CONNECT WITH US  

ಡಿಪ್ಲೊಮಾ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ

ಬೆಂಗಳೂರು: ಡಿಪ್ಲೊಮಾ ಅಭ್ಯರ್ಥಿಗಳಿಗೆ ಎರಡನೇ ವರ್ಷದ ಇಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೊದಲ ಸುತ್ತಿನ ಸೀಟು ಹಂಚಿಕೆಯ ಫ‌ಲಿತಾಂಶ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸೀಟು ಹಂಚಿಕೆಯ ಫ‌ಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನೋಡಬಹುದು.

ಫ‌ಲಿತಾಂಶ ಪರಿಶೀಲಿಸಿದ ನಂತರ ನಿಗದಿಪಡಿಸಿರುವ ನಾಲ್ಕು ಚಾಯ್ಸಗಳಲ್ಲಿ ಯಾವುದಾದರು ಒಂದು ಚಾಯ್ಸ ಆಯ್ಕೆ ಮಾಡುವ ಮೊದಲು ಅದರಿಂದ ಆಗಬಹುದಾದ ದುಷ್ಪರಿಣಾಮದ ಬಗ್ಗೆ ಎಚ್ಚರ ವಹಿಸಬೇಕು. ಪಾಲಕ, ಪೋಷಕರ ಜತೆಗೆ ಚರ್ಚಿಸಿ ಸೂಕ್ತ ಆಯ್ಕೆ ಮಾಡಿ ಎಂದು ಪ್ರಾಧಿಕಾರ ತಿಳಿಸಿದೆ. ವೇಳಾಪಟ್ಟಿಯ ಮತ್ತು ಇತರೆ ಮಾಹಿತಿ ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.

Trending videos

Back to Top