CONNECT WITH US  

ನಾಳೆ ಹಾಲಿನ ಬೆಲೆ ಇಳಿಕೆ ಖಂಡಿಸಿ ಪ್ರತಿಭಟನೆ

ದೇವನಹಳಿ: ಹಾಲಿನ ಬೆಲೆ ಇಳಿಸಿರುವುದನ್ನು ತಕ್ಷಣ ಕೈ ಬಿಡಬೇಕಿದ್ದು ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಇತರೆ ಶಾಲಾ ಮಕ್ಕಳಿಗೆ ಉಚಿತ ಹಾಲು ಪೂರೈಕೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎನ್‌.ವೀರಣ್ಣ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಾಂತ ರೈತ ಸಂಘದ ವತಿಯಿಂದ ಆ.28 ರಂದು ನಡೆಯುವ ಹಾಲು ಉತ್ಪಾದಕರ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಒಂದು ಲೀಟರ್‌ ಹಾಲಿಗೆ 50 ರೂ.,ನೀಡಬೇಕು ಮತ್ತು ಗ್ರಾಹಕರಿಗೆ ದುಬಾರಿಯಾಗದಂತೆ ಕೇಂದ್ರ-ರಾಜ್ಯ ಸರ್ಕಾರಗಳು 20 ರೂ., ಸಬ್ಸಿಡಿ ನೀಡಬೇಕು.

ರಾಜ್ಯದಲ್ಲಿಯೇ ಹಾಲಿನ ಪುಡಿ ಘಟಕ ನಿರ್ಮಿಸಬೇಕು. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಾವಿರಾರು ನೌಕರರಿಗೆ ಸಂಬಳ, ಹುದ್ದೆ ಕಾಯಂ ಮಾಡಬೇಕು ಎಂಬ ಮತ್ತಿತರ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಮುಂಭಾಗ ಆ.28 ರಂದು ಕರ್ನಾಟಕ ಪ್ರಾಂತ ರೈತ ಸಂಘ,

ಕರ್ನಾಟಕ ರಾಜ್ಯ ಹಾಲು ಉತ್ಪಾದಕರು, ನೌಕರರ ಹೋರಾಟ ಸಮಿತಿ ಪ್ರತಿಭಟನೆ ನಡೆಸಲಿವೆ ಎಂದರು. ತಾಲೂಕು ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ವಿ.ನಾರಾಯಣಸ್ವಾಮಿ, ಮುಖಂಡ ಹನುಮಂತರಾಯಪ್ಪ, ಗುರುಲಿಂಗಯ್ಯ, ಕೃಷ್ಣಪ್ಪ, ಸುಬ್ರಹ್ಮಣಿ, ನಂಜೇಗೌಡ ಇದ್ದರು.

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top