಕ ಶಸ್ತ್ರಚಿಕಿತ್ಸೆ: ಬಿಬಿಎಂಪಿ ವತಿಯಿಂದ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಅಸಮರ್ಪಕವಾಗಿ ನಡೆಸುತ್ತಿರುವುದರಿಂದ ನಗರದಲ್ಲಿ ನಾಯಿಗಳ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಪಾಲಿಕೆಯಿಂದ ಏಕಕಾಲದಲ್ಲಿ ಎಲ್ಲ ವಲಯಗಳಲ್ಲಿ ಸಂತಾನಶಕ್ತಿ ಹರಣ ನಡೆಸುವುದರಿಂದ ಗಣನೀಯ ಪ್ರಮಾಣದಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತದೆ. 

ಆದರೆ, ಪಾಲಿಕೆಯ ಅಧಿಕಾರಿಗಳು ವರ್ಷದಲ್ಲಿ ಮೂರು ಹಂತಗಳಲ್ಲಿ ಎಬಿಸಿ ಮಾಡುವುದರಿಂದ ಒಂದು ಹಂತ
ಪೂರ್ಣಗೊಳಿಸುವ ವೇಳೆಗೆ ಎರಡು ಹಂತಗಳಲ್ಲಿನ ನಾಯಿಗಳು ಮರಿ ಮಾಡುತ್ತವೆ. ಇದೇ ಕಾರಣದಿಂದ ಪಾಲಿಕೆಯಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂಬ ಆರೋಪವಿದೆ.

ಎನ್‌ಜಿಒಗಳ ಕುತಂತ್ರ: ಸಾಮಾನ್ಯವಾಗಿ ಅಕ್ಟೋಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ಗಂಡು-ಹೆಣ್ಣು ನಾಯಿಗಳು ಒಟ್ಟಿಗೆ ಸೇರುತ್ತವೆ. ಆದರೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಗುತ್ತಿಗೆ ಪಡೆದಿರುವ ಎನ್‌ಜಿಒಗಳು ಎರಡು ತಿಂಗಳಲ್ಲಿ ನಾನಾ ಕಾರಣ ಮುಂದಿಟ್ಟು ಶಸ್ತ್ರ ಚಿಕಿತ್ಸೆಗೆ ಮುಂದಾಗುವುದಿಲ್ಲ. ಹೀಗಾಗಿ ನಾಯಿಗಳು ಒಟ್ಟಿಗೆ ಸೇರುತ್ತವೆ. ಒಂದೊಮ್ಮೆ ನಗರದಲ್ಲಿರುವ ಎಲ್ಲ ನಾಯಿಗಳಿಗೆ ಎಬಿಸಿ ಮಾಡಿದರೆ ಮುಂದಿನ ದಿನಗಳಲ್ಲಿ ಪಾಲಿಕೆಯಿಂದ ಅನುದಾನ ಸಿಗುವುದಿಲ್ಲ ಎಂದು ಇಂತಹ ಕೃತ್ಯಕ್ಕೆ ಮುಂದಾಗುತ್ತವೆ ಎಂದು ಪಾಲಿಕೆಯ ಪಶುವಿಭಾಗದ ಹಿರಿಯ ಅಧಿಕಾರಿ ದೂರಿದರು.

ಹತ್ತು ವರ್ಷಗಳಲ್ಲಿ 1.92 ಲಕ್ಷ ಮಂದಿಗೆ ಕಡಿತ: ಕಳೆದ ಹತ್ತು ವರ್ಷಗಳಲ್ಲಿ ಸುಮಾರು 1.92 ಲಕ್ಷ ಜನರಿಗೆ ನಾಯಿ ಕಡಿತಕ್ಕೆ ಒಳಗಾಗಿ ಚುಚ್ಚುಮದ್ದು ಪಡೆದಿದ್ದಾರೆ. ಈ ಪೈಕಿ ಶೇ.95ರಷ್ಟು ಬೀದಿ ನಾಯಿಗಳ ಕಡಿತವಾಗಿರುವುದು ವರದಿಯಾಗಿದೆ. ಇನ್ನು ನಾಯಿ ಕಡಿತದಿಂದ 2000ರ ಇಸವಿ ಬಳಿಕ ನಗರದಲ್ಲಿ 61 ಜನರು ಮೃತಪಟ್ಟಿದ್ದರೂ, 2012-13ನೇ ಸಾಲಿನಿಂದ ಈವರೆಗೆ ಯಾವುದೇ ಮೃತಪಟ್ಟ ಪ್ರಕರಣ ವರದಿಯಾಗಿಲ್ಲ.
 
