ಕತ್ತಲೆಯಾಗದಿರಲಿ ಬೆಳಕಿನ ಹಬ್ಬ: ಪಟಾಕಿ ಸಿಡಿಸುವಾಗ ಇರಲಿ ಎಚ್ಚರ


Team Udayavani, Nov 5, 2018, 12:21 PM IST

kattale.jpg

ಶೇ.40 ಯಾರದೋ ಪಟಾಕಿಯಿಂದ ನೋವುಂಡವರು  ಶೇ.40 14 ವರ್ಷದೊಳಗಿನ ಪಾಟಾಕಿ ಗಾಯಾಳುಗಳು   ಶೇ.30 ಒಳರೋಗಿಯಾಗಿ ದಾಖಲಾಗುವ ಪಟಾಕಿ ಗಾಯಾಳುಗಳು  ಶೇ.70 ಗಾಯಕ್ಕೆ ಚಿಕಿತ್ಸೆ ಪಡೆದು ಮನೆಗೆ ಹೋಗುವವರು  ಶೇ.38 ಪಟಾಕಿ ಹಚ್ಚುವಾಗ ಕೈಗೆ ಗಾಯ ಮಾಡಿಕೊಳ್ಳುವವರು  ಶೇ.19 ಪಟಾಕಿ ದುರಂತದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡವರು  

ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಮನೆ-ಮನಗಳಲ್ಲಿ ಸಡಗರ-ಸಂಭ್ರಮದ ವಾತಾವರಣ ಸೃಷ್ಟಿಸುತ್ತದೆ. ಪಟಾಕಿ ಸಿಡಿಸುವುದು ದೀಪಾವಳಿಯ ಮತ್ತೂಂದು ವಿಶೇಷ. ಪಟಾಕಿ ಸಿಡಿತ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸಂಕಷ್ಟ ತಪ್ಪಿದ್ದಲ್ಲ. ಪಟಾಕಿ ಸಿಡಿತದಿಂದ ಕೈ ಕಾಲಿಗೆ ಗಾಯವಾಗುವ ಪ್ರಕರಣಗಳಷ್ಟೇ ಅಲ್ಲ, ಶಾಶ್ವತವಾಗಿ ಕಣ್ಣು ಕಳೆದುಕೊಂಡು ಜೀವನವೇ ಕತ್ತಲು ಆದ  ಉದಾಹರಣೆಗಳೂ ಇವೆ.

ಜತೆಗೆ, ಪಟಾಕಿ ಸಿಡಿತದಿಂದ ಪ್ರತಿವರ್ಷ ಶೇ. 2 ರಷ್ಟು ಮಂದಿ ಕಿವುಡರಾಗುತ್ತಿದ್ದು, ಕಿವಿಯ ಪಕ್ಕದಲ್ಲಿ ಆಕಸ್ಮಿಕವಾಗಿ ಸಿಡಿಯುವ ಪಟಾಕಿ ಕಿವಿಯೊಳಗಿನ ತಮಟೆಗೆ ಹೆಚ್ಚು ಹಾನಿ ಮಾಡುತ್ತದೆ. ಕೆಲವು ಬಾರಿ ತಮಟೆ ಚಿದ್ರಗೊಂಡು ಶಾಶ್ವತ ಕಿವುಡಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ದೀಪಾವಳಿಯ ಸಡಗರ-ಸಂಭ್ರಮದಂದು ಅನಾಹುತ ಆಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ದೀಪಾವಳಿ ಹಬವನ್ನು ಒಂದಷ್ಟು ಮುನ್ನಚ್ಚರಿಕೆಯೊಂದಿಗೆ ಮಾಲಿನ್ಯ ಹಾಗೂ ಭಾರೀ ಶಬ್ದ ಮಾಡದಂತಹ ಪಟಾಕಿಗಳನ್ನು ಸಿಡಿಸುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಣೆ ಮಾಡಬೇಕೆಂಬ ಜಾಗೃತಿ ಕಾರ್ಯಕ್ರಮಗಳನ್ನು ಹಲವಾರು ಸಂಘ ಸಂಸ್ಥೆಗಳು ನಡೆಸಿವೆ. ಇದಾಗಿಯೂ ಪ್ರತಿವರ್ಷ ಪಟಾಕಿಗಳಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪಟಾಕಿ ಸಿಡಿಸುವ ವೇಳೆ ಕೆಲವರು ಗಾಯ ಮಾಡಿಕೊಂಡರೆ,

