ಬಂದ್‌ಗೆ ಬೆಂಗಳೂರು ಸ್ತಬ್ದ


Team Udayavani, Sep 11, 2018, 12:29 PM IST

bandh.jpg

ಬೆಂಗಳೂರು: ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ವಿರೋಧಿಸಿ ಕರೆ ನೀಡಿದ್ದ ಭಾರತ ಬಂದ್‌ಗೆ ನಗರದ ಅಕ್ಷರಶಃ ಸ್ತಬ್ದಗೊಂಡಿತು. ಪರಿಣಾಮ ಗಿಜುಗುಡುತ್ತಿದ್ದ ಬೆಂಗಳೂರು ಬಹುತೇಕ ಇಡೀ ದಿನ ಮಲಗಿತ್ತು! ಇಡೀ ನಗರದಲ್ಲಿ ಸೋಮವಾರ ಲಭ್ಯವಿದ್ದ ಏಕೈಕ ಸಾರ್ವಜನಿಕ ಸಾರಿಗೆ ಸೇವೆ “ನಮ್ಮ ಮೆಟ್ರೋ’.

ಕೆಲವು ಸ್ವಯಂಪ್ರೇರಿತ ಮತ್ತು ಹಲವೆಡೆ ಒತ್ತಯಪೂರ್ವಕವಾಗಿ “ಬಂದ್‌’ ಮಾಡಲಾಯಿತು. ಈ ಮೊದಲೇ ಸರ್ಕಾರಿ ಬಸ್‌ ನೌಕರರ ಸಂಘ ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಸಂಘ ಬೆಂಬಲ ಘೋಷಿಸಿದ್ದರಿಂದ ಅವೆರಡೂ ರಸ್ತೆಗಿಳಿಯಲಿಲ್ಲ. ಆಟೋಗಳು ಅಪರೂಪಕ್ಕೆ ಕಾಣಿಸಿಕೊಂಡವು. ಇದರಿಂದ ಬಂದ್‌ ಬಿಸಿ ನಗರಕ್ಕೆ ತುಸು ಜೋರಾಗಿಯೇ ತಟ್ಟಿತು. 

ವಾರಾಂತ್ಯದ ರಜಾ ಮಜಾ ಮುಗಿಸಿಕೊಂಡು ಬೆಳಿಗ್ಗೆ ನಗರಕ್ಕೆ ಬಂದಿಳಿದವರಿಗೆ ಬಂದ್‌ ಶಾಕ್‌ ನೀಡಿತು. ಬಸ್‌, ಆಟೋ, ಟ್ಯಾಕ್ಸಿಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಇನ್ನು ಬೆಳಿಗ್ಗೆ ಕೆಲಸಕ್ಕೆ ಹೋಗಬೇಕಾದವರು ಖಾಸಗಿ ವಾಹನಗಳ ಮೊರೆಹೋದರು. ಈ ಸೌಲಭ್ಯ ಇಲ್ಲದವರು ಮನೆಗಳಲ್ಲೇ ಉಳಿದರು. ನಗರದ ಪ್ರಮುಖ ಮಾರುಕಟ್ಟೆಗಳು ಮಾರಾಟಗಾರರು ಮತ್ತು ಖರೀದಿದಾರರೂ ಇಲ್ಲದೆ ಬಿಕೋ ಎನ್ನುತ್ತಿದ್ದವು. 

ನಿಗದಿತ ಸ್ಥಳಕ್ಕೆ ತೆರಳಲಾಗದೆ, ಹಿಂತಿರುಗಲೂ ಆಗದೆ ಕಂಗಾಲಾಗಿದ್ದರು. ಹೋಟೆಲ್‌ಗ‌ಳು ಕೇವಲ ನೈತಿಕ ಬೆಂಬಲ ಸೂಚಿಸಿದ್ದವು. ಆದರೆ, ಒತ್ತಾಯಪೂರ್ವಕವಾಗಿ ಬಂದ್‌ ಮಾಡಿದ್ದರಿಂದ ಪ್ರಯಾಣಿಕರು ಊಟ-ತಿಂಡಿಗೂ ಪರದಾಡುವಂತಾಯಿತು. ಗಂಟೆಗಟ್ಟಲೆ ಬಸ್‌ ಸಂಚಾರವನ್ನೇ ಎದುರು ನೋಡುತ್ತಿದ್ದ ಅನೇಕರು ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಕಾದುಕುಳಿತಿದ್ದರು. 

