CONNECT WITH US  

ವಿಮಾನ ನಿಲ್ದಾಣದಲ್ಲಿ 10 ದಿನ ಸ್ವಾತಂತ್ರ್ಯ ಸಂಭ್ರಮ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ದಿನಗಳ ಕಾಲ 72ನೇ ಸ್ವಾತಂತ್ರ ದಿನೋತ್ಸವ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ಶುಕ್ರವಾರ ಸೆಲಬ್ರೇಟ್‌ ಇಂಡಿಯಾ ಅಭಿಯಾನ ಆರಂಭಿಸಿದೆ.

ದೇಶದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂದಿನ ಹತ್ತು ದಿನಗಳ ಕಾಲ ಭಾರತದ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯದ ಸಮೃದ್ಧಿ ಅನಾವರಣಗೊಳ್ಳಲಿದೆ. ಆ.19ರಂದು ಉತ್ಸವ ಮುಕ್ತಾಯವಾಗಲಿದ್ದು, ಈ ಅವಧಿಯಲ್ಲಿ ವಿಮಾನ ನಿಲ್ದಾಣದ ವಾಯುಸಂಚಾರ ನಿಯಂತ್ರಣ (ಎಟಿಸಿ) ಗೋಪುರವನ್ನು ತ್ರಿವರ್ಣ ಬೆಳಕಿನಿಂದ ಅಲಂಕರಿಸಲಾಗುತ್ತದೆ.

ತ್ರಿವರ್ಣ ಧ್ವಜ ಮತ್ತು ಭಾರತದ ಭೂಪಟ ಮತ್ತು ಫ್ಲಾಗ್‌ಪಿನ್‌ಗಳೊಂದಿಗೆ ಸೆಲ್ಫಿಗೆ ಅವಕಾಶ, ದೇಶದ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಸೆಲಬ್ರೇಟ್‌ ಇಂಡಿಯಾ ವಸ್ತು ಸಂಗ್ರಹಾಲಯ ತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಇದರೊಂದಿಗೆ ಪ್ರಯಾಣಿಕರು ಆಕರ್ಷಕ ಉಡುಗೊರೆ ಹಾಗೂ ಗಿಫ್ಟ್ ಓಚರ್‌ ಗೆಲ್ಲುವ ಅವಕಾಶ ಕೂಡ ಇರಲಿದೆ.

Trending videos

Back to Top