ಟ್ರಯಾಂಗಲ್‌ ಲವ್‌:ಸ್ನೇಹಿತನನ್ನೇ ಬರ್ಬರವಾಗಿ ಇರಿದು ಕೊಂದ! | Udayavani - ಉದಯವಾಣಿ
   CONNECT WITH US  
echo "sudina logo";

ಟ್ರಯಾಂಗಲ್‌ ಲವ್‌:ಸ್ನೇಹಿತನನ್ನೇ ಬರ್ಬರವಾಗಿ ಇರಿದು ಕೊಂದ!

ದೊಡ್ಡಬಳ್ಳಾಪುರ: ತ್ರಿಕೋಣ ಪ್ರೇಮ ಕಥೆಯೊಂದು ಯುವಕನೊಬ್ಬನ ಹತ್ಯೆಗೆ ಕಾರಣವಾದ ದಾರುಣ ಘಟನೆ ಪ್ರೇಮಿಗಳ ದಿನಾಚರಣೆಯ ಮುನ್ನಾದಿನ ಕಂಚಿಗನಾಳ ಎಂಬಲ್ಲಿ ನಡೆದಿದೆ.

ವರದಿಯಾದಂತೆ  ಮಂಗಳವಾರ ಸಂಜೆ ಸಂತೋಷ್‌ ಎಂಬಾತ ಸ್ನೇಹಿತ ಹರೀಶ್‌ ಎಂಬಾತನಿಗೆ ಬರ್ಬರವಾಗಿ ಇರಿತು ಹತ್ಯೆಗೈದಿದ್ದಾನೆ. ಇಬ್ಬರೂ ಒಬ್ಬಳೇ ಹುಡುಗಿಯನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗಿದೆ.

ಕೃತ್ಯ ಎಸಗಿದ ಬಳಿಕ ಸಂತೋಷ್‌ ಪರಾರಿಯಾಗಿದ್ದಾನೆ.ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕತ್ತಿನ ಭಾಗ ಮತ್ತು ಹೊಟ್ಟೆಯ ಭಾಗಕ್ಕೆ ಬರ್ಬರವಾಗಿ ಇರಿದುಕೊಲೆಗೈದಿರುವುದು ಕಂಡು ಬಂದಿದೆ. ತೀವ್ರ ರಕ್ತಸ್ರಾವದಿಂದ ಹರೀಶ್‌ ಸಾವನ್ನಪ್ಪಿದ್ದಾನೆ . 

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Trending videos

Back to Top