CONNECT WITH US  

ನಟನೆ, ವೇಷಭೂಷಣ ಮಹತ್ವ ಅರಿಯಿರಿ

ನೆಲಮಂಗಲ: ರಂಗಭೂಮಿಯಲ್ಲಿ ನಟಿಸುವ ಕಲಾವಿದರು ನಟನೆ ಜೊತೆ ಪ್ರಸಾದನ ಮತ್ತು ವೇಷ ಭೂಷಣದ ಮಹತ್ವ ಮನಗಾಣಬೇಕು ಎಂದು ರಂಗ ಶಿಕ್ಷಣ ಕೇಂದ್ರದ ನಿರ್ದೇಶಕಿ ಡಾ.ಪುಷ್ಪಲತಾ ತಿಳಿಸಿದರು.

 ಪಟ್ಟಣದ ಸದಾಶಿವನಗರದ ರಂಗ ಶಿಕ್ಷಣ ಕೇಂದ್ರ ಮತ್ತು ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಡೆಯುತ್ತಿರುವ ರಂಗ ತರಬೇತಿ ಶಿಬಿರದಲ್ಲಿ ಆಯೋಜಿಸಲಾಗಿದ್ದ ಪ್ರಸಾದನ ಮತ್ತು ವೇಷಭೂಷಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

 ರಂಗದ ಮೇಲೆ ಕಲಾವಿದರ ಕಲಾತ್ಮಕ ನಿರೂಪಣೆಗಾಗಿ ಕೃತಿಕಾರರ ಕಲ್ಪನೆಯನ್ನು ಸಾಕಾರ ಗೊಳಿಸಲು ರಂಗಭೂ ನಿಯಮಗಳಿಗನುಗುಣವಾಗಿ ನಟ-ನಟಿಯರು ಅಭಿನಯಿಸುವಾಗ ಮುಖ ಭಾವನೆ, ದೈಹಿಕ ನಿಲುವು, ಚಲನ-ವಲನಗಳ ಹೊಂದಾಣಿಕೆ ರಂಗದ ಮೇಲೆ ಬೀಳುವ ಕಲಾತ್ಮಕ ಬೆಳಕನ್ನು ಸಮರ್ಪಕವಾಗಿ ಎದುರಿಸಲು ಪ್ರಸಾದನಾ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಹಾಗೆಯೇ, ರಂಗಭೂಮಿಯ ಪ್ರತಿಯೊಬ್ಬ ಕಲಾವಿದ ನಟನೆ ಜೊತೆ ಪ್ರಸಾದನೆ, ವಸ್ತ್ರಾಲಂಕಾರ, ಬೆಳಕು, ರಂಗಸಜ್ಜಿಕೆ, ಸಲಕರಣೆಗಳ ನಿರ್ವಹಣೆ ಬಗ್ಗೆ ತರಬೇತಿ ಪಡೆಯುವುದು ಬಹಳ ಮುಖ್ಯ ಎಂದು ಹೇಳಿದರು.

ತರಬೇತಿ: ಕಲಾವಿದರು ನಾಟಕದಲ್ಲಿ ಪಾತ್ರಗಳಿಗನುಗುಣವಾಗಿ ಪ್ರಸಾದನ (ಮೇಕಪ್‌) ಮಾಡುವುದು ಮತ್ತು ವಸ್ತ್ರಾಲಂಕಾರ ಮಾಡುವ ಬಗ್ಗೆ ದೇವರಾಜು ವಿಸ್ತೃತವಾಗಿ ತಿಳಿಸಿದರು, ವಿಶೇಷವಾಗಿ ತರಬೇತಿ ಪಡೆಯುತ್ತಿರುವ ಕಲಾವಿದರಿಂದಲೇ ರಾಜ, ರಾಣಿ, ಸೈನಿಕ, ಸೇವಕಿ, ಪುರುಷ ಪಾತ್ರದಿಂದ ಮಳೆಪಾತ್ರದ ಬದಲಾವಣೆ, ಮಾಡ್ರನ್‌ಹುಡುಗಿ, ಕಳ್ಳ, ಕಿತ್ತೂರು ರಾಣಿ, ಗೌಡ, ರಾಜಕಾರಣಿ, ರೈತ ಮುಂತಾದ ಪಾತ್ರಗಳು ಪ್ರಸಾಧನ ಮತ್ತು ವಸ್ತ್ರಾಲಂಕಾರದ ಮೂಲಕ ಮೂಡಿಬಂದವು. ಈ ಸಂದರ್ಭದಲ್ಲಿ ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು, ನಿರ್ದೇಶಕಿ ಪುಷ್ಪಲತಾ, ಸಹ ನಿರ್ದೇಶಕ ದೇವ ರಾಜು, ಅಂಜನಾದ್ರಿ ಕಲಾ ಟ್ರಸ್ಟ್‌ನ ದಿನೇಶ್‌, ಸ್ನಾತ ಕೋತ್ತರ ಡ್ರಾಮ ವಿದ್ಯಾರ್ಥಿ ನವೀನ್‌ಕುಮಾರ್‌, ಪತ್ರಕರ್ತ ಎಚ್‌.ಎಸ್‌.ವಿಜಯ್‌ಕುಮಾರ್‌, ಕಲಾದರಾದ ಕಿರಣ್‌, ಸಾಗರ್‌, ಮುನಿರಾಜು, ಭೂಮಿಕಾ, ಧರ್ಮೇಂದ್ರ, ಹರ್ಷಿತ್‌,ಭವ್ಯಾ, ಚಂದನಾ, ಲಿಖೀತಾ,ಅನುಷಾ ಮತ್ತಿತರರು ಉಪಸ್ಥಿತರಿದ್ದರು.


Trending videos

Back to Top