ಬಸ್‌ ಸಂಚಾರ – ಅರ್ಧಕ್ಕರ್ಧ ಕಡಿತ: ಸಾಮಾನ್ಯವಾಗಿ ಬೆಳಗಿನಜಾವ 6ರಿಂದ ಮಧ್ಯಾಹ್ನದವರೆಗೆ ನಗರದಲ್ಲಿ 3 ಸಾವಿರ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಆದರೆ, ಅರ್ಧಕ್ಕಧ ಬಸ್‌ಗಳು ಸಂಚರಿಸಿಲ್ಲ. “ಪೀಕ್‌ ಅವರ್‌’ನಲ್ಲಂತೂ ಬಸ್‌ಗಳು ಇರಲೇ ಇಲ್ಲ. ಅದೇ ರೀತಿ, ಕೆಎಸ್‌ಆರ್‌ಟಿಸಿಯಿಂದ ಸಂಜೆ 4ರವರೆಗೆ 5,585 ಬಸ್‌ಗಳ ಪೈಕಿ ಕೇವಲ 1,056 ಕಾರ್ಯಾಚರಣೆ ಮಾಡಿವೆ. ಎರಡೂ ನಿಗಮಗಳು ಸೇರಿ 9.34 ಕೋಟಿ ರೂ. ಆದಾಯ ಖೋತಾ ಆಗಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು. 

ಹೋರಾಟಕ್ಕೆ ಆಟೋ ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿ ಸಂಘಟನೆಗಳು ಕೂಡ ಬೆಂಬಲ ಸೂಚಿಸಿದ್ದರಿಂದ ಸೇವೆ ತುಂಬಾ ವಿರಳವಾಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಒಮ್ಮೆಲೆ ನಗರಕ್ಕೆ ಬಂದಿಳಿದವರಿಗೆ ಮಾತ್ರ ಇದರ ಬಿಸಿ ತಟ್ಟಿತು. ಕಕ್ಕಾಬಿಕ್ಕಿಯಾದ ಈ ಪ್ರಯಾಣಿಕರು ದುಪ್ಪಟ್ಟು ಹಣ ಕೊಟ್ಟು, ನಿಗದಿತ ಸ್ಥಳ ತಲುಪಿದರು. ಇನ್ನು ಕೆಲವರು ಸ್ನೇಹಿತರು ಅಥವಾ ಸಂಬಂಧಿಗಳ ನೆರವಿನಿಂದ ಗೂಡು ಸೇರಿದರು. 

ಆಟೋ, ಕ್ಯಾಬ್‌ ಸುಲಿಗೆ: ಆರಂಭದಲ್ಲಿ ಆಟೋ, ಕ್ಯಾಬ್‌ಗಳು ನಗರದ ಹಲವೆಡೆ ಸಂಚರಿಸುತ್ತಿದ್ದುದು ಕಂಡುಬಂತು. ಆದರೆ, ಕಾರ್ಯಕರ್ತರು ಅಂತಹ ವಾಹನಗಳನ್ನು ತಡೆದು ತರಾಟೆಗೆ ತೆಗೆದುಕೊಂಡರು. ತದನಂತರ ಆಟೋಗಳು ಅಪರೂಪವಾದವು. ಅವರೆಲ್ಲಾ ಪರಿಸ್ಥಿತಿಯ ಲಾಭ ಪಡೆದು, ದುಪ್ಪಟ್ಟು ಸುಲಿಗೆ ಮಾಡಿದ ಆರೋಪಗಳು ಪ್ರಯಾಣಿಕರಿಂದ ಕೇಳಿಬಂದವು. 

