ನೀರಂತೆ ಹಣ ಸುರಿದರೂ ನಿಲ್ಲದ ಮರಗಳ ಅನಾಹುತ


Team Udayavani, Sep 24, 2018, 12:31 PM IST

neerante.jpg

ಮಳೆಗಾಲ ಆರಂಭವಾದರೆ ಸಾಕು, ರಾಜಧಾನಿಯಲ್ಲಿ ಮರಗಳು ಧರೆಗುರುಳುವ ಪ್ರಕ್ರಿಯೆ ಕೂಡ ಶುರುವಾಗುತ್ತದೆ. ಮರಗಳು ಹೀಗೆ ಬೀಳದಂತೆ ನೋಡಿಕೊಳ್ಳಲು, ಕಾಲಕಾಲಕ್ಕೆ ದುರ್ಬಲ ಮರ, ಕೊಂಬೆಗಳನ್ನು ತೆರವುಗೊಳಿಸಲೆಂದೇ ಪಾಲಿಕೆಯ ಅರಣ್ಯ ವಿಭಾಗವಿದೆ. ಈ ಕಾರ್ಯಕ್ಕೆ ಪ್ರತಿ ದಿನ 3 ಲಕ್ಷ ರೂ. ಖರ್ಚಾದುತ್ತದೆ. ಆದರೂ ಮರಗಳು ಬೀಳುತ್ತಲೇ ಇವೆ. ಸಾವು-ನೋವು ಸಂಭವಿಸುತ್ತಲೇ ಇದೆ.

ಬೆಂಗಳೂರು: ನಗರದ ಮರಗಳ ನಿರ್ವಹಣೆಗಾಗಿ ನಿತ್ಯ ನೀರಿನಂತೆ ಹಣ ಹರಿಸಲಾಗುತ್ತಿದೆ. ಗಿಡ ನೆಡುವುದರಿಂದ ಹಿಡಿದು ಬಿದ್ದ ಮರಗಳನ್ನು ತೆರವುಗೊಳಿಸುವವರೆಗೂ ವಿವಿಧ ಹಂತಗಳಲ್ಲಿ ತಂಡಗಳು ಕಾರ್ಯಪ್ರವೃತ್ತವಾಗಿರುತ್ತವೆ. ವರ್ಷದ 365 ದಿನಗಳೂ ಈ ಕಾರ್ಯ ನಡೆದಿರುತ್ತದೆ (ಪಾಲಿಕೆ ದಾಖಲೆ ಪ್ರಕಾರ). ಆದರೂ ಪ್ರತಿ ವರ್ಷ ನೂರಾರು ಮರಗಳು ಬೀಳುತ್ತಲೇ ಇವೆ. ಬಲಿ ಪಡೆಯುತ್ತಲೇ ಇವೆ.

ಹಾಗಿದ್ದರೆ, ಮರಗಳ ನಿರ್ವಹಣೆಗೆ ಸುರಿಯುವ ದುಡ್ಡು ಎಲ್ಲಿಗೆ ಹೋಗುತ್ತಿದೆ? ಅಷ್ಟಕ್ಕೂ ಮರಗಳೇಕೆ ಬೀಳುತ್ತವೆ? ತೆರವುಗೊಳಿಸಿದ ಮರಗಳು ಏನಾಗುತ್ತವೆ? ಬೀಳುವ ಮೊದಲೇ ಗುರುತಿಸಿ ತೆರವುಗೊಳಿಸಲು ಇರುವ ತೊಂದರೆಯಾದರೂ ಏನು? ಇಂತಹ ಹಲವು ಪ್ರಶ್ನೆಗಳು ಪ್ರತಿ ಮಳೆಗಾಲದಲ್ಲಿ ಕೇಳಿಬರುತ್ತವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ನಿತ್ಯ ಮೂರು ಲಕ್ಷ ಖರ್ಚು!: ನಗರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ಕೋಟ್ಯಂತರ ರೂ. ಖರ್ಚಾಗುತ್ತದೆ. ಅಷ್ಟೇ ಅಲ್ಲ, ಕಳೆದ ಒಂದು ದಶಕದಿಂದ ರಸ್ತೆ ಬದಿ ಮರಗಳ ನಿರ್ವಹಣೆಗೆ ಪ್ರತಿ ದಿನ ಮೂರು ಲಕ್ಷ ಸುರಿಯಲಾಗುತ್ತಿದೆ! ಇದರ ಉದ್ದೇಶ ಬೀಳುವ ಹಂತದಲ್ಲಿರುವ ಮರ ಅಥವಾ ಮರಗಳ ರೆಂಬೆಗಳನ್ನು ಗುರುತಿಸಿ ತೆರವುಗೊಳಿಸುವುದು. ಆ ಮೂಲಕ ಆಗುವ ಅನಾಹುತಗಳನ್ನು ತಪ್ಪಿಸುವುದು.