ಇನ್ನು ಕೆಲವರು ತಮ್ಮದಲ್ಲದ ತಪ್ಪುಗಳಿಂದಾಗಿ ಬದುಕು ಕತ್ತಲು ಮಾಡಿಕೊಂಡ ಹಲವಾರು ನಿದರ್ಶನಗಳು ಇವೆ. ಪಟಾಕಿ ಹಬ್ಬದ ದಿನದಂದು ಮಕ್ಕಳು ಹಾಗೂ ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪಟಾಕಿ ಮಾರಾಟ ಮಾಡುವವರು ಅನುಸರಿಸಬೇಕಾದ ನಿಯಮಗಳು, ಪಟಾಕಿ ಸಿಡಿತದಿಂದ ನಗರದಲ್ಲಿ ಉಂಟಾಗುವ ಮಾಲಿನ್ಯ,  ಪಟಾಕಿ ಸಿಡಿತದಿಂದ ಗಾಯವಾದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸಾ ವಿಧಾನಗಳ ಕುರಿñ ಮಾಹಿತಿ ಇಲ್ಲಿದೆ.  

ಪಟಾಕಿ ಹೊಡೆಯುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು: 
-ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಜತೆಯಲ್ಲಿರಬೇಕು  
-ಪಟಾಕಿ ಹಚ್ಚಲು ಮಕ್ಕಳಿಗೆ ಉದ್ದದ ಅಗರಬತ್ತಿ ನೀಡುವುದು  
-ರಾಕೆಟ್‌ನಂತಹ ಪಟಾಕಿ ಸಿಡಿಸಲು ಗಾಜಿನ ಬಾಟಲಿ ಬಳಸುವುದು  
-ಕನ್ನಡಕ ಇಲ್ಲವೇ ಹೆಲ್ಮೆಟ್‌ ಧರಿಸಿ  
-ಪಟಾಕಿ ಸಿಡಿಸಿ ಪಟಾಕಿ ಸಿಡಿಸುವಾಗ ಕಾಟನ್‌ ಬಟ್ಟೆಗಳನ್ನು ಧರಿಸುವುದು  
-ಪಟಾಕಿ ಸಿಡಿದಿದೆಯೋ ಇಲ್ಲವೋ ಹತ್ತಿರ ಹೋಗಿ ಎಂದು ಪರೀಕ್ಷಿಸುವುದು ಬೇಡ.
-ಕೈಯಲ್ಲಿ ಹಿಡಿದು ಪಟಾಕಿ ಹೊಡೆಯುವುದು, ಎಸೆಯುವುದು ಅಪಾಯ  
-ಬಾಂಬ್‌ಗಳು ಹಾಗೂ ಪ್ಲವರ್‌ ಪಾಟ್ಸ್‌, ರಾಕೆಟ್‌ ಹೆಚ್ಚು ಹಾನಿ    

ಕಣ್ಣಿಗೆ ಸಿಡಿದರೆ ಎನು ಮಾಡಬೇಕು?
-ಪಟಾಕಿ ಕಿಡಿ ಕಣ್ಣಿಗೆ ಬಡಿದಾಗ ಯಾವುದೇ ಕಾರಣಕ್ಕೂ ಉಜ್ಜಿಕೊಳ್ಳಬಾರದು  
-ತಕ್ಷಣ ತಣ್ಣಿರಿನಿಂದ ತೊಳೆಯುವುದು  
-ಸ್ವತ್ಛವಾದ ಬಟ್ಟೆ ಅಥವಾ ಹತ್ತಿಯನ್ನು ಕಣ್ಣಿಗೆ ಒತ್ತಿಕೊಳ್ಳುವುದು ಕೂಡಲೇ ಸಮೀಪದ ಕಣ್ಣಿನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು  

ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಕಾಲಾವಕಾಶ: ಈ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೂರು ದಿನ (ನ.6 ರಿಂದ 8) ರಾತ್ರಿ 8 ರಿಂದ 10ರವರೆಗೆ ಮಾತ್ರ ಪಟಾಕಿ ಹೊಡೆಯುವ ಸರ್ಕಾರ ಅವಕಾಶ ನೀಡಿದೆ. ಪಟಾಕಿಗಳು ಪರಿಸರ ಮಾಲಿನ್ಯ ಉಂಟು ಮಾಡಲಿರುವುದರಿಂದ ಸುಪ್ರೀಂ ಕೋರ್ಟ್‌, ಹಬ್ಬದ ದಿನಗಳಲ್ಲಿ ನಿತ್ಯ ಎರಡು ಗಂಟೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಬೇಕು ಎಂದು ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.  

ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ನಗರದ ಎಲ್ಲಾ ವಲಯಗಳಲ್ಲೂ ಸಾರ್ವಜನಿಕ ಸ್ಥಳಗಳ ಗುರು ಮಾಡುವುದು, ಎಚ್ಚರಿಕೆ ನೀಡುವುದು ಹಾಗೂ ಜಾಗೃತಿ ಮೂಡಿಸಲು ಅಗತ್ಯ ಕ್ರಮಕೈಗೊಳ್ಳಬೇಕಿದೆ. ಜತೆಗೆ ಸಾರ್ವಜನಿಕರಿಗೆ ನಿಯಮ ಪಾಲನೆ ಕುರಿತಂತೆ ಮಾಹಿತಿ ನೀಡುವುದು, ನಿಯಮಗಳನ್ನು ಉಲ್ಲಂ ಸಿದವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಹಬ್ಬದ ಸಂದರ್ಭದಲ್ಲಿ ಸಂಭವಿಸುವ ಅನಾಹುತಗಳಿಗೆ ಆಯಾ ವಿಭಾಗದ ಅಧಿಕಾರಿಗಳನ್ನು ಹೊಣೆಯಾಗಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.  

ಪೊಲೀಸ್‌ ಇಲಾಖೆ ಸೂಚನೆ ಏನು?: ಹೆಚ್ಚು ಶಬ್ದ ಹಾಗೂ ಹೊಗೆ ಬಾರದ ಪಟಾಕಿಗಳನ್ನು ಮಾತ್ರ ಹೊಡೆಯಬೇಕು ಸರ ಪಟಾಕಿ ಹೊಡೆಯುವುದು ನಿಷೇಧ ವೈಯಕ್ತಿಕವಾಗಿ ಪಟಾಕಿ ಹೊಡೆಯದೇ, ಗುರುತಿಸಿದ ಸ್ಥಳಗಳಲ್ಲಿ ಗುಂಪು ಗುಂಪಾಗಿ ಪಟಾಕಿ ಹೊಡೆಯಬೇಕು. 

ಸೀಮಿತ ವಲಯದಲ್ಲಿ ಮಾತ್ರ ಪಟಾಕಿ ಮಾರಾಟ: ದೀಪಾವಾಳಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಪಟಾಕಿ ಮಾರಾಟಕ್ಕೆ ಬಿಬಿಎಂಪಿ ಈ ಬಾರಿ ಕಡಿವಾಣ ಹಾಕಿದೆ. ಅದರಂತೆ ಪಟಾಕಿ ಮಾರಾಟಕ್ಕಾಗಿಯೇ ಪಾಲಿಕೆಯ ಮೈದಾನಗಳನ್ನು ನಿಗದಿಪಡಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಪಾಲಿಕೆ ಹಾಗೂ ಅಗ್ನಿಶಾಮಕ ಇಲಾಖೆ ಪರಿಶೀಲಿಸಿ ನಿಗದಿ ಪಡಿಸಿದ ಬಿಬಿಎಂಪಿ ಮೈದಾನದಲ್ಲಿ ಚಿಲ್ಲರೆಯಾಗಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.  