ಏರ್‌ಪೋರ್ಟ್‌ ರಸ್ತೆ ತಡೆಗೆ ಯತ್ನ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆ¨ªಾರಿ ತಡೆಗೂ ಕ್ಯಾಬ್‌ ಚಾಲಕರು ಯತ್ನಿಸಿದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.  ಟೋಲ್‌ ಬಳಿ ರಸ್ತೆ ತಡೆಗೆ ಕ್ಯಾಬ್‌ ಚಾಲಕರು ಮತ್ತು ಬಂದ್‌ನಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮುಂದಾದರು.

ಆಗ ಮಧ್ಯಪ್ರವೇಶಿಸಿದ ಪೊಲೀಸರು, ಇದಕ್ಕೆ ಅವಕಾಶ ನೀಡಲಿಲ್ಲ. ವಿವಿಧ ರಾಜ್ಯ ಮತ್ತು ದೇಶಗಳಿಂದ ಪ್ರಯಾಣಿಕರು ಬಂದಿಳಿಯುತ್ತಾರೆ. ಅವರೆಲ್ಲರಿಗೂ ಇದು ಸಮಸ್ಯೆ ಆಗುತ್ತದೆ ಎಂದು ಮನವೊಲಿಸಿ ವಾಪಸ್‌ ಕಳುಹಿಸಿದರು. ಈ ಮಧ್ಯೆ ವಿಮಾನ ನಿಲ್ದಾಣ ಆವರಣದಲ್ಲಿ ಟ್ಯಾಕ್ಸಿಗಳನ್ನು ಹಗ್ಗಕಟ್ಟಿ ಎಳೆಯುವ ಮೂಲಕ ಚಾಲಕರು ವಿನೂತನ ಪ್ರತಿಭಟನೆ ನಡೆಸಿದರು.

ಐಟಿ ಕಂಪನಿಗಳಿಗೂ ತಟ್ಟಿದ ಬಿಸಿ: ಹತ್ತಾರು ಐಟಿ ಕಂಪೆನಿಗಳಿಗೂ ಬಂದ್‌ ಬಿಸಿ ತಟ್ಟಿತು. ಮುಂಚಿತವಾಗಿ ಯಾವುದೇ ಬೆಂಬಲ ಘೋಷಿಸಿರಲಿಲ್ಲ. ಆದರೆ, ಬಂದ್‌ ಕಾವು ಜೋರಾಗಿತ್ತು. ಅಲ್ಲಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ಮೂಲಕ ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ…, ಎಚ್‌ಎಎಲ್‌, ಮಾರತಹಳ್ಳಿ, ವರ್ತೂರು ಸುತ್ತಲಿನ ಕಂಪೆನಿಗಳಿಗೆ ನಂತರದಲ್ಲಿ ರಜೆ ಘೋಷಿಸಲಾಯಿತು.  

ಬಾರದ ತರಕಾರಿ – ಕೋಟ್ಯಂತರ ರೂ. ನಷ್ಟ: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿಳಿಯುವ ಮತ್ತು ಹೊರಗಡೆ ಹೋಗುವ ನೂರಾರು ಟನ್‌ ತರಕಾರಿ ವ್ಯಾಪಾರ ಸ್ಥಗಿತಗೊಂಡಿತ್ತು.  ನಿತ್ಯ ಬೆಂಗಳೂರಿಗೆ ವಿವಿಧೆಡೆಯಿಂದ ಸುಮಾರು 500 ಟನ್‌ ತರಕಾರಿ ಬರುತ್ತದೆ. ಅದೇ ರೀತಿ, ಇಲ್ಲಿಂದ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮುಂಬೈ, ಕೊಲ್ಕತ್ತ, ಮಂಗಳೂರು ಮತ್ತಿತರ ಕಡೆ ನೂರಾರು ಟನ್‌ ತರಕಾರಿ ಹೋಗುತ್ತದೆ.