ಮತ್ತೂಂದೆಡೆ ಗಿಡಗಳನ್ನು ನೆಟ್ಟು ಪೋಷಿಸುವುದು. ನರ್ಸರಿಗಳನ್ನು ಮಾಡುವುದು. ಆದರೆ, ಹಸಿರೀಕರಣವೂ ಹೆಚ್ಚಿಲ್ಲ; ಸಾವು-ನೋವುಗಳೂ ತಪ್ಪಿಲ್ಲ. ಬಿಬಿಎಂಪಿ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ನಗರದ ವಿವಿಧೆಡೆ ಮರಗಳು ಬಿದ್ದು ಆರು ಜನ ಸಾವನ್ನಪ್ಪಿದ್ದಾರೆ. ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹೀಗಾಗಿ, ಯೋಜನೆ ಕಾರ್ಯವೈಖರಿ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿವೆ.

ದುರ್ಬಲ ಮರಗಳನ್ನು ಗುರುತಿಸಿ, ತೆರವುಗೊಳಿಸಲು ನಾವೇನೋ ಸಿದ್ಧವಾಗಿದ್ದೇವೆ. ಆದರೆ, ಇದಕ್ಕೆ ಪರಿಸರವಾದಿಗಳು ಬಿಡುತ್ತಿಲ್ಲ. ನಗರದಲ್ಲಿ ಪರಿಸರ ನಾಶ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಿ, ನಮ್ಮನ್ನು ಅವಮಾನಿಸುತ್ತಾರೆ ಎಂದು ಪಾಲಿಕೆ ಅರಣ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ತೋಡಿಕೊಳ್ಳುತ್ತಾರೆ. ಪರಿಸರದ ಮೇಲೆ ನಮಗೂ ಕಾಳಜಿ ಇದೆ. ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶ ಎಲ್ಲರೂ ಹೊಂದಿರುತ್ತಾರೆ.

ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಮರಗಳು ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಂಡುಬಂದರೂ ಬೇರುಗಳು ದುರ್ಬಲವಾಗಿ ಅಥವಾ ಒಂದು ಕಡೆ ಬೇರು ತುಂಡಾಗಿ ವಾಲಿಕೊಂಡಿರುತ್ತವೆ. ಅಂತಹ ಮರ ಗುರುತಿಸಿ ತೆರವಿಗೆ ಮುಂದಾದರೆ, ಪರಿಸರವಾದಿಗಳು ಪ್ರತಿಭಟಿಸುತ್ತಾರೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ದುರ್ಬಲ ಮರಗಳ ತೆರವಿಗೆ ಹಲವು ಕ್ರಮಗಳಿವೆ. ಮೊದಲು ಮರಗಳ ಸಮೀಕ್ಷೆ ನಡೆಸಬೇಕು. ಯಾಕೆ ತೆರವುಗೊಳಿಸಲಾಗುತ್ತಿದೆ ಎಂಬುದನ್ನು ತಜ್ಞರು ಮತ್ತು ವಾರ್ಡ್‌ ಸಮಿತಿಗೆ ಸ್ಪಷ್ಟಪಡಿಸಬೇಕು. ಸ್ಥಳೀಯರು, ತಜ್ಞರನ್ನು ಕರೆದೊಯ್ದು ಆ ಮರಕ್ಕೆ ಏನಾಗಿದೆ ಎಂಬುದನ್ನು ಹೇಳಬೇಕು. ಆಗ ಅಂತಹ ಮರಗಳನ್ನು ಕಡಿಯಲು ಯಾರು ಬೇಡ ಎನ್ನುತ್ತಾರೆ ಎಂದು ಪರಿಸರವಾದಿ ಯಲ್ಲಪ್ಪರೆಡ್ಡಿ ಕೇಳುತ್ತಾರೆ.