ಎಲ್ಲಿಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?: ಕಾವಲ್ ಬೈರಸಂದ್ರ ಪಾನಿಪುರಿ ಗ್ರೌಂಡ್‌, ಪಾಟರಿಟೌನ್‌ ಆಟದ ಮೈದಾನ, ಸಗಾಯಪುರಂ ಪಾನಿಪುರಿ ಗ್ರೌಂಡ್‌, ದೊಮ್ಮಲೂರು ಐಎಎಸ್‌ ಆರ್‌ಓ ಕ್ವಾಟರ್ಸ, ಮಾರತ್‌ ಹಳ್ಳಿ ಪೊಲೀಸ್‌ ಠಾಣೆ ಹಿಂಭಾಗ, ಬೆಳ್ಳಂದೂರು ಪೊಲೀಸ್‌ ಠಾಣೆ ಹತ್ತಿರ, ಬಿಟಿಎಂ ಲೇಔಟ್, ಜಕ್ಕಸಂದ್ರ ಟೀಚರ್ಸ ಕಾಲೋನಿ ಆಟದ ಮೈದಾನ, ನಂದಿನಿ ಆಟದ ಮೈದಾನ, ಬೆಳ್ಳಂದೂರು, ಅಂಬಲೀಪುರ ಸಮುದಾಯ ಭವನದ ಜಾಗ, ಯಲಹಂಕದಲ್ಲಿ ಉನ್ನಿಕೃಷ್ಣನ್‌ ರಸ್ತೆಗೆ ಹೊಂದಿಕೊಂಡಿರುವ ಜಾಗ ಹಾಗೂ ಯಲಹಂಕ ಉಪನಗರ ಕರ್ನಾಟಕ ಗೃಹ ಮಂಡಳಿ ವಾಣಿಜ್ಯ ಸಂಕೀರ್ಣ ಮುಂಭಾಗ,  

ಮಲ್ಲೇಶ್ವರ ಆಟದ ಮೈದಾನ, ಕೋರಮಂಗಲದ ಕೆಎಚ್‌ಬಿ ಕಾಲೊನಿ ಆಟದ ಮೈದಾನ, ಕೋಣನಕುಂಟೆ ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿ ಗೃಹ ನಿರ್ಮಾಣ ಸಹಕಾರಿ ಸಂಘದ ಮೈದಾನ, ಕೈಗೊಂಡ್ರಹಳ್ಳಿ ಅಗ್ನಿ ಶಾಮಕ ಠಾಣೆ ಜಾಗ, ರಾಮಗೊಂಡನಹಳ್ಳಿ ಬಿಬಿಎಂಪಿ ಕಚೇರಿ ಮುಂದೆ, ರಾಮಗೊಂಡನಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ, ವಾರ್ಡ 85ರ ಇಂದಿರಾ ಕ್ಯಾಂಟೀನ್‌ ಬಳಿ, ಎಚ್‌ಎಸ್‌ಆರ್‌ ಬಡಾವಣೆ ಬಿಬಿಎಂಪಿ ಖಾಲಿ ಜಾಗ ಹಾಗೂ 1ನೇ ಸೆಕ್ಟರ್‌ 27ನೇ ಮುಖ್ಯರಸ್ತೆ ಬಿಬಿಎಂಪಿ ಜಾಗ.  

ಚಿಕಿತ್ಸೆ ನೀಡಲು ಮಿಂಟೋ ಸಜ್ಜು: ಪ್ರತಿವರ್ಷ ಸರಾಸರಿ 60 ರಿಂದ 70 ಮಂದಿ ಪಟಾಕಿ ಹಾನಿಗೊಳಗಾಗಿ ಚಿಕಿತ್ಸೆಗಾಗಿ ನಗರದ ಮಿಂಟೋ ಆಸ್ಪತ್ರೆಗೆ ದಾಖಲಾಗುತ್ತಾರೆ. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತಹ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪಟಾಕಿಯಿಂದ ಸಂಭವಿಸುವ ಗಾಯಗಳಿಗೆ 24/7 ತುರ್ತು ಚಿಕಿತ್ಸೆ ನೀಡಲಾಗುತ್ತದೆ.  