35 ಕೋಟಿ ರೂ. ವ್ಯಯ: ಕಳೆದ 18 ವರ್ಷಗಳಿಂದ ಎಬಿಸಿ ಚಿಕಿತ್ಸೆಗಾಗಿ 6,30,685 ಬೀದಿ ನಾಯಿಗಳು ಹಾಗೂ 8,17,085 ರೇಬಿಸ್‌ ವಿರೋಧಕ ಲಸಿಕೆಗಾಗಿ ಒಟ್ಟು 35,73,36,907 ಕೋಟಿ ರೂ.. ವ್ಯಯಿಸಲಾಗಿದ್ದರೂ ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೆ, ಪಾಲಿಕೆಯಿಂದ ವಯಸ್ಸಾದ, ಜೀವಿಸಲು ಸಾಧ್ಯವಾಗದಂತಹ ಬೀದಿನಾಯಿಗಳಿಗೆ ದಯಾಮರಣ ನೀಡಲಾಗುತ್ತದೆ. ಅಂತಹ ಪಟ್ಟಿಯಲ್ಲಿ 18 ವರ್ಷದಿಂದ 53,580 ನಾಯಿಗಳಿಗೆ ದಯಾಮರಣ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ.

ಸಮಸ್ಯೆಗೆ ಪರಿಹಾರವೇನು?: ನಗರದಲ್ಲಿ ಬೀದಿನಾಯಿಗಳ ಹಾವಳಿ ತಪ್ಪಿಸಬೇಕಾದರೆ, ಗುತ್ತಿಗೆ ನೀಡುವ ವೇಳೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಬೇಕಿದ್ದು, ಎಬಿಸಿ ಚಿಕಿತ್ಸೆ ಸಮರ್ಪಕವಾಗಿ ನಡೆಸದಂತಹ ಸಂಸ್ಥೆಗಳ ವಿರುದ್ಧ ಕಠಿಣ
ಕ್ರಮಕೈಗೊಳ್ಳಬೇಕು. ಪಾಲಿಕೆಯಿಂದ ಹಂತಗಳಲ್ಲಿ ಎಬಿಸಿ ಮಾಡುವುದು ಕೈಬಿಟ್ಟು ಒಂದು ವರ್ಷದಲ್ಲಿ ಎಲ್ಲ ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಿದರೆ ನಗರದಲ್ಲಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ. 

ಅಡಬಂದು ಮಾನ ತೆಗೆದಿದ್ದ ನಾಯಿ
ಬೆಂಗಳೂರಿನಲ್ಲಿ 2016ರ ಮೇ ತಿಂಗಳಲ್ಲಿ ಆಯೋಜಿಸಿದ್ದ 10ಕೆ ಮ್ಯಾರಥಾನ್‌ನಲ್ಲಿ ಕ್ರೀಡಾಪಟುವಿಗೆ ಬೀದಿ ನಾಯಿ ಅಡ್ಡಬಂದ ಪರಿಣಾಮ ಓಟದಲ್ಲಿ ಸೋತ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಗುವಂತೆ ಮಾಡಿತ್ತು. ಓಟದಲ್ಲಿ ಭಾಗವಹಿಸಿದ್ದ ಇಥಿಯೋಪಿಯಾದ ಜನಪ್ರಿಯ ಮ್ಯಾರಾಥಾನ್‌ ಪಟು ಮೂಲೆ ವಾಸಿಹುನ್‌ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿತ್ತಾದರೂ, ಅಡ್ಡಬಂದ ಬೀದಿ ನಾಯಿ ಓಟಕ್ಕೆ ತೊಡಕು ಉಂಟು ಮಾಡಿದ ಪರಿಣಾಮ ಅವರು ಸೋಲಬೇಕಾಯಿತು.