ಹಣ ಖರ್ಚು ಮಾಡುವುದು ಹಾಗೂ ಖರ್ಚು ಮಾಡಿದ ಹಣಕ್ಕೆ ಬಿಲ್‌ ಮಾಡುವುದು ಗೊತ್ತು. ಹಸಿರೀಕರಣ ಮಾಡುವುದು ಮಾತ್ರ ಗೊತ್ತಿಲ್ಲ. ನಾನು ಕೊಟ್ಟ ವರದಿಯ ಶಿಫಾರಸುಗಳ ಅನುಷ್ಠಾನ ಒತ್ತಟ್ಟಿಗಿರಲಿ, ಓದಲಿಕ್ಕೂ ಹೋಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

2006ರಿಂದಲೂ ಅನುದಾನ: ಪಾಲಿಕೆಯಲ್ಲಿ 2006ರಲ್ಲಿ ಅರಣ್ಯ ವಿಭಾಗ ಆರಂಭವಾದಾಗಿನಿಂದ ಪ್ರತಿ ವರ್ಷ ಸರಾಸರಿ 10ರಿಂದ 12 ಕೋಟಿ ರೂ.ಗಳನ್ನು ಅರಣ್ಯ ವಿಭಾಗಕ್ಕೆ ಮೀಸಲಿಡಲಾಗುತ್ತಿದೆ. ಅದರಂತೆ ಪಾಲಿಕೆಯಲ್ಲಿ ಹೊಸದಾಗಿ ಗಿಡಗಳನ್ನು ನೆಡುವುದು, ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಈ ಅನುದಾನ ಬಳಸಲಾಗುತ್ತದೆ.

ಈ ಮಧ್ಯೆ ಕಳೆದ ಸಾಲಿನಲ್ಲಿ ಮರಗಳ ಗಣತಿಗಾಗಿ ಅನುದಾನ ನೀಡಲಾಗಿತ್ತಾದರೂ, ಅಧಿಕಾರಿಗಳು ಗಣತಿ ಕಾರ್ಯಕ್ಕೆ ಮುಂದಾಗದ ಪರಿಣಾಮ ಹಣ ವಾಪಸ್‌ ಹೋಗಿದೆ. ಇನ್ನು ಪ್ರಸಕ್ತ ಸಾಲಿನಲ್ಲಿ ಅರಣ್ಯ ವಿಭಾಗಕ್ಕೆ 21 ಅರಣ್ಯ ತಂಡಗಳ ನಿರ್ವಹಣೆಗಾಗಿ 3 ಕೋಟಿ ರೂ., ಗಿಡ ಬೆಳೆಸಿ ನೆಡಲು 2.50 ಕೋಟಿ ರೂ. ನೀಡಲಾಗಿದೆ. 

ಪಾಲಿಕೆಯಿಂದ ಅರಣ್ಯ ತಂಡಗಳಿಗೆ ನಿತ್ಯ ಹತ್ತಾರು ಸಾವಿರ ರೂ. ಪಾವತಿಸುತ್ತಿದ್ದರೂ, ತಂಡಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ. ಅರಣ್ಯ ತಂಡಗಳಿಗೆ ಮಳೆಗಾಲದಲ್ಲಿ ಮಾತ್ರ ಹೆಚ್ಚು ಕೆಲಸವಿರುತ್ತದೆ. ಹೀಗಾಗಿ ತಂಡಗಳನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳಲು ಪಾಲಿಕೆ ವಿಫ‌ಲವಾಗಿದೆ ಎಂದು ಕೆಲ ಪಾಲಿಕೆ ಸದಸ್ಯರು ದೂರುತ್ತಾರೆ. 

