CONNECT WITH US  

ಅಪಘಾತ: ನಗರದಮೂವರು ವೈದ್ಯವಿದ್ಯಾರ್ಥಿಗಳ ಸಾವು

ದೇವನಹಳ್ಳಿ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ವೈದ್ಯ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು ಮತ್ತೂಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಣ್ಣ ಮಾನಿಕೆರೆ ಗೇಟ್‌ನಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ.

ಬೆಂಗಳೂರಿನ ಕಿಮ್ಸ್‌ ವೈದ್ಯಕೀಯ ಕಾಲೇಜಿನ ಎರಡನೇ ಸೆಮಿಸ್ಟರ್‌ ವಿದ್ಯಾರ್ಥಿಗಳಾದ, ತುಮಕೂರಿನ ಪ್ರಜ್ವಲ್‌ (20),
ದೊಡ್ಡಬಳ್ಳಾಪುರದ ದೊಡ್ಡಬೆಳಮಂಗಲದ ವಿಶಾಲ್‌ ಚೌಧರಿ (20), ಜಿಗಣಿಯ ಭೂಷಣ್‌ (20) ಮೃತ ಯುವಕರು. ವೆಂಕಟಗಿರಿ ಕೋಟೆ ನಿವಾಸಿ ಕುಮಾರರಾಜು ಗಾಯಗೊಂಡಿದ್ದು, ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ನಾಲ್ವರು ಯುವಕರು ಬುಧವಾರ ಬೆಳಗಿನ ಜಾವ 1.50 ಸಮಯದಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಕಡೆ
ಕಾರಿನಲ್ಲಿ ಹೋಗುತ್ತಿದ್ದರು. ದೇವನಹಳ್ಳಿ ತಾಲೂಕಿನ ಸಣ್ಣ ಮಾನಿಕೆರೆ ಗೇಟ್‌ ಬಳಿ ಲಾರಿಯನ್ನು ಹಿಂದಿಕ್ಕುವಾಗ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಚಾಲಕ, ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. 

Trending videos

Back to Top