CONNECT WITH US  

ಹ್ಯೂಮನ್‌ ಹಾರ್ವೆಸ್ಟ್‌ ಸಾಕ್ಷ್ಯ ಚಿತ್ರ ಪ್ರದರ್ಶನ

ಬೆಂಗಳೂರು: ಫಾಲುನ್‌ ದಾಫಾ ಅಸೋಸಿಯೇಷನ್‌ ಆಫ್‌ಇಂಡಿಯ ವತಿಯಿಂದ ಬನಶಂಕರಿ ಎರಡನೇ ಹಂತದ ಸುಚಿತ್ರ ಸಭಾಂಗಣದಲ್ಲಿ ಸೆ.16ರಂದು ಬೆಳಗ್ಗೆ 10.30ಕ್ಕೆ "ಹ್ಯೂಮನ್‌ ಹಾರ್ವೆಸ್ಟ್‌ 'ಸಾಕ್ಷ್ಯ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಾಲುನ್‌ ದಾಫಾ ಅಸೋಸಿಯೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಸಂಜೀವ್‌ ಭಲ್ಲಾ ಮಾತನಾಡಿ, ಚೀನಾದಲ್ಲಿ ಅಕ್ರಮವಾಗಿ ನಡೆವ ಮಾನವ ಅಂಗ ಮಾರಾಟದ ಬಗ್ಗೆ ಶೋಧನೆ ನಡೆಸಿದ ಕೆನಡಾ ದೇಶದ ಡೇವಿಡ್‌ ಮಟಾಸ್‌ ಹಾಗೂ ಡೇವಿಡ್‌ ಕಿಲ್ಗೊರ್‌ ಅವರುಗಳ ವರದಿಯನ್ನು ಅವಲಂಸಿದ "ಹ್ಯೂಮನ್‌ ಹಾರ್ವೆಸ್ಟ್‌' ಸಾಕ್ಷ್ಯ ಚಿತ್ರ ನಿರ್ಮಿಸಲಾಗಿದೆ.

ಇನ್ನು ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮದಲ್ಲಿ ಅಮ್ನಿಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯದರ್ಶಿ ನಿರ್ದೇಶಕ ಆಕಾರ್‌ ಪಟೇಲ್‌,ನಟ,ನಿರ್ದೇಶಕ ಪ್ರಕಾಶ್‌ ಬೆಳವಾಡಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.  ಸಂವಾದದಲ್ಲಿ ಪಾಲ್ಗೊಳ್ಳ ಬಯಸುವವರು 9341255561, 9108552846 ನಂ.ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು.

Trending videos

Back to Top