ತಂಡವೊಂದಕ್ಕೆ ನಿತ್ಯ 10,350 ರೂ.!: ನಗರದಲ್ಲಿನ ಅಪಾಯಕಾರಿ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ವಿಭಾಗದಿಂದ ಎಂಟೂ ವಲಯಗಳಲ್ಲಿ 21 ತಂಡಗಳು ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅದರಂತೆ ಪ್ರತಿಯೊಂದು ತಂಡಕ್ಕೂ ಪಾಲಿಕೆಯಿಂದ ದಿನಕ್ಕೆ 10,350 ರೂ.ಗಳಂತೆ ತಿಂಗಳಿಗೆ 3,10,500 ರೂ. ಪಾವತಿಸಲಾಗುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅಪಾಯಕಾರಿ ಅಥವಾ ಬೀಳುವ ಸ್ಥಿತಿಯಲ್ಲಿರುವ ಹಾಗೂ ಒಣಗಿದ ಮರಗಳನ್ನು ಗುರುತಿಸಿ ತೆರವುಗೊಳಿಸುವುದು ಅರಣ್ಯ ವಿಭಾಗದ ಆದ್ಯಕರ್ತವ್ಯ. ಆದರೆ, ಮಳೆಗಾಲಕ್ಕೆ ಮೊದಲು ಅರಣ್ಯ ವಿಭಾಗದ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಮರಗಳು ಧರೆಗುರುಳಿ ಅನಾಹುತಗಳು ಸಂಭವಿಸುತ್ತಿವೆ ಎಂಬ ಆರೋಪಗಳಿವೆ.

ಬಿದ್ದ ಮರಗಳ ಕತೆ ಏನು?: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ನೆಲಕ್ಕುರುಳುವ ಮರ ಹಾಗೂ ಮರದ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸುವ ಸಿಬ್ಬಂದಿ, ಪಾಲಿಕೆಯ 4 ಡಿಪೋಗಳಿಗೆ ಅವುಗಳನ್ನು ಸಾಗಿಸುತ್ತಾರೆ. ಹೀಗೆ ಸಂಗ್ರಹವಾದ ಮರದ ತುಂಡುಗಳನ್ನು ಪಾಲಿಕೆಯ ಅಧಿಕಾರಿಗಳು ಸರ್ಕಾರಿ ಬೆಲೆಯಂತೆ ಹರಾಜು ಹಾಕುತ್ತಾರೆ. ಇದರಿಂದ ಬಂದ ಹಣ ಪಾಲಿಕೆ ಖಾತೆಗೆ ಜಮೆ ಆಗುತ್ತದೆ. 

ಅರಣ್ಯ ವಿಭಾಗದ ತಂಡಗಳು: ಪಾಲಿಕೆಯ ಅರಣ್ಯ ವಿಭಾಗದಲ್ಲಿ ಮರಗಳ ತೆರವು ಕಾರ್ಯಾಚರಣೆಗಾಗಿ ಗುತ್ತಿಗೆ ಆಧಾರದ ಮೇಲೆ 21 ತಂಡಗಳನ್ನು ನೇಮಿಸಿಕೊಳ್ಳಲಾಗಿದೆ. ಅದರಂತೆ ಪ್ರತಿ ತಂಡ ಒಂದು ವಾಹನ, ಎಂಟು ಮಂದಿ ಸಿಬ್ಬಂದಿಯನ್ನು ಹೊಂದಿರಲಿದ್ದು, ಮರ ಹಾಗೂ ಮಳೆ ನೀರು ತೆರವು ಕಾರ್ಯಾಚರಣೆಗೆ ಅಗತ್ಯವಾವಾದ ಗರಗಸ, ಗುದ್ದಲ್ಲಿ, ಹಾರೆ, ಹಗ್ಗ ಸೇರಿದಂತೆ ಸಲಕರಣೆಗಳನ್ನು ಹೊಂದಿರುತ್ತವೆ. 

