CONNECT WITH US  

ಅಪಘಾತ: ಪಾದಚಾರಿ ಸೇರಿ ಐವರಿಗೆ ಗಾಯ

ನೆಲಮಂಗಲ: ಅಜಾಗರೂಕತೆ ಹಾಗೂ ಅತಿ ವೇಗದಲ್ಲಿ ಚಾಲಕನೋರ್ವ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ಪಾದಚಾರಿ ಸೇರಿದಂತೆ ಐವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಯಂಟಗಾನಹಳ್ಳಿ ಬಳಿ ನಡೆದಿದೆ.  

ಮಂಜುನಾಥ್‌ (40)ಅಪಘಾತಕ್ಕೀಡಾದ ಪಾದಚಾರಿ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ  ಜೂಮ್‌ ಕಾರು ಏಕಾಏಕಿ ಪಾದಚಾರಿಗೆ ಡಿಕ್ಕಿಯೊಡೆದ. ಬಳಿಕ, ಕಾರು ಸರ್ವಿಸ್‌ ರಸ್ತೆಗೆ ಜಿಗಿದು ಪಲ್ಟಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಕಾರು ಹತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದು ಕಾರಿನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಂತರ ಕಾರು ಚಾಲಕನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ.

ಕಾರು ಅಪಘಾತದಿಂದ ಪಾದಚಾರಿ ಮಂಜುನಾಥ್‌ಗೆ ಗಂಭೀರ ಗಾಯವಾಗಿತ್ತು. ಈ ವೇಳೆ ರಕ್ತಸ್ರಾವದಿಂದ ನರಳಾಡುತ್ತಿದ್ದ ಆತನನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ನೆಲಮಂಗಲ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮಾನವೀಯತೆ: ಅಪಘಾತವಾದ ವೇಳೆ ಗಾಯಾಳು ಮಂಜುನಾಥ್‌ ರಕ್ತಸ್ರಾವದಿಂದಾಗಿ ನರಳಾಡುತ್ತಿದ್ದರು.

ಆದರೆ, ಸಹಾಯ ಮಾಡಿದರೆ ಪ್ರಕರಣ ನಮ್ಮ ಮೇಲೆ ಬರುತ್ತದೆ ಎಂದು ಭಯಪಡುತ್ತಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರೇ ವಿನಹಃ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಸ್ಥಳೀಯರೊಬ್ಬರು ಮಂಜುನಾಥ್‌ರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಉದಯವಾಣಿ ಸಲಹೆ: ಅಪಘಾತದಲ್ಲಿ ಗಾಯಗೊಂಡಿರುವವರು ಯಾರೇ ಆಗಲಿ ಮೊದಲು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿ. ಗಾಯಾಳುಗಳ ನರಳಾಟವನ್ನು ವಿಡಿಯೋ ಮಾಡದಿರಿ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ವೈದ್ಯರು ಸೇರಿದಂತೆ ಪೊಲೀಸರು ನಿಮ್ಮ ಯಾವುದೇ ಮಾಹಿತಿ ಪಡೆಯುವುದಿಲ್ಲ. ಪ್ರಾಣ ರಕ್ಷಿಸಿದ ನಿಮ್ಮ ಕಾಳಜಿಗೆ ಪೊಲೀಸರೂ ಬಹುಮಾನ ನೀಡಲಿದ್ದಾರೆ.    

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top