ಆದರೆ, ಬಂದ್‌ ಹಿನ್ನೆಲೆಯಲ್ಲಿ ಇದೆಲ್ಲವೂ ಸ್ಥಗಿತಗೊಂಡಿದೆ. ಪರಿಣಾಮ ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಬನಶಂಕರಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು ಎಂದು ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ತಿಳಿಸಿದರು. ಅಲ್ಲದೆ, ಹಿಮಾಚಲಪ್ರದೇಶ, ಮಹಾರಾಷ್ಟ್ರ, ನಾಗ್ಪುರ, ಕಾಶ್ಮೀರ, ಗುಜರಾತಿನಿಂದ ಹಣ್ಣು ಇಲ್ಲಿಗೆ ಬರುತ್ತದೆ.

ಇಲ್ಲಿಂದ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣಕ್ಕೆ ಹೋಗುತ್ತದೆ. ನಿತ್ಯ ಸರಾಸರಿ 2ರಿಂದ 3 ಸಾವಿರ ಟನ್‌ ಬರುತ್ತದೆ. ಹೊರರಾಜ್ಯಗಳಿಂದ ಎಂದಿನಂತೆ ಸಾವಿರ ಟನ್‌ನಷ್ಟು ಹಣ್ಣು ಬಂದಿಳಿದಿದೆ. ಇದರ ವ್ಯಾಪಾರ ವಹಿವಾಟು ನಡೆದಿಲ್ಲ. ಇನ್ನು ಸುತ್ತಲಿನ ಊರುಗಳಿಂದಲೂ ಬರುವ ನೂರಾರು ಟನ್‌ ಹಣ್ಣಿನ ಪೂರೈಕೆಯಲ್ಲಿ ಖೋತಾ ಆಗಿದೆ ಎಂದು ಬೆಂಗಳೂರು ಹಣ್ಣಿನ ವ್ಯಾಪಾರಿಗಳ ಸಂಘ ಅಧ್ಯಕ್ಷ ಸೈಯ್ಯದ್‌ ಮಕೀಮ್‌ ಅಗ ತಿಳಿಸಿದ್ದಾರೆ. 

ಪ್ರಾಣಿದಯಾ ಸಂಘ ಆಕ್ಷೇಪ: ಬಂದ್‌ನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕುದುರೆ, ಎಮ್ಮೆ, ಕತ್ತೆಗಳೊಂದಿಗೆ ಭಾಗವಹಿಸುವ ಮೂಲಕ ಗಮನಸೆಳೆದರು. ಆದರೆ ಈ ಪ್ರಾಣಿಗಳ ಬಳಕೆಗೆ ಪ್ರಾಣಿದಯಾ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಲು ಚಿಂತನೆ ನಡೆಸಿದೆ.

ಕನ್ನಡ ಒಕ್ಕೂಟದ ವಾಟಾಳ್‌ ನಾಗರಾಜ್‌, ಎಮ್ಮೆಯ ಮೇಲೆ ಮೆಜೆಸ್ಟಿಕ್‌ ಒಂದು ಸುತ್ತು ಹಾಕಿದರೆ, ಬಸವನಗುಡಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ ಕುದುರೆ ಸವಾರಿ ಮೂಲಕ ತೈಲ ದರ ಏರಿಕೆ ವಿರುದ್ಧ ಪ್ರತಿಭಟಿಸಿದರು. ಮತ್ತೂಂದು ಸಂಘಟನೆ ಕತ್ತೆಯನ್ನು ಕರೆತಂದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

ಆದರೆ, ಹೀಗೆ ಪ್ರತಿಭಟನೆಗೆ ಪ್ರಾಣಿಗಳನ್ನು ಬಳಸಿಕೊಂಡಿರುವುದಕ್ಕೆ ಅಖೀಲ ಕರ್ನಾಟಕ ಪ್ರಾಣಿದಯಾ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಘದ ಸದಸ್ಯ ಸುನಿಲ್‌, “ಪ್ರತಿಭಟನೆ ಹೆಸರಿನಲ್ಲಿ ಪ್ರಾಣಿ ಹಿಂಸೆ ಖಂಡನೀಯ. ಜನರ ಸಮಸ್ಯೆಗಳಿಗೆ ಪ್ರತಿಭಟನೆ ಮಾಡಬೇಕು ಎಂದು ಗೊತ್ತಾಗುತ್ತದೆ.

