CONNECT WITH US  

ನಿರ್ಬಂಧ ಹಿಂಪಡೆಯಿರಿ

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ವಿಧಿಸಿರುವ ಷರತ್ತುಗಳನ್ನು ಹಿಂಪಡೆಯಬೇಕು ಎಂದು ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ. ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಹೊನ್ನವಳ್ಳಿ ರಾಜಣ್ಣ ಮಾತನಾಡಿ, ನಾರಾರು ವರ್ಷಗಳಿಂದ ಗಣೇಶೋತ್ಸವವು ಸಾರ್ವಜನಿಕ ರೂಪವನ್ನು ಪಡೆದು ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ.

ಈ ಧಾರ್ಮಿಕ ಉತ್ಸವವನ್ನು ರಾಷ್ಟ್ರೀಯ ಹಿನ್ನಲೆಯಲ್ಲಿ ಆಚರಿಸಲಾಗುತ್ತಿದ್ದು, ಇದರ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳದವರು ಹಿಂದು ವಿರೋಧಿ ಅಧಿಕಾರಶಾಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗುವ ನಿಯಮಗಳನ್ನು ಅಧಿಕಾರಿಗಳಿಂದ ವಿಧಿಸಬಾರದು.

ಈ ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಈ ರೀತಿಯ ಆದೇಶಗಳು ಕರ್ನಾಟಕದಲ್ಲಿ ಜಾರಿಯಾಗದಂತೆ ಎಚ್ಚರವಹಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಧಿಸುತ್ತಿರುವ ನಿಬಂಧನೆ, ಷರತ್ತುಗಳನ್ನು ಹಿಂಪಡೆದು ಹಬ್ಬದ ಆಚರಣೆಗೆ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಹಿಸಿದರು.

Trending videos

Back to Top