ಆಗಲಿಲ್ಲ ಮರಗಳ ಗಣತಿ!: ಬೆಂಗಳೂರಿನಲ್ಲಿರುವ ಮರಗಳನ್ನು ಮುಂಬೈ ಹಾಗೂ ಪುಣೆ ಮಾದರಿಯಲ್ಲಿ ಗಣತಿ ಮಾಡಲು ಈ ಹಿಂದೆ ಪಾಲಿಕೆ ಮುಂದಾಗಿತ್ತು. ಅದಕ್ಕಾಗಿ ಅನುದಾನವನ್ನೂ ಸಹ ಮೀಸಲಿಡಲಾಗಿತ್ತು. ಆದರೆ, ಅರಣ್ಯ ವಿಭಾಗದ ಅಧಿಕಾರಿಗಳು ಗಣತಿ ನಡೆಸದ ಹಿನ್ನೆಲೆಯಲ್ಲಿ ಹಣ ವಾಪಸ್‌ ಹೋಗಿದೆ.
ಮರಗಳ ಗಣತಿ ನಡೆಸುವುದರಿಂದ ಟೊಳ್ಳಾಗಿರುವ, ರೋಗಪೀಡಿತ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳ ಮಾಹಿತಿ ಪಾಲಿಕೆಗೆ ಲಭ್ಯವಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ಅನಾಹುತ ಉಂಟಾಗದಂತೆ ಅವುಗಳನ್ನು ತೆರವುಗೊಳಿಸಬಹುದಾಗಿದೆ.

ಸಿಬ್ಬಂದಿ ಇಲ್ಲದೆ ಏನು ಮಾಡೋದು?: ಬಿಬಿಎಂಪಿಯ ಎಲ್ಲ ಎಂಟು ವಲಯಗಳಿಗೆ ಸೇರಿ ಒಟ್ಟು 21 ಕಾರ್ಯಾಚರಣೆ ತಂಡಗಳಿದ್ದು, ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿವೆ. ಬಿದ್ದಿರುವ ಒಂದು ಮರ ತೆರವುಗೊಳಿಸುವ ವೇಳೆಗೆ ಮತ್ತೂಂದು ಭಾಗದಲ್ಲಿ ಮರ ಬಿದ್ದಿರುತ್ತದೆ. ನಗರದಲ್ಲಿ ಮಳೆ ಬೀಳುವ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಶೀಘ್ರ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ. 

ಸಾವು-ನೋವು ಪ್ರಕರಣಗಳು
ಸೆಪ್ಟಂಬರ್‌ 17, 2018:
ಮಲ್ಲೇಶ್ವರದಲ್ಲಿ ಮರ ಉರುಳಿ ಗರ್ಭಿಣಿ ಸೇರಿ ಮೂವರಿಗೆ ಗಂಭೀರ ಗಾಯ
ಸೆಪ್ಟಂಬರ್‌ 09, 2017: ಜೆ.ಸಿ.ರಸ್ತೆಯ ಮಿನರ್ವ ವೃತ್ತದ ಬಳಿ ಬೃಹತ್‌ ಮರ ಕಾರಿನ ಮೇಲೆ ಬಿದ್ದು ಒಂದೇ ಕುಟುಂಬದ ರಮೇಶ್‌ (42), ಪತ್ನಿ ಭಾರತಿ (38) ಹಾಗೂ ಭಾರತಿ ಅಣ್ಣ ಜಗದೀಶ್‌ (46) ಮೃತಪಟ್ಟಿದ್ದರು. 
ಜುಲೈ 11, 2016: ಬಸವನಗುಡಿಯಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ತೆಂಗಿನ ಮರ ಮುರಿದು ಬಿದ್ದು ಚಾಲಕ ಇಮಿ¤ಯಾಜ್‌ ಪಾಷಾ (45) ಮೃತಪಟ್ಟು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು.
ಜೂನ್‌ 26, 2016: ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿ ಮರ ಬಿದ್ದು ಬೈಕ್‌ ಸವಾರ ಫೈರೋಜ್‌ ಪಾಷಾ (48) ಸಾವು.
ಮೇ 25, 2015: ಹೊಸೂರು ರಸ್ತೆಯ ಆನೇಪಾಳ್ಯ ಬಸ್‌ ತಂಗುದಾಣದ ಮೇಲೆ ಬೃಹತ್‌ ಮರ ಬಿದ್ದು ಮಾಧವರೆಡ್ಡಿ (50) ಮೃತಪಟ್ಟಿದ್ದರು.