ಆ ಪ್ರತಿಭಟನೆಗೆ ಪ್ರಾಣಿಗಳನ್ನು ಬಳಸಿಕೊಂಡು ಹಿಂಸಿಸಬಾರದು ಎಂಬುದು ತಿಳಿಯುವುದಿಲ್ಲವೆ. ವಾಟಾಳ್‌ ಅವರು ಪ್ರತಿಭಟನೆ ಹೆಸರಿನಲ್ಲಿ ಪ್ರಾಣಿಗಳ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ’ ಎಂದು ದೂರಿದರು. ಈ ರೀತಿ ಪ್ರಾಣಿಗಳನ್ನು ಬಳಕೆ ಮಾಡಿರುವುದರ ವಿರುದ್ಧ “ಪ್ರಾಣಿಹಿಂಸೆ ತಡೆ ಕಾಯ್ದೆ’ ಅಡಿ ಪೊಲೀಸ್‌ ಆಯುಕ್ತರು ದೂರು ಸಲ್ಲಿಸಲು ಚಿಂತನೆ ನಡೆದಿದೆ ಎಂದೂ ಹೇಳಿದರು.

ಪಿಜಿಆರ್‌ ಸಿಂಧ್ಯಾ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುವ ಸ್ಥಳಕ್ಕೆ ಶರವಣ ಕುದುರೆ ಏರಿ ಬಂದರು. ತಕ್ಷಣ ಪ್ರತಿಭಟನಾನಿರತರು ಭಾಷಣ ಬಿಟ್ಟು ಶರವಣ ಕರೆ ತೆರಳಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಪಿಜಿಆರ್‌ ಸಿಂಧ್ಯಾ, “ಪ್ರತಿಭಟನೆ ನೀವೇ ಮಾಡಿಕೊಳ್ಳಿ’ ಎಂದು ನಿರ್ಗಮಿಸಿದರು.

ಡಿಸ್‌ಚಾರ್ಜ್‌ ಮಾಡ್ಬೇಡಿ ಪ್ಲೀಸ್‌!: “ಸರ್‌, ಬಂದ್‌ ಇದೆ. ಹಾಗಾಗಿ, ಡಿಸ್‌ಚಾರ್ಜ್‌ ಮಾಡಬೇಡಿ ಪ್ಲೀಸ್‌’ ಎಂದು ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳು ವೈದ್ಯರಿಗೆ ದುಂಬಾಲು ಬೀಳುತ್ತಿರುವುದು ಕಂಡುಬಂತು. ಒಳರೋಗಿಗಳ ವಿಭಾಗದಲ್ಲಿ ಸಂಪೂರ್ಣ ಚಿಕಿತ್ಸೆ ಪಡೆದುಕೊಂಡು ಸೋಮವಾರ ಆಸ್ಪತ್ರೆಗಳಿಂದ ಡಿಸ್‌ಚಾರ್ಜ್‌ ಆಗಬೇಕಾದ ಕೆಲ ರೋಗಿಗಳು ಬಂದ್‌ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮಂಗಳವಾರ ಮುಂದೂಡಿದರು.

ಈ ಸಂಬಂಧ ವೈದ್ಯರಿಗೆ ಮನವಿ ಮಾಡುತ್ತಿರುವುದು ವಿಕ್ಟೋರಿಯಾ, ಬೌರಿಂಗ್‌ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಕಂಡುಬಂತು. ಬುಧವಾರ ಹಾಗೂ ಗುರುವಾರ ಗೌರಿ-ಗಣೇಶನ ಹಬ್ಬ ಇದೆ. ಸೋಮವಾರ ಬಂದ್‌ ಇಲ್ಲದಿದ್ದರೆ ನಾವು ಊರು ತಲುಪಿ ಹಬ್ಬದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು ಎಂದೂ ಆ ರೋಗಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಈ ಮಧ್ಯೆ ಬೆಂಗಳೂರಿನಲ್ಲಿ ನೆಲೆಸಿರುವ ಹಾಗೂ ಸ್ವಂತ ವಾಹನ ಹೊಂದಿರುವವರು ವೈದ್ಯರ ಸೂಚನೆ ಮೇರೆಗೆ ಡಿಸ್‌ಚಾರ್ಜ್‌ ಆದರು. 