ಆಸ್ಪತ್ರೆಯಲ್ಲಿ ಗಾಯಾಳುಗಳಿಗಾಗಿ ಹೆಚ್ಚುವರಿ ಕೊಠಡಿ, ಮಹಿಳೆಯರು ಹಾಗು ಪುರುಷರಿಗೆ ಪ್ರತ್ಯೇಕ ಕೊಠಡಿ ಮತ್ತು ಚಿಕಿತ್ಸಾ ವೈದ್ಯರ ತಂಡ ರಚಿಸಿದ್ದು, ಮೂರು ಪಾಳಿಗಳಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಗಾಯಾಳುಗಳಿಗೆ ಅಗತ್ಯ ಔಷಧಿಗಳ ದಾಸ್ತಾನು ಮಾಡಲಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌ ತಿಳಿಸಿದ್ದಾರೆ.

ಮಿಂಟೋ ಆಸ್ಪತ್ರೆ (ಕಲಾಸಿಪಾಳ್ಯ) ಸಹಾಯವಾಣಿ -080-26707176  ಪ್ರಮುಖ ಅಂಶಗಳು ಪಟಾಕಿ ಸಿಡಿತಕ್ಕೆ ಗಾಯಾಳುಗಳಾದವರ ಪೈಕಿ 10-14 ವರ್ಷದ ಮಕ್ಕಳೇ ಹೆಚ್ಚು  ವಾರ್ಷಿಕ ಕಣ್ಣು ಕಳೆದ ಕೊಂಡ ಪ್ರಕರಣಗಳು 10ಕ್ಕೂ ಹೆಚ್ಚು  (ಮಿಂಟೋ ಆಸ್ಪತ್ರೆ ವರದಿ) ವರ್ಷ    ಗಾಯಾಳುಗಳು
(ಮಕ್ಕಳು) 2012    47 (14) 2013    61 (23) 2014    65 (25) 2015    32 (17) 2016    33 (15) 2017    45 (20)  

ಗಾಯವಾದರೆ ವೈದ್ಯರ ಬಳಿ ಹೋಗಿ ಸುಟ್ಟ ಗಾಯವಾದ ತಕ್ಷಣ ಭಯಪಟ್ಟು ಏನೇನೋ ಮಾಡುವ ಬದಲಿಗೆ, ಸೂಕ್ತ ವೈದ್ಯರೊಬ್ಬರನ್ನು ಸಂಪರ್ಕಿಸಿ ದೊಡ್ಡ ಅನಾಹುತವು ತಪ್ಪಿಹೋಗುತ್ತದೆ. ಬದಲಿಗೆ ಕೆಲವರು ನೋವು ತಡೆಯಲಾರದೆ ಅನೇಕ ಮನೇ ಮದ್ದಿಗೆ ಮುಂದಾಗುತ್ತಾರೆ. ಇದು ತಪ್ಪು ಎನ್ನುತ್ತಾರೆ ತಜ್ಞ ವೈದ್ಯರು.  

ಪಟಾಕಿಯಿಂದ ಶೇ.2ರಷ್ಟು ಮಂದಿ ಕಿವುಡರಾಗುತ್ತಿದ್ದಾರೆ: ಪಟಾಕಿ ಸಿಡಿತದಿಂದ ಪ್ರತಿವರ್ಷ ಶೇ. 2 ರಷ್ಟು ಮಂದಿ ಕಿವುಡರಾಗುತ್ತಿದ್ದು, ಕಿವಿಯ ಪಕ್ಕದಲ್ಲಿ ಆಕಸ್ಮಿಕವಾಗಿ ಸಿಡಿಯುವ ಪಟಾಕಿ ಕವಿಯೊಳಗಿನ ತಮಟೆಗೆ ಹೆಚ್ಚು ಹಾನಿ ಮಾಡುತ್ತದೆ. ಕೆಲವು ಬಾರಿ ತಮಟೆ ಚಿದ್ರಗೊಂಡು ಶಾಶ್ವತ ಕಿವುಡಾಗುವ ಸಾಧ್ಯತೆ ಇರುತ್ತದೆ. ಇಂತಹ ಶಬ್ಧ ಮಾಲಿನ್ಯ ಸಂಬಂಧಿ ಕಿವುಡುತನವನ್ನು ವಾಸಿಮಾಡಲು ಯಾವುದೇ ಔಷಧಿ ಇಲ್ಲ. ಪಟಾಕಿ ಸಿಡಿಸಿದ ವೇಳೆ ಕಿವಿಯು ಹೆಚ್ಚಿನ ಸಮದಯ ಗುಂಯ್‌ ಗುಡುತ್ತಿದ್ದರೆ, ಅಕ್ಕಪಕ್ಕದವರ ಮಾತು ಅಸ್ಪಷ್ಟವಾಗಿ ಕೇಳುತ್ತಿದ್ದರೆ, ವಿವಿಧ ಬಗೆಯ ಎಣ್ಣೆ, ನೀರು ಹಾಕುವಂತಹ ಮನೆ ಮದ್ದುಗಳಿಗೆ ಮುಂದಾಗದೆ ಕೂಡಲೇ ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾರೆ ಶ್ರವಣ ತಜ್ಞ ಡಾ. ಎಂ.ಎಸ್‌.ಜಿ.ನಾಯಕ್‌.