ಪಾಲಿಕೆಯ ಮರದ ಡಿಪೋಗಳು
-ಯಲಹಂಕದ ಅಟ್ಟೂರು
-ಬೆಳ್ಳಂದೂರು
-ವಿದ್ಯಾಪೀಠ
-ಬೊಮ್ಮನಹಳ್ಳಿ

ಪ್ರಸಕ್ತ ಸಾಲಿನಲ್ಲಿ ತೆರವುಗೊಳಿಸಿದ ಮರಗಳ ವಿವರ
-ಅಪಾಯಕಾರಿ ಮರಗಳು    200
-ಕೊಂಬೆಗಳ ತೆರವು    1,500
-ಒಣಗಿದ ಮರಗಳು    50-60
-ಸಾರ್ವಜನಿಕರ ಕೋರಿಕೆ ಮೇರೆಗೆ ತೆರವಾದ ಮರಗಳು    120

28 ತಂಡಗಳ ಅಗತ್ಯವಿದೆ: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಂದ ತಲಾ ಒಂದರಂತೆ ಕಾರ್ಯಾಚರಣೆ ತಂಡವನ್ನು ನಿಯೋಜಿಸಿದರೆ ಮರ ಬಿದ್ದ ಕೂಡಲೆ ತೆರವುಗೊಳಿಸಲು ಅನುಕೂಲವಾಗುತ್ತದೆ. ಆ ಹಿನ್ನೆಲೆಯಲ್ಲಿ ಹೆಚ್ಚುವರಿ ತಂಡಗಳನ್ನು ನೀಡುವಂತೆ ಹಾಗೂ ಕಾರ್ಯಾಚರಣೆ ತಂಡಗಳಿಗೆ ಅನುದಾನ ನೀಡುವಂತೆ ಕೋರಲಾಗಿದೆ ಎಂದು ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ತಿಳಿಸಿದ್ದಾರೆ.

ಅರ್ಧಕ್ಕರ್ಧ ವಿದೇಶಿ ಜಾತಿ ಮರಗಳು!: ನಗರದಲ್ಲಿರುವ ಒಟ್ಟಾರೆ ಮರಗಳಲ್ಲಿ ಅರ್ಧಕ್ಕರ್ಧ ಇಲ್ಲಿನ ಮಣ್ಣಿಗೆ ಹಾಗೂ ರಸ್ತೆಗಳಿಗೆ ಪೂರಕವಲ್ಲದ ಮರಗಳಾಗಿವೆ. ಹಾಗಾಗಿ, ಮಳೆಗಾಲದಲ್ಲಿನ ಅವಾಂತರಕ್ಕೆ ಇವು ಕಾರಣವಾಗುತ್ತಿವೆ. ನಗರದ ಸೌಂದರ್ಯ ಹೆಚ್ಚಿಸಲು ವಿದೇಶಿ ಜಾತಿಯ ಗಿಡ-ಮರಗಳನ್ನು ಅಧಿಕ ಸಂಖ್ಯೆಯಲ್ಲಿ ಬೆಳೆಸಲಾಗಿದೆ. ಆದರೆ, ಇಲ್ಲಿನ ಗಾಳಿ-ಮಳೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಅವುಗಳಲ್ಲಿ ಇಲ್ಲ. ಹಾಗಾಗಿ, ಸಣ್ಣ ಮಳೆ ಹೊಡೆತಕ್ಕೆ ಹತ್ತಾರು ಮರಗಳು ನೆಲಕಚ್ಚುವುದು ಸಾಮಾನ್ಯವಾಗಿದೆ.

