CONNECT WITH US  

ಸೂಡಾನ್‌ ಪ್ರಜೆ ಬಂಧನ

ಬೆಂಗಳೂರು: ನಕಲಿ ವೀಸಾ ತೋರಿಸಿ ವಂಚಿಸಲು ಯತ್ನಿಸಿದ ಸೂಡಾನ್‌ ಪ್ರಜೆಯನ್ನು ವಿಲ್ಸನ್‌ಗಾರ್ಡನ್‌ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್‌ ವಹಾಬ್‌ ಮಹಮದ್‌ (25) ಬಂಧಿತ.

ಕೆಲ ವರ್ಷದ ಹಿಂದೆ ಆರೋಪಿ ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಆಗಮಿಸಿದ್ದು, ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಜು.16ರಂದೇ ಆರೋಪಿಯ ವೀಸಾ ಅವಧಿ ಮುಗಿದಿದ್ದು, ಇದುವರೆಗೂ ಅಕ್ರಮವಾಗಿ ವಾಸವಾಗಿದ್ದಾನೆ. ಈ ಹಿನ್ನೆಲೆಯಲ್ಲಿ ವಾಸದ ಪರವಾನಗಿ ನವೀಕರಣಗೊಳಿಸಲು ಶಾಂತಿನಗರದ ವಿದೇಶಿಗರ ಪ್ರಾದೇಶಿಕ ನೊಂದಣಿ ಕಚೇರಿಗೆ ಬಂದಿದ್ದ.

ಅಧಿಕಾರಿಗಳು ಈತನ ವಾಸದ ಪರವಾನಗಿ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಕೂಡಲೇ ಈ ಬಗ್ಗೆ ವಿಲ್ಸನ್‌ಗಾರ್ಡನ್‌ ಪೊಲೀಸರಿಗೆ ಮಾಹಿತಿ ನೀಡಿ, ವಿದೇಶಿಗರ ಪ್ರಾದೇಶಿಕ ನೊಂದಣಿ ಕಚೇರಿ ಸಿಬ್ಬಂದಿಯೇ ಈತನನ್ನು ವಿಲ್ಸನ್‌ಗಾರ್ಡನ್‌ ಪೊಲೀಸರಿಗೆ ಒಪ್ಪಿಸಿದ್ದಾರೆ.

Trending videos

Back to Top