ಪಟಾಕಿ ಹೊಡೀಬೇಡಿ ಪ್ಲೀಸ್‌: ದೀಪಾವಳಿ ಹಿನ್ನೆಲೆಯಲ್ಲಿ ನಗರದಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸುವುದರಿಂದ ಮೂಕ ಪ್ರಾಣಿಗಳು ತೊಂದರೆ ಅನುಭವಿಸುತ್ತವೆ. ಪಟಾಕಿ ಸದ್ದಿಗೆ ಭಯಭೀತಗೊಳ್ಳುವ ಶ್ವಾನ ಮತ್ತಿತರ ಸಾಕುಪ್ರಾಣಿಗಳು ಅಸಹಜ ರೀತಿಯಲ್ಲಿ ವರ್ತಿಸುತ್ತವೆ. ಜತೆಗೆ ಜೋರಾದ ಶಬ್ದದಿಂದ ಶ್ವಾನಗಳು ಕಿವಿಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಳೆದ ಬಾರಿ ಪಟಾಕಿ ಶಬ್ದದಿಂದ ಭಯಭೀತಗೊಂಡು ಮೂರು ದಿನ ಊಟ ಬಿಟ್ಟಿದ್ದ ಶ್ವಾನವೊಂದು ಮೃತಪಟ್ಟ ಘಟನೆ ಕೋರಮಂಗಲದಲ್ಲಿ ವರದಿಯಾಗಿತ್ತು. ಆ ಹಿನ್ನೆಲೆಯಲ್ಲಿ “ಪಟಾಕಿ ಹೊಡೆಯಬೇಡಿ ಪ್ಲೀಸ್‌’ ಅಭಿಯಾನದಡಿ ಪ್ರಾಣಿದಯಾ ಸಂಘಗಳು, ಪ್ರಾಣಿಪ್ರಿಯರು ಕಳೆದ ಎರಡು ಮೂರು ದಿನಗಳಿಂದ ನಗರದ ವಿವಿಧೆಡೆ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

ದುರಂತದ ಕಥೆಗಳು
ನಮ್ಮೂರ ಬಹುತೇಕರು ಪಟಾಕಿ ಹೊಡೆಯೋಲ್ಲ ಕಳೆದ ವರ್ಷ ಊರಿನವರೆಲ್ಲರೂ (ದುಗನೂರು) ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲು ಸಜ್ಜಾಗಿದ್ದೇವು. ಹೀಗಾಗಿ ಮಗ ಭೀಮಾರೆಡ್ಡಿ (12) ಪಟಾಕಿ ತಂದು ಕೊಟ್ಟಿದ್ದೆ. ಹಬ್ಬದ ಮೊದಲ ದಿನ ಸಂಜೆ ಲಕ್ಷ್ಮೀ ಪಟಾಕಿ ಹೊಡೆಯಲು ಹೋಗಿ ಅದರ ಮದ್ದಿನ ಪುಡಿ ನೇರವಾಗಿ ಅವರ ಕಣ್ಣಿಗೆ ಸಿಡಿಯಿತು. ಮೊದಲು ಜಿಲ್ಲಾಸ್ಪತ್ರೆ ನಂತರ ಬೆಂಗಳೂರಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದೇನೆ. ಆದರೆ ಇಂದಿಗೂ ಅವರ ಎಡಭಾಗದ ಕಣ್ಣು ಒಂದಿಷ್ಟು ಮಂಜಾಗಿ ಕಾಣುತ್ತಂತೆ. ಈ ಘಟನೆಯಿಂದ ನಮ್ಮೂರಿನಲ್ಲಿ ಈ ಬಾರಿ ಶೇ.90ರಷ್ಟು ಜನರು ಪಟಾಕಿ ಹೊಡೆಯುತ್ತಿಲ್ಲ ಎನ್ನುತ್ತಾರೆ.
-ರಮೇಶ್‌, ಗಾಯಾಳು ತಂದೆ, ರಾಯಚೂರು  

