CONNECT WITH US  

ಟೈಯರ್‌ ಸ್ಫೋಟ: ಸರಣಿ ಅಪಘಾತ

ನೆಲಮಂಗಲ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಮಹದೇವಪುರ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿ ಇಬ್ಬರೂ ತೀರ್ವ ಗಾಯಗೊಂಡು, ನಾಲ್ಕು ವಾಹನ ಜಖಂ ಆಗಿರುವ ಘಟನೆ ಸಂಭವಿಸಿದೆ. ದಯಾನಂದ್‌(30) ರಾಜಣ್ಣ (26) ಅಪಘಾತದಲ್ಲಿ ಗಾಯಗೊಂಡವರು. ಇಬ್ಬರು ವ್ಯಕ್ತಿಗಳು ಗುಡೇಮಾರನಹಳ್ಳಿ ಕಡೆಯಿಂದ ನೆಲಮಂಗಲ ಪಟ್ಟಣದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ದುರ್ಘ‌ಟನೆ ಸಂಭವಿಸಿದೆ.

ಘಟನೆ ವಿವರ: ಮಂಗಳವಾರ ಬೆಳ್ಳಗ್ಗೆ  ಕುಣಿಗಲ್‌ಕಡೆಯಿಂದ ಕಾರ್ಖಾನೆಗಳಿಗೆ ಇಂಡಸ್ಟ್ರೀಯಲ್‌ ಗ್ಯಾಸ್‌ ಖಾಲಿ ಸಿಲಿಂಡರ್‌ಗಳನ್ನು ತುಂಬಿಕೊಂಡು ನೆಲಮಂಗಲದ ಕಡೆಗೆ ಚಲಿಸುತ್ತಿದ್ದ ಸರಕು ಸಾಗಣೆ ವಾಹನದ ಹಿಂಬದಿಯ ಚಕ್ರ ಏಕಾಏಕಿ ಸ್ಫೋಟಗೊಂಡ ಪರಿಣಾಮ ಗ್ಯಾಸ್‌ಸಿಲಿಂಡರ್‌ ಸಾಗಿಸುತಿದ್ದ ಕ್ಯಾಂಟರ್‌(ಮಿನಿಲಾರಿ) ರಸ್ತೆಗೆ ಹುರುಳಿಬಿದಿದೆ, ಈ ವೇಳೆಯಲ್ಲಿ ಲಾರಿಯಲ್ಲಿದ್ದ ಸಿಲಿಂಡರ್‌ಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮ ದುರ್ಘ‌ಟನೆ ಸಂಭವಿಸಿದೆ.

ಪ್ರಾಣಾಪಾಯವಾಗಿಲ್ಲ: ಲಾರಿ ರಸ್ತೆಗುರುಳಿದ್ದನ್ನು ವೀಕ್ಷಿಸುತ್ತಲೆ ಮುಂದೆ ಸಾಗುತ್ತಿದ್ದ ಹೆದ್ದಾರಿ ಪ್ರಯಾಣಿಕರಲ್ಲಿ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುತಿದ್ದ ವೇಳೆ ಕುಣಿಗಲ್‌ಕಡೆಯಿಂದ ಅತಿ ವೇಗವಾಗಿ ಬಂದ ಖಾಸಗಿ ಬಸ್‌ ಮುಂಭಾಗದಲಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಅದೇ ಕಾರು ಮತ್ತೂಂದು ಕಾರಿಗೆ ಡಿಕ್ಕಿಹೊಡೆದು ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯವಾಗಿಲ್ಲ ದಯಾನಂದ್‌ ಮತ್ತು ರಾಜಣ್ಣ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಪಟ್ಟಣ ಸಂಚಾರ ಪೊಲೀಸ್‌ಠಾಣೆಯಲ್ಲಿ ದಾಖಲಾಗಿದೆ.

ಟ್ರಾಫಿಕ್‌ ಜಾಮ್‌:  ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಳಗ್ಗಿನ ಹೊತ್ತನಲ್ಲಿ ಸರಣಿ ಅಪಘಾತ ಸಂಭವಿಸಿ ಗ್ಯಾಸ್‌ ಸಿಲಿಂಡರ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು,

ಕೆಲಹೊತ್ತು ವಾಹನಗಳ ದಟ್ಟಣೆ ಹೆಚ್ಚಾದ ಪರಿಣಾಮ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸರು ಹೈರಾಣದರು, ಸಂಚಾರಿ ಸಮಸ್ಯೆಯಿಂದಾಗಿ ಸಾರ್ವಜನಿಕರು ಕೆಲ ಹೊತ್ತ ರಸ್ತೆಯಲ್ಲಿ ಕಾಯ್ದುಕುಳಿತುಕೊಳ್ಳುವಂತಾಗಿತ್ತು.

Trending videos

Back to Top