ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವು: ಕೊಲೆ ಶಂಕೆ

Team Udayavani, Sep 18, 2018, 12:23 PM IST

idane.jpg

ಬೆಂಗಳೂರು: ಉತ್ತರಹಳ್ಳಿಯ ಮಂತ್ರಿ ಅಫೈನ್‌ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಭಾನುವಾರ ಬಿದ್ದು ಮೃತಪಟ್ಟ ಛತ್ತಿಸ್‌ಘಡ ಮೂಲದ ಸೋನಾಲ್‌ ಅಗರ್‌ವಾಲ್‌  ಸಾವಿಗೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮೃತ ಮಹಿಳೆ ಸೋನಾಲ್‌ ಅಗರ್‌ವಾಲ್‌ ಪತಿ ವೈದ್ಯ ಅವಿನಾಶ್‌ ಅಗರ್‌ವಾಲ್‌ ನೀಡಿದ ದೂರಿನ ಅನ್ವಯ, ಐಪಿಸಿ ಕಲಂ 302ರ ಅನ್ವಯವೇ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ, ತನಿಖೆ ಪೂರ್ಣಗೊಂಡ ಬಳಿಕವೇ ಮಹಿಳೆಯ ಸಾವಿನ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದರು.

ತಾನು ಕೆಲಸ  ಮಾಡುವ ಆಸ್ಪತ್ರೆಯಿಂದ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಮನೆಗೆ ಆಗಮಿಸಿದ್ದಾಗ, ಪತ್ನಿ, ನಾದಿನಿ ಹಾಗೂ ಮಗ ಮನೆಯಲ್ಲಿಯೇ ಇದ್ದರು. ನಾದಿನಿ ಹಾಗೂ ಮಗ ಇಬ್ಬರೂ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೋಡಿಕೊಂಡು ಬರುತ್ತೇವೆ ಎಂದು ಹೊರಗಡೆ ಹೋದರು. ಇದಾದ ಕೆಲ ಸಮಯದ ಬಳಿಕ ನಾನು ಸ್ನಾನಕ್ಕೆ ಹೊರಟಾಗ ಪತ್ನಿ ಸೋನಾ ಕೂಡ ಹೊರಗಡೆ ಹೋಗಿ ಬರುತ್ತೇನೆ ಎಂದು ತೆರಳಿದ್ದರು.

ಇದಾದ ಅರ್ಧ ಗಂಟೆ ಬಳಿಕ ವಾಪಾಸ್‌ ಬಂದ ನಾದಿನಿ ಹಾಗೂ ಮಗ ಸೋನಾಲ್‌  ಅಪಾಟ್‌ಮೆಂಟ್‌ ಕೆಳಗೆ ಬಿದ್ದಿರುವುದನ್ನು ತಿಳಿಸಿದಾಗ ಹೋಗಿ ನೋಡಿದರೆ ಮೃತಪಟ್ಟಿದ್ದರು. ಆಕೆಯ ಕೊಲೆಯಾಗಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಅವಿನಾಶ್‌ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದರು. 

ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ ಅನೂನ್ಯವಾಗಿದ್ದರು. ಯಾವುದೇ ವೈಮನಸ್ಸು ಇರಲಿಲ್ಲ ಎಂದು ಸಂಬಂಧಿಕರಿಂದ ತಿಳಿದು ಬಂದಿದೆ. ತನಿಖೆಯನ್ನು° ಹಲವು ಆಯಾಮಗಲ್ಲಿ ಕೂಲಂಕುಶವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿಯೂ ಬರಬೇಕಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸೋನಾಲ್‌ ಸಾವಿನ ಬಗ್ಗೆ ಖಚಿತತೆ ಸಿಗಲಿದೆ ಎಂದು ಅಧಿಕಾರಿ ತಿಳಿಸಿದರು.

ಕಳ್ಳತನ ಆರೋಪಕ್ಕೆ ಹೆದರಿದಳೇ?: ಮೃತ ಸೋನಾ ಎದುರುಗಡೆ ಮನೆಯ ಫ್ಲ್ಯಾಟ್‌ನಿಂದ ಹಾರಿ ಕೆಳಗೆ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾಫ್ಟ್ವೇರ್‌ ಕಂಪೆನಿಯೊಂದರ ಮಾಲೀಕರು ಆಗಿರುವ  ಆ ಫ್ಲ್ಯಾಟ್‌ನ ಮಾಲೀಕರು ಒಂದು ವಾರದಿಂದ ಬೀಗ ಹಾಕಿಕೊಂಡು ಹೊರಗೆ ತೆರಳಿದ್ದಾರೆ ಎಂಬ ಮಾಹಿತಿಯಿದೆ. ಜತೆಗೆ, ಮೃತ ಸೋನಾಳ  ಒಳಉಡುಪಿನಲ್ಲಿ ಡಾಲರ್‌, ಚಿನ್ನಾಭರಣ, ಹಣ, ಫ್ಲ್ಯಾಟ್‌ನ ಕೀ ಕೂಡ ಇತ್ತು. ಹೀಗಾಗಿ ಹಲವು ಅನುಮಾನಗಳು ಉದ್ಭವಿಸಿವೆ.

ಆಕೆ ಕಳ್ಳತನ ಉದ್ದೇಶದಿಂದ ಫ್ಲ್ಯಾಟ್‌ಗೆ ತೆರಳಿ ಯಾರಾದರೂ ಬಂದಿದ್ದರಿಂದ ಹೆದರಿ ಕೆಳಕ್ಕೆ ಹಾರಿದ್ದಳೇ? ಆಕೆಯನ್ನು ಯಾರಾದರೂ ತಳ್ಳಿದ್ದಾರೆಯೇ? ಎಂಬುದು  ಗೊತ್ತಾಗಬೇಕಿದೆ.ಈಗಾಗಲೇ ಮೃತ ಸೋನಾಳ ಪತಿ, ಅಕ್ಕ-ಪಕ್ಕದ ಫ್ಲ್ಯಾಟ್‌ಗಳ ನಿವಾಸಿಗಳು, ಸೆಕ್ಯೂರಿಟಿ ಗಾರ್ಡ್‌ ಸೇರಿದಂತೆ ಹಲವರಿಂದ ಮಾಹಿತಿ ಕಲೆ ಹಾಕಲಾಗಿದೆ. ಮಹಿಳೆಯ ಬಳಿ ದೊರೆತ ಡಾಲರ್‌, ಚಿನ್ನಾಭರಣ, ಆಕೆ ಕೆಳಗೆ ಹಾರಿದ ಫ್ಲ್ಯಾಟ್‌ ಮಾಲೀಕರ ವಿವರಗಳನ್ನು ತನಿಖಾ ದೃಷ್ಟಿಯಿಂದ ಹಂಚಿಕೊಳ್ಳಲು ಸಾಧ್ಯವಿಲ್ಲ.

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.