CONNECT WITH US  

ಹಬ್ಬಕ್ಕೆ ಪ್ರಯಾಣಿಕರ ದಟ್ಟಣೆ ಜೋರು

ಬೆಂಗಳೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ಮಂಗಳವಾರ ಮೆಜೆಸ್ಟಿಕ್‌ನಲ್ಲಿರುವ ಬಸ್‌ ಮತ್ತು ರೈಲು ನಿಲ್ದಾಣಗಳು, ಶಿವಾಜಿನಗರ, ಮೈಸೂರು ರಸ್ತೆ ಸ್ಯಾಟಲೈಟ್‌, ಯಶವಂತಪುರ ರೈಲು ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳು ಪ್ರಯಾಣಿಕರಿಂದ ಗಿಜಗುಡುತ್ತಿದ್ದವು. 

ರಾತ್ರಿ 11ರವರೆಗೂ ನಿಲ್ದಾಣಗಳಲ್ಲಿ ಎಂದಿಗಿಂತ ಹೆಚ್ಚು ಜನಜಂಗುಳಿ ಇತ್ತು. ನಿರ್ವಹಣೆಗಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿತ್ತು. ಬುಧವಾರ ರಾತ್ರಿ ಈ ಸಂಖ್ಯೆ ಇನ್ನೂ ದುಪ್ಪಟ್ಟಾಗಲಿದೆ. ಹಬ್ಬದ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿದ್ದುದರಿಂದ ಬಸ್‌ ಮತ್ತು ರೈಲುಗಳು ಈ ಮೊದಲೇ ಭರ್ತಿಯಾಗಿದ್ದು, ಸಾಮಾನ್ಯ ಬಸ್‌ಗಳೂ ಖಾಲಿ ಇಲ್ಲದಂತಾಗಿದೆ.

ಹಾಗಾಗಿ, ಕೆಲವರು ಹಬ್ಬಕ್ಕೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಕಾಲ್ಕಿತ್ತಿದ್ದಾರೆ. ಇದರಿಂದ ಪ್ರಮುಖ ನಿಲ್ದಾಣಗಳನ್ನು ಕೂಡುವ ರಸ್ತೆಗಳುದ್ದಕ್ಕೂ ಸಂಚಾರದಟ್ಟಣೆಯೂ ಉಂಟಾಯಿತು. ಮೆಟ್ರೋ ರೈಲುಗಳಲ್ಲಂತೂ ಕಾಲಿಡಲಿಕ್ಕೂ ಜಾಗ ಇರಲಿಲ್ಲ. ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಒಟ್ಟಾರೆ 1,200 ಬಸ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದು ಎಂದು ಕೆಎಸ್‌ಆರ್‌ಟಿಸಿ ಮೆಜೆಸ್ಟಿಕ್‌ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.  


Trending videos

Back to Top