ಕಾಮಗಾರಿಗಳೂ ಕಾರಣ: ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಅತಿ ಹೆಚ್ಚು ಮರಗಳು ಬೀಳುತ್ತಿವೆ. ಇದಕ್ಕೆ ಬರೀ ಗಾಳಿ-ಮಳೆ ಕಾರಣವಲ್ಲ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು, ಬೇಕಾಬಿಟ್ಟಿ ಮರಗಳ ಕಡಿತಲೆ ಕೂಡ ಕಾರಣ. ವಿವಿಧ ಮೊಬೈಲ್‌ ಕಂಪನಿಗಳು ನೆಲದಡಿ ಬೇಕಾಬಿಟ್ಟಿ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್ಸಿ) ಅಳವಡಿಸಿವೆ. ವಿದ್ಯುತ್‌ ಲೈನ್‌ಗಳು ಹಾದುಹೋಗಿವೆ. ಜಲಮಂಡಳಿಯ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ.

ಈ ಮಧ್ಯೆ ಕಟ್ಟಡಗಳ ನಿರ್ಮಾಣ, ಕಾಂಕ್ರಿಟ್‌ ನೀರುಗಾಲುವೆಗಳು ಮತ್ತಿತರ ಕಾಮಗಾರಿಗಳಿಗೆ ನೆಲ ಅಗೆಯುವಾಗ ಮರಗಳ ಬೇರು ಕತ್ತರಿಸಲಾಗುತ್ತದೆ. ಮತ್ತೂಂದೆಡೆ ವಿದ್ಯುತ್‌ ಲೈನ್‌ಗಳು, ಮನೆ-ಕಚೇರಿಗಳಿಗೆ ಅಡ್ಡಿಯಾಗಿವೆ ಎಂದು ರೆಂಬೆಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ಮರದಲ್ಲಿ ಅಸಮತೋಲನ ಉಂಟಾಗಿ ಮಣ್ಣು ಸಡಿಲಗೊಳ್ಳುತ್ತದೆ. ಗಾಳಿ-ಮಳೆ ಯಾದಾಗ ಧರೆಗುರುಳುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ನಗರದಲ್ಲಿವೆ 14.78 ಲಕ್ಷ ಮರ?: ಐಐಎಸ್ಸಿ 2014-15ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ನಗರದಲ್ಲಿ ಸರಾಸರಿ ಪ್ರತಿ ನೂರು ಜನರಿಗೆ 17 ಮರಗಳು ಇದ್ದು, ಒಟ್ಟಾರೆ 14.78 ಲಕ್ಷ ಮರಗಳಿವೆ. ಈ ಪೈಕಿ ಮರಗಳ ಹಂಚಿಕೆ ಮೇಲೆ ಬೆಳಕುಚೆಲ್ಲಿದಾಗ, ಹೃದಯಭಾಗದಲ್ಲಿ ಮರಗಳ ಸಂಖ್ಯೆ ಕಡಿಮೆ ಇದ್ದು, ಜನದಟ್ಟಣೆ ವೇಗವಾಗಿ ಬೆಳೆದಿದೆ.

ಉದಾಹರಣೆಗೆ ವರ್ತೂರು, ಬೆಳ್ಳಂದೂರು, ಅರಮನೆನಗರ, ಅಗರಂ ಸುತ್ತಮುತ್ತ 40 ಸಾವಿರಕ್ಕೂ ಅಧಿಕ ಮರಗಳಿದ್ದರೆ, ಚಿಕ್ಕಪೇಟೆ, ದಯಾನಂದನಗರ, ಶಿವಾಜಿನಗರ, ಪಾದರಾಯನಪುರ, ಕೆಂಪಾಪುರ ಅಗ್ರಹಾರ, ಕುಶಾಲನಗರ ಸುತ್ತ ಬರೀ 100 ಮರಗಳಿವೆ! ಇನ್ನು ದೇಶದಲ್ಲಿ ಗುಜರಾತಿನ ಗಾಂಧಿನಗರದಲ್ಲಿ ಪ್ರತಿ ನೂರು ಜನರಿಗೆ 416 ಮರಗಳಿವೆ. ಮುಂಬೈನಲ್ಲಿ ಪ್ರತಿ ನೂರು ಜನರಿಗೆ 15 ಮರಗಳಿವೆ ಎಂದು ಸಮೀಕ್ಷೆ ತಿಳಿಸಿದೆ.  