ಪ್ರಗತಿಯಲ್ಲಿದೆ ಗಣತಿ ಕಾರ್ಯ ಪಶುಸಂಗೋಪನೆ ಇಲಾಖೆಯಿಂದ ರಾಜ್ಯದಲ್ಲಿರುವ ಪ್ರಾಣಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಾಯಿಗಳ ಸಮೀಕ್ಷೆ ಸಹ ನಡೆಸಲಾಗುತ್ತಿದೆ. 2012ರಲ್ಲಿ ನಡೆಸಿದ ಸಮೀಕ್ಷೆಯಂತೆ ನಗರದಲ್ಲಿ 2.90 ಲಕ್ಷ ನಾಯಿಗಳಿರುವುದು ಕಂಡುಬಂದಿದ್ದು, ಆ ಪೈಕಿ 1.05 ಲಕ್ಷ ಸಾಕಿದ, 1.85 ಲಕ್ಷ ಬೀದಿ ನಾಯಿಗಳಿರುವುದು ಕಂಡುಬಂದಿತ್ತು.

ಟಾಪ್ ನ್ಯೂಸ್

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Supreme Court

Trailers ವೀಕ್ಷಕರನ್ನು ಸೆಳೆಯಲು ಇರುವ ಮಾಧ್ಯಮವಷ್ಟೇ: ಸುಪ್ರೀಂ

1-eqeqqeqwe

BJP ಅಭ್ಯರ್ಥಿಯನ್ನು ಆಲಿಂಗಿಸಿದ ಮಹಿಳಾ ಎಎಸ್‌ಐ ಅಮಾನತು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Nandini Ragi Ambali: ಮಾರುಕಟ್ಟೆಗೆ ಬಂತು ನಂದಿನಿ ರಾಗಿ ಅಂಬಲಿ: ಬೆಲೆ 10 ರೂ.!

ಕಾರು ಡಿಕ್ಕಿ: ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ, 7 ಜನರಿಗೆ ಗಾಯ

ಕಾರು ಡಿಕ್ಕಿ: ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ, 7 ಜನರಿಗೆ ಗಾಯ

Arrested: ನಶೆಯಲ್ಲಿ ನಿಂದನೆ; ಸ್ನೇಹಿತನ ಹತ್ಯೆಗೈದಿದ್ದ ಐವರ ಬಂಧನ

Arrested: ನಶೆಯಲ್ಲಿ ನಿಂದನೆ; ಸ್ನೇಹಿತನ ಹತ್ಯೆಗೈದಿದ್ದ ಐವರ ಬಂಧನ

7

Theft: ಪ್ರಚಾರಕ್ಕೆ ತೆರಳಿದ್ದಾಗ ಮಾಜಿ ಮೇಯರ್‌ ಮನೆಯಲ್ಲಿ ಕಳವು

Money seized: ಕಾರಲ್ಲಿ ಸಾಗಿಸುತ್ತಿದ್ದ 2 ಕೋಟಿ ನಗದು ಜಪ್ತಿ; ಪ್ರಕರಣ ದಾಖಲು

Money seized: ಕಾರಲ್ಲಿ ಸಾಗಿಸುತ್ತಿದ್ದ 2 ಕೋಟಿ ನಗದು ಜಪ್ತಿ; ಪ್ರಕರಣ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

supreem

ಜನಪ್ರತಿನಿಧಿಗಳ 2000ಕ್ಕೂ ಅಧಿಕ ಕೇಸ್‌ ಇತ್ಯರ್ಥ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.