ತನ್ನದಲ್ಲದ ತಪ್ಪಿಗೆ ಇಂದಿಗೂ ಶಿಕ್ಷೆ ಖಾಸಗಿ ಸಂಸ್ಥೆಯಲ್ಲಿ ಟೈಪಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದು, ದೀಪಾವಳಿ ಹಬ್ಬದಂದು ಯಾರೂ ಹಚ್ಚಿನ ರಾಕೆಟ್‌ ನೇರವಾಗಿ ಬಂದು ನನ್ನ ಕಣ್ಣಿಗೆ ಬಡಿಯಿತು. ಸುಮಾರು ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದೇನೆ. ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ದಯವಿಟ್ಟು ಪಟಾಕಿಗಳನ್ನು ಮತ್ತೂಬ್ಬರಿಗೆ ತೊಂದರೆಯಾಗದಂತೆ ಸಿಡಿಸಿ.
-ಶಾರುಖ್‌, ಗಾಯಾಳು, ಆಡುಗೋಡಿ  

ಆಸ್ಪತ್ರೆಯಲ್ಲಿಯೇ ದೀಪಾವಳಿ ಕಳೆದೆವು ಹತ್ತು ವರ್ಷಗದ ಮಗ ಹಠ ಹಿಡಿದು ನನ್ನಿಂದ ಹಣ ಪಡೆದು ಪಟಾಕಿ ಖರೀದಿ ಮಾಡಿದ. ಆದರೆ, ದುರದೃಷ್ಟವಶಾತ್‌ ಹಾಳಾಗಿರುವ ಪಟಾಕಿಯನ್ನು ಖರೀದಿಸಿದ್ದ. ಅದನ್ನು ಹಚ್ಚಿಸಿದಾಗ ಅದರ ಪುಡಿ ಅವರ ಮುಖಕ್ಕೆ ಸಿಡಿದು ಚರ್ಮ ಹಾಗೂ ಕಣ್ಣಿಗೆ ಹಾನಿಯಾಗಿದೆ. ಸುಮಾರು ಎರಡು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಅವನಿಗೆ ಚಿಕಿತ್ಸೆ ಕೊಡಿಸಲಾಗಿದೆ. ನಾವು ಕೂಲಿ ಮಾಡಿ ಜೀವನ ಸಾಗಿಸುವವರು, 10 ರೂ.ಗಳ ಪಟಾಕಿ ಸಾವಿರಾರು ರೂ.ಗಳನ್ನು ಕಿತ್ತು ನೋವು ಕೊಟ್ಟಿದೆ. ದಯವಿಟ್ಟು ಪೋಷಕರು ಮಕ್ಕಳು ಅತ್ತರೂ, ಹಠ ಮಾಡಿದರೂ ಪಟಾಕಿ ಕೊಡಿಸಬೇಡಿ.
-ವೆಂಕಟೇಶ್‌, ಗಾಯಾಳು ತಂದೆ, ಆನೇಕಲ್‌

ಮಾಲಿನ್ಯ ನಿಯಂತ್ರಣಕ್ಕಾಗಿ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಲಿದ್ದೇವೆ. ಈ ಸಂಬಂಧ ದೆಹಲಿ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಡಾ.ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ

* ವೆಂ.ಸುನೀಲ್‌ಕುಮಾರ್‌/ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.