CONNECT WITH US  

ಸಿಎಂ ಪರಿಹಾರ ನಿಧಿಗೆ 15 ಲಕ್ಷ ರೂ. ದೇಣಿಗೆ

ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್‌) ಲಿಮಿಟೆಡ್‌ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15 ಲಕ್ಷ ರೂ. ದೇಣಿಗೆ ನೀಡಿದೆ.

ಪರಿಹಾರದ ಚೆಕ್ಕನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೆಐಒಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಸುಬ್ಬರಾವ್‌, ಹಣಕಾಸು ನಿರ್ದೇಶಕ ಎಸ್‌.ಕೆ.ಗೋರೈ ಹಾಗೂ ಹಿರಿಯ ಅಧಿಕಾರಿಗಳು ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಎಂ.ವಿ.ಸುಬ್ಬರಾವ್‌ ಅವರು ಮಾತನಾಡಿ, ಕೆಐಒಸಿಎಲ್‌ ವತಿಯಿಂದ ರಾಯಚೂರು ಜಿಲ್ಲೆಯ 30 ಸರ್ಕಾರಿ ಶಾಲೆಗಳಿಗೆ ಸೋಲಾರ್‌ ಬೇಸ್ಡ್ ಸ್ಮಾರ್ಟ್‌ ಕ್ಲಾಸಸ್‌ ಆಗಿ ಪರಿವರ್ತಿಸಲಾಗಿದೆ. ಇದಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪನಿ ಸಿಎಸ್‌ಆರ್‌ ಚಟುವಟಿಕೆಗಳಿಗಾಗಿ 25ರಿಂದ 30 ಲಕ್ಷ ರೂ. ಖರ್ಚು ಮಾಡಲಿದೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆಐಒಸಿಎಲ್‌ ವ್ಯವಸ್ಥಾಪಕ ಮಂಡಳಿ ಸಿಎಸ್‌ಆರ್‌ ಚಟುವಟಿಕೆಯಡಿ ಹಾಕಿಕೊಂಡಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Trending videos

Back to Top