CONNECT WITH US  

ಸಾರ್ವಜನಿಕರು ಸಹಕರಿಸಲು ಆರ್‌ಟಿಒ ಮನವಿ

ನೆಲಮಂಗಲ: ಪ್ರಾದೇಶಿಕ ಸಾರಿಗೆ ಇಲಾಖೆ ಹಂತ ಹಂತವಾಗಿ ಗಣಕೀಕರಣ ಗೊಳ್ಳುತ್ತಿದ್ದು ವಾಹನ್‌ 1 ತಂತ್ರಾಂಶದಿಂದ ವಾಹನ್‌ 4 ಸಾಫ್ಟ್ವೇರ್‌ಗೆ ಉನ್ನತೀಕರಣಗೊಳ್ಳುತ್ತಿರುವುದರಿಂದ ಬುಧವಾರದಿಮದ ಶುಕ್ರವಾರದವರೆಗೆ ಕಚೇರಿಯ ಟ್ರೆಸರಿಕೌಂಟರ್‌ ಮತ್ತು ವಾಹನ್‌ 1ಕ್ಕೆ ಸಂಬಂಧಿಸಿ ಯಾವುದೇ ಕೆಲಸಗಳು ಕಾರ್ಯನಿರ್ವಹಿಸಿರುವುದಿಲ್ಲಾ, ಸದರಿ ದಿನಗಳಂದು ಕೇಂದ್ರ ಕಚೇರಿಯಲ್ಲಿ ಡಾಟಾಬೇಸ್‌ ಪೋರ್ಟಿಂಗ್‌ ಕಾರ್ಯನಡೆಯುತ್ತದೆ.

ಆ.13 ರಿಂದ ವಾಹನ್‌-4 ಸಾಫ್ಟ್ವೇರ್‌ ಅನುಷ್ಠಾನಗೊಂಡು ವಾಹನಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳು ಆರಂಭಗೊಳ್ಳುತ್ತವೆ, ವಾಹನ್‌ 4 ಸಾಫ್ಟ್ವೇರ್‌ನಲ್ಲಿ ಹೊಸದಾಗಿ ತೆರಿಗೆ ಮತ್ತು ಶುಲ್ಕ ಭರಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲದ ಕಾರಣ ಅಪ್‌ಲೋಡ್‌ ಮಾಡಿಕೊಳ್ಳುವಾಗ ಗಮನಿಸಿ ಜಾಗರೂಕತೆಯಿಂದ ಅಪ್‌ಲೋಡ್‌ಮಾಡಿಕೊಳ್ಳತಕ್ಕದ್ದು,

ಇದರಿಂದಾಗಿ ಕೆಲವು ತಾಂತ್ರಿಕ ದೋಷಗಳು ಮತ್ತು ನ್ಯೂನತೆಗಳು ನಿರ್ಮಾಣವಾಗಿ ಕೆಲಸದಲ್ಲಿ ವಿಳಂಬವಾಗಬಹುದು ಆದ್ದರಿಂದ ಸಾರ್ವಜನಿಕರು ಕಚೇರಿಯೊಂದಿಗೆ ಸಹಕರಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮ್‌ಬಾಬಾ ಮುದ್ದೇಬಿಹಾಳ್‌ ಮನವಿ ಮಾಡಿದ್ದಾರೆ.

Trending videos

Back to Top