CONNECT WITH US  

ಸೆ.18ರಂದು ವಿಷ್ಣು ಜನ್ಮದಿನೋತ್ಸವ

ಬೆಂಗಳೂರು: ಹಿತೈಷಿ ಡಾ.ವಿಷ್ಣುವರ್ಧನ್‌ ಅಭಿಮಾನಿಗಳ ಬಳಗ ಹಾಗೂ ಶೃಂಗಾರ ಶಿಲ್ಪಿ ಡಾ.ವಿಷ್ಣುವರ್ಧನ್‌ ಅಭಿಮಾನಿಗಳ ಸಂಘ, ಸೆ.18 ರಂದು ಬೆಳಗ್ಗೆ 10 ಗಂಟೆಗೆ ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣು ಜನ್ಮದಿನೋತ್ಸವವನ್ನು ಏರ್ಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಂ.ಬಿ.ಲೋಕೇಶ್‌ಗೌಡ ಮಾತನಾಡಿ, ಅಂದು ಕೆವಿಕೆ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಿದ್ದು, ವಿಷ್ಣು ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಅನ್ನಸಂತರ್ಪಣೆ ನಡೆಸಲಾಗವುದು ಎಂದು ಮಾಹಿತಿ ನೀಡಿದರು.

Trending videos

Back to Top