ಇನ್ನು ರೋಗಿಗಳು ಮತ್ತು ಅವರೊಂದಿಗೆ ಬಂದ ಸಂಬಂಧಿಕರು ಎಳನೀರು, ಚಹಾಕ್ಕೂ ಪರದಾಡುವಂತಾಯಿತು. ಮಾಗಡಿ ಸಮೀಪದ ಬೈರೇಗೌಡ ಹಾಗೂ ಬೋರೇಗೌಡ ಅವರಿಬ್ಬರೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರು ಎಳನೀರಿನಂತಹ ದ್ರವ ಪದಾರ್ಥ ಮಾತ್ರ ಸೇವನೆಗೆ ಸೂಚನೆ ನೀಡಿದ್ದರು. ಆದರೆ, ಇದಕ್ಕಾಗಿ ಕಿ.ಮೀ.ಗಟ್ಟಲೆ ನಡೆಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. 

ನಗರದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಎಂದಿಗಿಂತ ಕಡಿಮೆ ಇತ್ತು. ಮೂತ್ರ ಪರೀಕ್ಷೆ, ಎಕ್ಸ್‌-ರೇ, ರಕ್ತ ಪರೀಕ್ಷೆ, ಸಿಟಿಸ್ಕ್ಯಾನ್‌ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವವರು ಹಾಗೂ ಪ್ರಮಾಣಪತ್ರ ಪಡೆದುಕೊಳ್ಳುವವರ ಪ್ರಮಾಣವೂ ಕಡಿಮೆ ಇತ್ತು. ಉಳಿದ ದಿನಗಳಿಗೆ ಹೋಲಿಸಿದರೆ ಬೌರಿಂಗ್‌ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಶೇ. 60ರಷ್ಟು ಇಳಿಮುಖವಾಗಿತ್ತು. ಇಲ್ಲಿ ನಿತ್ಯ ಒಳರೋಗಿಗಳ ವಿಭಾಗದಲ್ಲಿ ಸಾಮಾನ್ಯವಾಗಿ 80-85 ಮಂದಿ ಬಿಡುಗಡೆಗೊಳ್ಳುತ್ತಿದ್ದರು. ಸೋಮವಾರ ಕೇವಲ 35-40 ಮಂದಿ ಡಿಸ್‌ಚಾರ್ಜ್‌ ಆಗಿದ್ದಾರೆ ಎಂದು ಆಸ್ಪತ್ರೆ ವೈದ್ಯರೊಬ್ಬರು ತಿಳಿಸಿದರು.

65 ಪ್ರತಿಭಟನಾಕಾರರ ಬಂಧನ, ಬಿಡುಗಡೆ: “ಭಾರತ್‌ ಬಂದ್‌’ ಹಿನ್ನೆಲೆಯಲ್ಲಿ ನಗರಾದ್ಯಂತ ಸುಮಾರು 65ಕ್ಕೂ ಹೆಚ್ಚು ಜನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ರಾಜಭವನ ಮುತ್ತಿಗೆಗೆ ಯತ್ನಿಸಿದ ಐಎನ್‌ಟಿಯುಸಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ.

