CONNECT WITH US  

ಬಮೂಲ್‌ಗೆ ಸರ್ಕಾರ ಸಹಕರಿಸಿಲ್ಲ

ನೆಲಮಂಗಲ: ರಾಜ್ಯದಲ್ಲಿ ಇದೂವರೆಗೂ ಆಡಳಿತ ನಡೆಸಿರುವ ಸರ್ಕಾರಗಳು ಬಮೂಲ್‌ ಸಂಸ್ಥೆಗೆ ಯಾವುದೇ ಯೋಜನಾ ಬದ್ಧವಾದ ಅನುಕೂಲಗಳನ್ನು ಕಲ್ಪಿಸುವಲ್ಲಿ ವಿಫ‌ಲವಾಗಿವೆ ಎಂದು ಬಮೂಲ್‌ ನಿರ್ದೇಶಕ ತಿಮ್ಮರಾಜು
ಆರೋಪಿಸಿದರು.

ಮುದ್ದಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಬಮೂಲ್‌ ಕಲ್ಯಾಣ ನಿಧಿಯಿಂದ ಹಾಲು ಉತ್ಪಾದಕ ಸದಸ್ಯರಿಗೆ ಮತ್ತು ಅವರ ಕುಟುಂಬಕ್ಕೆ ಸಹಾಯವಾಗಲೆಂದು ಹಲವಾರು ಯೋಜನೆ ಜಾರಿಗೆತರಲಾಗಿದೆ, ಸರಕಾರ ಮತ್ತು ಒಕ್ಕೂಟ ದಿಂದ ಜಾರಿಯಾಗಿರುವ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಸಹಕಾರ ಸಂಘಗಳಿಗೆ ಸದಸ್ಯರೇ ಧಣಿಗಳು, ಅವರದೇ ಪರಮಾಧಿಕಾರ, ಪ್ರತಿಯೊಂದಕ್ಕೂ ಸರ್ವಸದಸ್ಯರು ಆಗಮಿಸಿ ಎಲ್ಲರೂ ನಿರ್ಣಯ ಕೈಗೊಳ್ಳಲಾಗುವುದಿಲ್ಲ ಎಂಬ ಕಾರಣಕ್ಕೆ ತಮ್ಮಗಳ ಪರವಾಗಿ ನಿರ್ದೇಶಕರನ್ನು ಆಯ್ಕೆ
ಮಾಡಲಾಗಿರುತ್ತದೆ. ಇಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳು ನಿಮ್ಮ ಪರವಾಗಿ ಅವರು ತೆಗೆದುಕೊಳ್ಳುತ್ತಾರೆ. ಬಮೂಲ್‌ ಒಕ್ಕೂಟದಿಂದ ವಿಮೆ ಯೋಜನೆ ಕೈಗೊಳ್ಳಲಾಗಿದ್ದು ರಾಸುಗಳಿಗೆ ಮತ್ತು ಅದರ ಮಾಲೀಕರಿಗೆ ಬೇರೆಯಾಗಿ
ಅತ್ಯಂತ ಕನಿಷ್ಠ ಮೊತ್ತ ಪಡೆದು ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತಿ¨ ಹೇಳಿದರು.

ಪ್ರಾಥಮಿಕ ಹಂತದಲ್ಲಿ ಕೇವಲ ಸಾವಿರದಷ್ಟು ಲೀಟರ್‌ ಹಾಲು ಮಾತ್ರ ಬಮೂಲ್‌ ಸಂಸ್ಥೆಗೆ ಬರುತಿತ್ತು ಆದರೆ ಪ್ರಸ್ತುತ ದಿನಕ್ಕೆ 15 ಲಕ್ಷ ಲೀಟರ್‌ ಹಾಲು ಬರುತ್ತಿದೆ, ಉತ್ಪಾದನೆಯಷ್ಟೇ ಮಾರುಕಟ್ಟೆಯಿದ್ದಲ್ಲಿ ಯಾವುದೇ ಸಮಸ್ಯೆ ಯಾಗುವುದಿಲ್ಲ ದಿನಕ್ಕೆ 10 ಲಕ್ಷ ಲೀಟರ್‌ ಹಾಲು ಬಿಕರಿಯಾಗುತ್ತಿದ್ದು ಮಿಕ್ಕ 5 ಲಕ್ಷ ಲೀ. ಹಾಲನ್ನು ಇತರ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ. ಆದ್ದರಿಂದ ತಾತ್ಕಾಲಿಕವಾಗಿ ಹಾಲಿನ ದರ ಕಡಿಮೆ ಮಾಡಲಾಗಿದೆ ಶೀಘ್ರದಲ್ಲೇ ಇದು ಸುಧಾರಣೆಯಾಗಿ ದರ ಹೆಚ್ಚಳ ವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಹಕಾರ ಸಂಘದ ಅಧ್ಯಕ್ಷ ದೇವರಾಜ್‌ ಮಾತನಾಡಿ, ಅತ್ಯಂತ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಹಾಲನ್ನು ರೈತರು ಉತ್ಪತ್ತಿಮಾಡುತ್ತಿರುವುದರಿಂದ ಸಂಸ್ಥೆ ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿದೆ. ಈ ವರ್ಷ ಸಂಘವು ನಿವ್ವಳ 8.5 ಲಕ್ಷ ಲಾಭಗಳಿಸಿದೆ ಎಂದು ಹೇಳಿದರು.

ಮುಖ್ಯಕಾರ್ಯನಿರ್ವಾಹಕ ಎಂ.ಕೆ.ಗಂಗಾಧರ್‌, ಶಿಬಿರದ ಉಪವ್ಯವಸ್ಥಾಪಕ ಡಾ.ಶಿವರಾಂ, ಡಾ.ಆದರ್ಶ್‌, ವಿಸ್ತರಣಾಧಿಕಾರಿ ಡಿ.ಅಶೋಕ್‌, ನಿರ್ದೇಶಕ ಟಿ.ಡಿ.ಲಕ್ಷ್ಮೀಕಾಂತ್‌, ಆರ್‌.ಎಚ್‌.ಹನುಮಂತರಾಯಪ್ಪ, ಗಂಗಣ್ಣ, ಅಕ್ಕಯಮ್ಮ, ಟಿ.ಎನ್‌.ಖಾದ್ರಿಪತಿ, ಗಂಗಾಧರಯ್ಯ, ಶ್ರೀನಿವಾಸ್‌, ಎಂ.ಸುರೇಶ್‌, ಶಿವಲಿಂಗಯ್ಯ, ಸದಸ್ಯ ಶಿವಕುಮಾರ್‌, ಚಂದ್ರಣ್ಣ, ಗೋಪಾಲ್‌, ಸಿಬ್ಬಂದಿ ತಿಮ್ಮೇಗೌಡ ಇದ್ದರು. 

Trending videos

Back to Top