ಮರಗಳ ಆಯಸ್ಸು
-ವಿದೇಶಿ ಮರಗಳ ಆಯಸ್ಸು- ಸರಾಸರಿ 30ರಿಂದ 35 ವರ್ಷ
-ಸ್ಥಳೀಯ ಮರಗಳ ಆಯಸ್ಸು- ಸರಾಸರಿ 60ರಿಂದ 70 ವರ್ಷ

ನಗರದಲ್ಲಿ ಕಂಡುಬರುವ ಮರಗಳು
-ಪಾಪ್‌ಕಾರ್ನ್ ಬುಶ್‌ ಕೇಡರ್‌- ಮೂಲ ಉಷ್ಣವಲಯದ ಆಗ್ನೇಯ ಏಷಿಯಾ. 
-ಕೋಕೊನಟ್‌ ಪಾಮ್‌- ಮೂಲ ಇಂಡೋ-ಪೆಸಿಫಿಕ್‌. ೆ. 
-ಗುಲ್‌ಮೊಹರ್‌- ಮೂಲ ಮಡಗಾಸ್ಕರ್‌. 
-ಆಫ್ರಿಕನ್‌ ಟುಲಿಪ್‌ ಟ್ರೀ - ಮೂಲ ಆಫ್ರಿಕ ಉಷ್ಣವಲಯ. 
-ಇಂಡಿಯನ್‌ ಕಾರ್ಕ್‌ ಟ್ರೀ - ಮೂಲ ಮ್ಯಾನ್ಮಾರ್‌.
-ಬಟರ್‌ಫ್ಲೈ ಟ್ರೀ - ಮೂಲ ಭಾರತ, ಬರ್ಮ, ವಿಯೇಟ್ನಾಂ.

ಇವೆಲ್ಲವೂ ನಗರದ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್‌, ರಾಜರಾಜೇಶ್ವರಿನಗರ, ಬಸವೇಶ್ವರನಗರ, ಜಯನಗರ, ಯಶವಂತಪುರ, ಯಲಹಂಕ, ಮಲ್ಲೇಶ್ವರ, ಸಂಜಯನಗರ, ಸ್ಯಾಂಕಿ ಕೆರೆ, ಎಂ.ಜಿ. ರಸ್ತೆ, ಯಶವಂತಪುರ, ರಾಜಾಜಿನಗರ, ಡಾ.ರಾಜ್‌ಕುಮಾರ್‌ ವಾರ್ಡ್‌, ಶಂಕರಮಠ, ಶೇಷಾದ್ರಿಪುರ, ಸದಾಶಿವನಗರ, ಜಯನಗರ, ಮಹಾಲಕ್ಷ್ಮೀಪುರ, ವಿಜಯನಗರ, ಹೆಬ್ಟಾಳ ಮತ್ತಿತರ ಕಡೆಗಳಲ್ಲಿ ಕಾಣಬಹುದು ಎಂದು ಐಐಎಸ್ಸಿ ವರದಿಯಲ್ಲಿ ತಿಳಿಸಿದೆ. 

ರಸ್ತೆ ಬದಿ ಬೆಳೆಸಬಹುದಾದ ಗಿಡಗಳು: ಹೊಂಗೆ, ಮಾವು, ಹಲಸು, ಬೇವು, ಆಲ, ಅರಳಿ, ಅತ್ತಿ, ಸಂಪಿಗೆ, ಕಕ್ಕೆ, ಮುತ್ತುಗ, ಅಶೋಕ, ಕೆಂಪುಮಂದಾರ, ಕೆಂಕಳಿ, ಬುಕ್ಕಿ, ಮಲ್ಲಿಗೆ ಇತ್ಯಾದಿ. ಇವುಗಳಿಂದ ಪಕ್ಷಿಗಳಿಗೂ ಅನುಕೂಲ ಆಗುತ್ತದೆ.

* ವಿಜಯಕುಮಾರ್‌ ಚಂದರಗಿ/ ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.