ಚಾಲುಕ್ಯ ವೃತ್ತದ ಬಳಿ ಐನ್‌ಟಿಯುಸಿ ಕಾರ್ಯಕರ್ತರು ಪ್ರತಿಭಟನೆ ಹೆಸರಿನಲ್ಲಿ ವಾಹನ ಸವಾರರನ್ನು ತಡೆದು ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ವಲಯ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದರು.  ಅದೇ ರೀತಿ, ರಾಜಭವನದ ಕಡೆ ಆಗಮಿಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ 55ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮೇಕ್ರಿ ವೃತ್ತದ ಬಳಿ ವಶಕ್ಕೆ ಪಡೆದು ಸಂಜೆ ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಆಯುಕ್ತ ಟಿ. ಸುನಿಲ್‌ ಕುಮಾರ್‌, “ಭಾರತ್‌ ಬಂದ್‌’ ಸಂಬಂಧ ಯಾವುದೇ ಎಫ್ಐಆರ್‌ ದಾಖಲಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ 65ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಹೊರತು ಪಡಿಸಿ ನಗರದಲ್ಲಿ ಶಾಂತಿಯುತ ಬಂದ್‌ ನಡೆದಿದೆ ಎಂದರು.

ಬಿಕೋ ಎನ್ನುತ್ತಿದ್ದ ಕಚೇರಿಗಳು: ಬಂದ್‌ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಸೇರಿದಂತೆ ಎಲ್ಲ ಕಚೇರಿಗಳು ಬಿಕೋ ಎನ್ನುತ್ತಿದ್ದವು. ನಿತ್ಯ ನೂರಾರು ಜನರಿಂದ ತುಂಬಿರುತ್ತಿದ್ದ ಸ್ಥಳೀಯ ಸಂಸ್ಥೆಗಳ ಕಚೇರಿಗಳು ಸೋಮವಾರ ಖಾಲಿ ಖಾಲಿ ಆಗಿದ್ದವು. ಜತೆಗೆ ಶೇ. 70ರಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಮಧ್ಯಾಹ್ನದ ವೇಳೆಗೆ ಮನೆ ಕಡೆಗೆ ಮುಖಮಾಡಿದರು. 

ಆದರೆ, ಕಾಂಗ್ರೆಸ್‌ನಿಂದಲೇ ಬಂದ್‌ಗೆ ಕರೆ ಕೊಟ್ಟಿದ್ದರೂ ಮೇಯರ್‌ ಸಂಪತ್‌ರಾಜ್‌ ಮಾತ್ರ ಕೆಲಸದಲ್ಲಿ “ಬ್ಯುಸಿ’ಯಾಗಿದ್ದರು. ಕಾಂಗ್ರೆಸ್‌ನ ಮೇಯರ್‌ ಬಂದ್‌ಗೆ ಬೆಂಬಲ ನೀಡಿಲ್ಲ. ಇನ್ನು ಬಂದ್‌ ಎಷ್ಟರ ಮಟ್ಟಿಗೆ ಸಫ‌ಲ ಎಂದು ಕೆಲ ಬಿಜೆಪಿ ಮುಖಂಡರು ಲೇವಡಿ ಮಾಡಿದರೆ, ಸ್ವ ಪಕ್ಷದ ಸದಸ್ಯರಿಂದಲೂ ಮೇಯರ್‌ ವಿರುದ್ಧ ಟೀಕೆಗಳು ಕೇಳಿಬಂದವು. 

ಮಾಲ್‌ಗ‌ಳಿಗೆ ಬಿಗಿ ಭದ್ರತೆ: ಬಂದ್‌ ಬಿಸಿ ನಗರದಲ್ಲಿನ ಎಲ್ಲ ಮಾಲ್‌ಗ‌ಳಿಗೆ ತಟ್ಟಿದರಿಂದಾಗಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಯಂ ಪ್ರೇರಿತವಾಗಿ ಮಾಲ್‌ಗ‌ಳನ್ನು ಮುಚ್ಚಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮಾಲ್‌ಗ‌ಳಿಗೆ ಕಲ್ಲು ಬೀಳದಂತೆ ಮುಂಭಾಗದ ಆವರಣದಲ್ಲಿ ಬಲೆಗಳನ್ನು ಹಾಕಲಾಗಿತ್ತು.

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.