CONNECT WITH US  

ಕೆ.ಸಿ ವ್ಯಾಲಿ ತಡೆಯಾಜ್ಞೆ ವಿಚಾರಣೆ ಸೆ.20ಕ್ಕೆ ಮುಂದೂಡಿಕೆ

ಬೆಂಗಳೂರು: ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ಕೆ.ಸಿ ವ್ಯಾಲಿಯಿಂದ ನೀರು ಹರಿಸುವುದಕ್ಕೆ ವಿಧಿಸಿರುವ ತಡೆಯಾಜ್ಞೆ ವಿಸ್ತರಿಸಿರುವ ಹೈಕೋರ್ಟ್‌, ಗುಣಮಟ್ಟ ಖಾತ್ರಿಯಾಗುವ ತನಕ ನೀರು ಹರಿಸುವುದು ಬೇಡ ಎಂದು ರಾಜ್ಯಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

ಈ ಕುರಿತು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಆಂಜನೇಯರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ ಎಸ್‌.ಜಿ ಪಂಡಿತ್‌ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ನಡೆಸಿತು.

ವಿಚಾರಣೆ ವೇಳೆ ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಕೆರೆಗಳಿಗೆ ನೀರುಹರಿಸಲು ಅಳವಡಿಸಲಾಗಿರುವ ಎರಡು ಜಾಕ್‌ವೆಲ್‌ಗ‌ಳಲ್ಲಿ ನಡುವಣ ನೀರು ಹರಿಸಿ,ಆ ನೀರಿನ ವೈಜ್ಞಾನಿಕ ಗುಣಮಟ್ಟದ ವರದಿಯನ್ನು ಮುಂದಿನ ವಿಚಾರಣೆ ಸೆ.20ರಂದು ಸಲ್ಲಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸಿತು. ತಡೆಯಾಜ್ಞೆ ತೆರವಿಗೆ ನಿರಾಕರಿಸಿತು.

Trending videos

Back to Top